Advertisement
ಇಷ್ಟಕ್ಕೂ ಕೋಡಿ ಭಾಗದಲ್ಲಿ ಜಲ್ಲಿಕಲ್ಲು ತಂದು ಸುರಿದು, ಹೊಂಡ ತೆಗೆದು ಅದೆಷ್ಟು ಸಮಯವಾಯಿತೋ ಗೊತ್ತಿಲ್ಲ. ಸ್ಥಳೀಯರನ್ನು ಕೇಳಿದರೆ ಕೆಲಸಗಾರರು ಎಲ್ಲೋ ಹೋಗಿದ್ದಾರೆ, ಇಷ್ಟೇ ಕೆಲಸ ನಡೆದದ್ದು ಎಂದು ತೋರಿಸುತ್ತಾರೆ. ಕೋಡಿಯಲ್ಲೊಂದು ಟ್ಯಾಂಕಿ ಕಾಮಗಾರಿ ಪೂರ್ಣವಾದರೆ ಕುಂದಾಪುರದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ಆಶಾಭಾವದಲ್ಲಿದ್ದಾರೆ. ಆದರೆ ಕಾಮಗಾರಿಯ ನಿಧಾನಗತಿ ಮಾತ್ರ ಜನರಿಗೆ ಬೇಸರ ತರಿಸಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ, ವಾಣಿಜ್ಯಉಪಯೋಗಕ್ಕೆ ದಿನದ 24 ತಾಸು ನೀರು ಒದಗಿಸಲು ಯೋಜನೆಯ ಕಾಮಗಾರಿ ಆಗುತ್ತಿದೆ. 23.1 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲದಿಂದ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ (ಜಲಸಿರಿ) ಮೂಲಕ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಕಲ್ಕತ್ತಾದ ಮೆ| ಜಿ.ಕೆ. ಡಬ್ಲ್ಯೂಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಕಾಮಗಾರಿಗೆ ಟೆಂಡರ್ ಮಂಜೂರಾಗಿದೆ. ಒಟ್ಟು ಅವಧಿ 25 ತಿಂಗಳು. ಆದ್ದರಿಂದ ಆದಷ್ಟು ಶೀಘ್ರ ಕಾಮಗಾರಿ ಮುಗಿಸಬೇಕಿದೆ. ಕಾಮಗಾರಿ ಮುಗಿದ ನಂತರ 96 ತಿಂಗಳು ಅಂದರೆ 9 ವರ್ಷ ಅದರ ನಿರ್ವಹಣೆ ಹೊಣೆಯೂ ಕಾಮಗಾರಿ ನಿರ್ವಹಿಸಿದ ಸಂಸ್ಥೆಯದ್ದೇ ಆಗಿರುತ್ತದೆ. ಹಾಗಾಗಿ ಕಾಮಗಾರಿಗೆ 23.1 ಕೋ.ರೂ. ನೀಡಿದ್ದರೆ ಅದರ ನಿರ್ವಹಣೆಗೆ ಎಂದೇ 12.4 ಕೋ.ರೂ. ನೀಡಲಾಗುತ್ತಿದೆ. ಒಟ್ಟು 35.5 ಕೋ.ರೂ. ವೆಚ್ಚದ ಕಾಮಗಾರಿ ಇದಾಗಿದೆ.
Related Articles
Advertisement
ಪೈಪ್ಲೈನ್ಕೋಡಿಯಿಂದ ನೀರಿನ ಯೋಜನೆಗಾಗಿ ಭಾರೀ ಗಾತ್ರದ ಪೈಪ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಗಾತ್ರದ ಪೈಪ್‌ಗಳನ್ನು ತಂದು ಹಾಕಲಾಗಿದ್ದು ರಸ್ತೆ ಪಕ್ಕ ಜೆಸಿಬಿ ಮೂಲಕ ಕಣಿ ತೆಗೆದು ಪೈಪ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ತರಾತುರಿಯಲ್ಲಿ ಆಗುತ್ತಿದೆ
ಸಂಗಮ್ ಬಳಿಯ ಟಾಂಕಿ ರಚನೆ ಕಾಮಗಾರಿ ಚೆನ್ನಾಗಿ ನಡೆದು ಪೂರ್ಣ ಹಂತಕ್ಕೆ ತಲುಪಿದೆ. ಕೋಡಿ ಕಾಮಗಾರಿ ಕೂಡಾ ಆಗುತ್ತಿದೆ. ಪೈಪ್‌ಲೈನ್ ರಚನೆ ಕಾರ್ಯ ತರಾತುರಿಯಲ್ಲಿ ನಡೆಯುತ್ತಿದೆ. ಜನರ ಉಪಯೋಗಕ್ಕಾಗಿ ಕುಡಿಯುವ ನೀರಿನ ಬೃಹತ್ ಯೋಜನೆಯಾದ ಕಾರಣ ಒಂದಷ್ಟು ಗೊಂದಲ ಸಹಜ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ — ಲಕ್ಷ್ಮೀ ಮಚ್ಚಿನ