ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡ ತುಮ ಕೂರು ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ನಗರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ನೀರು ಚಿಕ್ಕತುಮಕೂರು ಕೆರೆಗೆ ಸೇರಿ, ಇಲ್ಲಿಗೆ ಹರಿಯುತ್ತಿರುವುದೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿ ನೀರು ಹರಿದ ಪರಿಣಾಮ ದೊಡ್ಡತುಮಕೂರು ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿವೆ. ನಗರಸಭೆ ವ್ಯಾಪ್ತಿ ಯಲ್ಲಿನ ಎಲ್ಲ ನೀರು ಒಳಚರಂಡಿ ಮೂಲಕ ಹರಿದು ಹೋಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತದೆ.
ಇದನ್ನೂ ಓದಿ:- ಮಕ್ಕಳ ದಿನಾಚರಣೆ: ಜವಾಹರಲಾಲ್ ನೆಹರು ಜನ್ಮಜಯಂತಿಯಂದು ಮುಖ್ಯಮಂತ್ರಿ ಸೇರಿ ಗಣ್ಯರ ಸ್ಮರಣೆ
ಕೊಳಚೆ ನೀರನ್ನು ಇಲ್ಲಿಂದ ಶುದ್ಧೀಕರಿಸಿ ಹೊರಬಿಡಲು ಯಂತ್ರಗಳನ್ನು ಸಹ ಅಳವಡಿಸಲಾ ಗಿದೆ. ಆದರೆ, ನಗರಸಭೆ ಅಧಿಕಾರಿ ಗಳ ನಿರ್ಲಕ್ಷ್ಯ ದಿಂದ ಒಳಚರಂಡಿ ನೀರನ್ನು ಶುದ್ಧೀ ಕರಣ ಮಾಡದೆ ಹೊರಗೆ ಹರಿದು ಬಿಡಲಾಗುತ್ತಿದೆ ಎಂದು ದೊಡ್ಡತುಮಕೂರು ಗ್ರಾಮದ ನಿವಾಸಿ ವಸಂತಕುಮಾರ್ ದೂರಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಗ ಳಲ್ಲಿ ಒಂದಾ ಗಿರುವ ದೊಡ್ಡತುಮಕೂರು ಕೆರೆ ತುಂಬಿ ದಶಕ ಗಳೇ ಕಳೆದಿತ್ತು. ಈ ಬಾರಿ ಕೆರೆ ಕೋಡಿ ಬಿದ್ದಿದೆ. ನಮ್ಮೂರಿನ ಕೆರೆಯ ನೀರು ಹೆಸರಘಟ್ಟ ಕೆರೆಯ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೋಗಲಿದೆ. ಕೆರೆಯ ನೀರನ್ನು ಹಸು, ಮೇಕೆ ಸೇರಿ ದಂತೆ ಯಾವುದೇ ಪ್ರಾಣಿ, ಪಕ್ಷಿಗಳು ಸಹ ಕುಡಿ ಯಲು ಸಾಧ್ಯವಾಗದಷ್ಟು ದುರ್ನಾತ ಬೀರುತ್ತಿವೆ. ಕೆರೆಗೆ ಕಲುಷಿತ ನೀರು ಬರಲು ಕಾರಣವಾಗಿರುವ ನಗರಸಭೆ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪರೀಕ್ಷೆಗೆ ನೀರು ರವಾನೆ: ದೊಡ್ಡತುಮಕೂರು ಕೆರೆಯಲ್ಲಿನ ನೀರು ಕಪ್ಪು ಬಣ್ಣಕ್ಕೆ ತಿರುಗಿರುವ ಬಗ್ಗೆ ಹಾಗೂ ನೀರು ಕಲುಷಿತ ವಾಗಿದೆಯೇ ಎನ್ನುವ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಜಿÇÉಾ ಕುಡಿಯುವ ನೀರಿನ ಮಾದರಿ ಪರೀûಾ ಪ್ರಯೋಗಾಲಯಕ್ಕೆ ಕಳುಸಿಲಾಗಿದೆ ಎಂದು ದೊಡ್ಡತುಮಕೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.