Advertisement

ಮಲಪ್ರಭಾ ನದಿಯಿಂದ 137 ಹಳ್ಳಿಗಳಿಗೆ ನೀರು ಪೂರೈಕೆ

06:03 PM Feb 09, 2022 | Team Udayavani |

ರಾಮದುರ್ಗ: ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಸದುದ್ದೇಶದಿಂದ 340 ಕೋಟಿ ಅನುದಾನದಲ್ಲಿ ಮಲಪ್ರಭಾ ನದಿಯಿಂದ 137 ಹಳ್ಳಿಗಳಿಗೆ ನೀರು ಪೂರೈಸುವ ಕಾರ್ಯವನ್ನು ಸದ್ಯದಲ್ಲಿಯೇ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

Advertisement

ತಾಲೂಕಿನ ಅವರಾದಿಯಲ್ಲಿ 22.34 ಲಕ್ಷ ರೂ., ರೇವಡಿಕೊಪ್ಪದಲ್ಲಿ 24.10 ಲಕ್ಷ ರೂ., ದೊಡಮಂಗಡಿಯಲ್ಲಿ 20.99 ರೂ., ರಂಕಲಕೊಪ್ಪದಲ್ಲಿ 10.64 ಲಕ್ಷ ರೂ., ಹಳೇ ತೋರಗಲ್ಲ ತಾಂಡಾದಲ್ಲಿ 10.69 ಲಕ್ಷ ರೂ., ಸರ್ವಾಪುರದಲ್ಲಿ 10.69 ಏರಟ್ಯಾಂಕ್‌ ಹಾಗೂ ಸುಳ್ಳಿಕೇರಿಯಲ್ಲಿ 10.69 ಲಕ್ಷ ರೂ. ಏರಟ್ಯಾಂಕ್‌ ಹಾಗೂ ರೂ.12 ಲಕ್ಷದಲ್ಲಿ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಒಟ್ಟು 1.22 ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ 340 ಕೋಟಿ ಯೋಜನೆಯ ಕಾಮಗಾರಿಗೆ ತಾಂತ್ರಿಕ ಸಮಿತಿ ಅನುಮೋದನೆ ಆಗಿದ್ದು, ಕ್ಯಾಬಿನೆಟ್‌ ಅನುಮೋದನೆಗೊಂಡ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಮಗಾರಿ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮುಂದೆ ನಿಂತುಕೊಂಡು ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರು ಏನಾದರು ಕಳಪೆ ಮಾಡುತ್ತಿರುವ ಬಗ್ಗೆ ಕಂಡುಬಂದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.

ಸರಕಾರ ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸುತ್ತಿದ್ದು, ಅದರ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ಗ್ರಾಮಸ್ಥರು ಮುಂದಾಗಬೇಕು. ದೊಡಮಂಗಡಿ ಗ್ರಾಮದಲ್ಲಿ ಶಾಲೆ ನಿರ್ಮಾಣ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Advertisement

ಘಟಕನೂರ ಗ್ರಾ.ಪಂ ಅಧ್ಯಕ್ಷ ಈರಪ್ಪ ಕೂಗಿ, ತುರುನೂರ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಗುದಗಿ, ಮುಖಂಡರಾದ ತಿರಕಪ್ಪ ಬಾಡಗಾರ, ನಿಂಗಪ್ಪ ಗುದಗಿ, ಸಿದ್ದನಗೌಡ ಪಾಟೀಲ, ಲಕ್ಷ್ಮಣ ಬಿಲ್ಲಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ರೀನಿವಾಸ ವಿಶ್ವಕರ್ಮ, ಮುರ್ತೋಜಿ ಪೆಂಡಾರಿ, ಮಹಮ್ಮದಗೌಸ್‌ ಖಾಜಿ ಸೇರಿದಂತೆ ಗ್ರಾಪಂ ಸದಸ್ಯರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next