Advertisement
ಪ್ರತೀ ದಿನವೂ ಬಿ.ಸಿ.ರೋಡ್ ನಗರದಲ್ಲಿ ಪೈಪ್‌ಲೈನ್ ಒಡೆದು ನೀರು ರಸ್ತೆಯಲ್ಲಿ ಹರಿದು ಕೃತಕ ನೆರೆ ಸೃಷ್ಟಿ ಜತೆಗೆ ಅಧಿಕಾರಿ ವರ್ಗಕ್ಕೆ ದೂರು ಹೋಗಿ ನೀರು ಸರಬರಾಜು ನಿಲುಗಡೆ ಆಗುತ್ತಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾರನ್ನೂ ಪ್ರಶ್ನಿ ಸುವಂತಿಲ್ಲ ಎಂಬ ಉತ್ತರ ಅಧಿಕಾರಿ ವರ್ಗದಿಂದ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಬಳಕೆದಾರರು.
ಜನರು ನೀರಿಗಾಗಿ ಸ್ಥಳೀಯವಾಗಿ ಕೆಲವೇ ಮಂದಿಯಲ್ಲಿ ಇರುವಂತಹ ಕುಡಿಯುವ ನೀರಿನ ಬಾವಿಗೆ ಎಡತಾಕುವಂತಾಗಿದೆ. ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಕೆಲವರು ಸ್ವಂತ ವಾಹನ ಬಳಸಿಕೊಂಡು ನದಿಯಿಂದ, ಕೆರೆಯಿಂದ, ನೀರು ಸಮರ್ಪಕವಾಗಿ ಸರಬರಾಜು ಆಗುವ ಟ್ಯಾಪ್‌ನಿಂದ ಪಾತ್ರೆಗಳಲ್ಲಿ ನೀರು ತುಂಬಿಸಿ ತರುವ ಮೂಲಕ ಸ್ವಯಂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನೀರು ಸರಬರಾಜು ಸಮಸ್ಯೆ 7ನೇ ದಿನಕ್ಕೆ ಮುಂದುವರಿದಿದೆ. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗ ತುರ್ತು ಕರ್ತವ್ಯದಲ್ಲಿದೆ. ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜನತೆ ಸಮಸ್ಯೆ ಶೀಘ್ರ ಪರಿಹಾರವಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.
Related Articles
ದಿನಂಪ್ರತಿ ಪೈಪ್ ಒಡೆದು ನೀರು ಪೋಲಾಗುತ್ತಿರುವುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯ ವೈಫಲ್ಯವನ್ನು ತೋರಿಸುವಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಕಾಂಕ್ರೀಟ್ ರಸ್ತೆಯನ್ನು ಅಲ್ಲಲ್ಲಿ ಪರಿಶೀಲನಾರ್ಥ ಅಗೆದು ಹಾಕುತ್ತಿದ್ದಾರೆ. ಎಲ್ಲಿ ಪೈಪ್ ಒಡೆದಿದೆ ಎನ್ನುವುದು ಇನ್ನೂ ಖಾತ್ರಿ ಇಲ್ಲದಂತಿದೆ. ಬಿ.ಸಿ. ರೋಡಿನ ಸರ್ವಿಸ್ ರಸ್ತೆಯ ಕಾಮಗಾರಿ ನಡೆಯುವ ಸಂದರ್ಭ ಪುರಸಭೆ ಈ ಪೈಪ್‌ಲೈನ್ ಬಗ್ಗೆ ಕಾಳಜಿ ವಹಿಸಬೇಕಾದ ವ್ಯವಸ್ಥೆಗಳನ್ನು ಮಾಡದಿರುವುದು ಇಂದಿನ ಸಮಸ್ಯೆಗೆ ಕಾರಣ ಎಂಬುದಾಗಿ ಜನಾಭಿಪ್ರಾಯವಿದೆ.
Advertisement