ಶಿಡ್ಲಘಟ್ಟ: ಎತ್ತಿನಹೊಳೆ ಅಥವಾ ಎಚ್.ಎನ್.ವ್ಯಾಲಿ ಯೋಜನೆಯಿಂದ ಮಂಚನಬೆಲೆಯ ಎರಡು ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಪ್ರಥಮ ಆದ್ಯತೆ ನೀಡಿದ್ದೇನೆ. ಎಚ್.ಎನ್. ವ್ಯಾಲಿಯಿಂದ ದಿಬ್ಬೂರು ಪಂಚಾಯ್ತಿ ಒಂದರಲ್ಲೇ ಏಳು ಕೆರೆಗಳು ತುಂಬುತ್ತಿವೆ. ಇನ್ನು ಮಂಚನಬೆಲೆಯಲ್ಲೂ ಕೆರೆ ತುಂಬಿಸುವ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿ ಸಲು ವಿಶೇಷ ಕ್ರಮವಹಿಸಲಾಗಿದೆ. 5,000 ಜನರಿಗೆ ವಸತಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದು ವರ್ಷದಲ್ಲಿ ಮನೆಗಳು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಲಭ್ಯ ವಿರುವ ಮತ್ತಷ್ಟು ಸರ್ಕಾರಿ ಜಾಗಗಳನ್ನು ವಸತಿ ಯೋಜನೆಗೆ ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ: ಜಿಲ್ಲೆಯಲ್ಲಿ ಕೈಗಾ ರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಜೊತೆಗೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಗೊಳಿಸಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಮತ್ತಷ್ಟು ಅಭಿವೃದಿ ದ್ಧಿಗೊಳಿಸಿ ಜಿಲ್ಲೆಯ ರೈತರಿಗೆ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಕೇಂದ್ರ ಸಚಿವ ನಿತಿನ್‌ಗಡ್ಕರಿ ಅವರು ದೇಶ ಉದ್ದಲಕ್ಕೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸುವ ಜೊತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಪ್ರತಿ ಹಳ್ಳಿಗೂ ರಸ್ತೆ ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಬಾಂಡ್: ರೇಷ್ಮೆ- ಹೆ„ನು ಗಾರಿಕೆ- ತರಕಾರಿ ಹೂಹಣ್ಣುಗಳ ಉತ್ಪಾದನೆಯಲ್ಲಿ ತೊಡಗಿ ಸಿಕೊಂಡಿರುವ ಜಿಲ್ಲೆಯ ರೈತರಿಗೆ ಸರ್ಕಾರ ಗಳಿಂದ ಅನೇಕ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಬದ್ಧನಾಗಿದ್ದು, ಜಿಲ್ಲೆಯ ಜನರ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಎತ್ತಿನಹೊಳೆ ಯೋಜನೆಗೆ ಸಾಕಷ್ಟು ಅನುದಾನ ಅಗತ್ಯ ವಾಗಿದ್ದು, ಈ ಸಂಬಂಧ ಬಾಂಡ್ ಬಿಡುಗಡೆ ಮಾಡಿ ಅನುದಾನ ಸಂಗ್ರಹಿಸು ವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದರು. ಸಂಸದ ಬಿ.ಎನ್.ಬಚ್ಚೇಗೌಡ, ಜಿಪಂ ಅಧ್ಯಕ್ಷ ಎಂ.ಬಿ . ಚಿಕ್ಕನರಸಿಂಹಯ್ಯ, ಡೀಸಿ ಆರ್.ಲತಾ, ಜಿಪಂ ಸಿಇಒ ಫೌಝೀಯಾ ತರುನ್ನುಮ್, ತಾಪಂ ಅಧ್ಯಕ್ಷ ರಾಮಸ್ವಾಮಿ, ಎಸ್ಪಿ ಮಿಥುನ್‌ಕುಮಾರ್, ಎಪಿಎಂಸಿ ಅಧ್ಯಕ್ಷ ನಾರಾಯಣ ಸ್ವಾಮಿ, ಭೂ ಅಭಿವೃದಿ œ ಬ್ಯಾಂಕಿನ ಅಧ್ಯಕ್ಷ ನಾಗೇಶ್, ಮುಖಂಡರಾದ ಕೆ.ವಿ. ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಪಟ್ರೇನಹಳ್ಳಿ ಮೋಹನ್, ವೆಂಕಟನಾರಾಯಣಪ್ಪ, ಗಂಗರೇ ಕಾಲುವೆ ಪ್ರಸಾದ್, ಮಂಚನಬಲೆ ಶ್ರೀಧರ್, ಎಂಎಫ್‌ಸಿ ನಾರಾಯಣಸ್ವಾಮಿ, ಗಿಡ್ನಹಳ್ಳಿ ನಾರಾಯಣ ಸ್ವಾಮಿ, ಆನಂದಮೂರ್ತಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
15.78 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ : ಧನ್ಯವಾದ ಸಲ್ಲಿಸಿದರು.ಗುಂಡ್ಲಗುರ್ಕಿ ಕ್ರಾಸ್‌ನಿಂದ ಆಕತಿಮ್ಮನಹಳ್ಳಿ, ಹೊಸಹಳ್ಳಿ, ಸೊಪ್ಪಹಳ್ಳಿ ಮಾರ್ಗವಾಗಿ ರಾಯಪ್ಪನಹಳ್ಳಿವರೆಗೆ 9.50 ಕಿ.ಮೀ., ಹೊಸೂರಿನಿಂದ ಕಂಡಕನಹಳ್ಳಿ, ಗಿಡ್ನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-234 ವರೆಗೆ 5.78 ಕಿ.ಮೀ., ಅಜ್ಜವಾರ, ತಿಪ್ಪಹಳ್ಳಿ ಮಾರ್ಗವಾಗಿ ಜಾತವಾರವರೆಗೆ 6.63 ಕಿ.ಮೀ. ಉದ್ದದ ರಸ್ತೆಗಳನ್ನು ಒಟ್ಟು 15.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು. ಜೊತೆಗೆ ಬಾಗೇಪಲ್ಲಿಯಲ್ಲಿ ಲೋಕೋಪಯೋಗಿ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಚಿಕ್ಕಬಳ್ಳಾಪುರದ ದಿಬ್ಬೂರು ಕೆರೆಗೆ ಬಾಗಿನ ಸಮರ್ಪಿಸಿದರು.