Advertisement
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿ ತಾಗಿ ಸದಸ್ಯರ ಹಲವು ಆರೋಪಗಳನ್ನು ಗಮನಿಸಿದ್ದೇನೆ. ಇದರ ಪರಿಶೀಲನೆಗೆ ಕ್ರಮ ಕೈಗೊಂಡಿದ್ದೇನೆ. ಕೆರೆ ತುಂಬಿಸುವುದು ಸೇರಿ ವಿವಿಧ ಕಾಮಗಾರಿ ಗಳನ್ನು ಕೇವಲ ಕಾಗದಗಳಲ್ಲಿ ತೋರಿಸುವ ಬದಲು, ಹಂತ ಹಂತದ ಕಾಮಗಾರಿ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಕಡ್ಡಾಯ ಮಾಡಲಾಗಿದೆ. ಅದೇ ಆಧಾರದಲ್ಲಿ ಬಿಲ್ ಪಾವತಿ ಮಾಡಲಾಗುತ್ತದೆ ಎಂದರು. 2016-17ಮತ್ತು 2017-18ರ ಸಾಲಿನಲ್ಲಿ ನದಿಗಳಿಂದ ನೀರನ್ನು ಎತ್ತಿ ಕೆರೆಗಳಿಗೆ ತುಂಬಿಸುವ ಯೋಜನೆಗಳಿಗಂದ ಕ್ರಮವಾಗಿ 197 ಮತ್ತು 266 ಕೆರೆಗಳನ್ನು ತುಂಬಿಸಲಾಗಿದೆ. ಕೆಲವೊಂದು ಕಡೆ ನೀರು ಲಿಫ್ಟ್ ಮಾಡಬೇಕಾಗಿದೆ. ಇದಕ್ಕೆ ವಿದ್ಯುತ್ ಅವಶ್ಯಕತೆ ಇದ್ದು, ಇದರ ನಿರ್ವಹಣೆ ಹೇಗೆ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ವಿದ್ಯುತ್ ವೆಚ್ಚ ಭರಿಸುವ ಚಿಂತನೆಯಿದೆ ಎಂದರು.