Advertisement
ಆದರೆ, ಈ ಅರಣ್ಯದಲ್ಲಿ ಎಲ್ಲಿ ನೋಡಿದರೂ ಒಣ ಹುಲ್ಲು ಕಾಣುತ್ತಿದೆ. ಇಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಕಂಡುಬರುತ್ತಿದೆ. ಪ್ರವಾಸಿ ಕೇಂದ್ರದಲ್ಲಿಯೂ ತಂಪು ವಾತಾವರಣ ದೂರವಾಗಿ ಉಷ್ಣಾಂಶ ಏರತೊಡಗಿದೆ. ಜಿಲ್ಲೆಯ ಪ್ರಕೃತಿಧಾಮ ದೇವರಾಯನ ದುರ್ಗ, ನಾಮದ ಚಿಲುಮೆ ಇಲ್ಲಿಗೆ ಹೋದರೆ ಬೀಸುವ ತಂಗಾಳಿ, ತಂಪಾದವಾತಾವರಣ ಎಂತಹವರಿಗೂ ಸಂತಸ ಮೂಡಿ ಸುತ್ತಿರುವ ಪ್ರವಾಸಿ ಕೇಂದ್ರವಾಗಿವೆ. ಭಾನುವಾರ ಸೇರಿದಂತೆ ಎಲ್ಲಾರಜಾ ದಿನಗಳಲ್ಲಿ ಹಾಗೂ ಇತರೇ ದಿನಗಳಲ್ಲೂ ಜಿಲ್ಲೆಯ ವಿವಿಧ ಭಾಗಗಳಿಂದ ಅಲ್ಲದೇ ನಾಡಿನ ವಿವಿಧೆಡೆಯಿಂದ ಇಲ್ಲಿಗೆ ಬಂದು ಈ ತಂಪಾದ ಪ್ರದೇಶಗಳಲ್ಲಿ ಆನಂದವಾಗಿ ತಮ್ಮ ಕುಟುಂಬದ ಹಾಗೂ ಸ್ನೇಹಿತರೊಡನೆ ಸಂತಸಪಡುವ ಸ್ಥಳವಾಗಿದೆ.
Related Articles
Advertisement
ಬೆಂಕಿಯಿಂದ ಮರ, ಗಿಡಗಳು ನಾಶ: ಇಲ್ಲಿಗೆ ಪ್ರಯಾಣಿಕರು ಬಂದು ತಣ್ಣನೆಯ ವಾತಾವರಣದಲ್ಲಿವಿಶ್ರಾಂತಿ ಪಡೆದು ಹೋಗುವ ಪವಿತ್ರವಾದ ಪ್ರಾಕೃತಿಕ ಕ್ಷೇತ್ರದಲ್ಲಿ ಇಂದು ಮರಗಳ್ಳರ ಹಾವಳಿಗೆ ಸಿಲುಕಿ ಮರಗಳು ಇಂದು ದಿನದಿಂದ ಅಳಿವಿನ ಅಂಚಿಗೆ ತಲುಪಿವೆ. ಇದರ ನಡುವೆ ಆಗಿಂದ್ದಾಗೆ ಬೆಟ್ಟಗುಡ್ಡ ಗಳಿಗೆಬೀಳುವ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಮರಗಿಡಗಳು ನಾಶವಾಗುತ್ತಿವೆ. ಈ ಪ್ರದೇಶದಲ್ಲಿರುವಅರಣ್ಯ ಸಂಪತ್ತು ನಾಶವಾಗುತ್ತಿರುವಂತೆಯೇ ಈ ಅರಣ್ಯದಲ್ಲಿದ್ದ ವನ್ಯ ಜೀವಿಗಳು ನಾಶವಾಗುತ್ತಿದ್ದು,ಸುಂದರ ಪ್ರಾಕೃತಿಕ ಧಾಮ ವಿನಾಶದ ಅಂಚಿನತ್ತ ತಲುಪುತ್ತಲಿದೆ. ಈ ಪ್ರದೇಶದಲ್ಲಿರುವ ಅತ್ಯಮೂಲ್ಯವಾದ ಗಿಡ, ಮರಗಳನ್ನು ಮರಗಳ್ಳರು ಹೇರಳವಾಗಿ ದೋಚು ತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ರೀತಿಯ ಗಮನ ಹರಿಸದೇ ಕಣ್ಣುಮುಚ್ಚಿ ಕುಳಿತಿದೆ.
ಸರ್ಕಾರ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಿಲ್ಲ: ನಾಮದ ಚಿಲುಮೆಯಲ್ಲಿ ಬೆಳೆಸಿದ ಸಿದ್ಧ ಸಂಜೀವಿನಿ ಔಷಧಿ ವನ ಅನೇಕ ಜನರಿಗೆ ಔಷಧಿ ಗಿಡಗಳಿಂದ ಬಹಳ ರೀತಿಯ ಅನುಕೂಲಗಳು ಆಗುತ್ತಿದ್ದವು.ಆದರೆ, ಇತ್ತೀಚಿನ ದಿನಗಳಲ್ಲಿ ಈ ಗಿಡಗಳ ಆರೈಕೆ ಇಲ್ಲದೇ ಸಿದ್ಧ ಸಂಜೀವಿನಿ ಔಷಧಿ ಗಿಡಗಳು ಒಣಗುತ್ತಿವೆ. ಈ ಕ್ಷೇತ್ರದಲ್ಲಿ ಬರುವ ಪ್ರಯಾಣಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿಲ್ಲ. ಕುಡಿಯುವ ನೀರಿಗೂ ಇಲ್ಲಿ ತಾತ್ವಾರ ಇದೆ. ಮಳೆ ಬರದ ಹಿನ್ನೆಲೆಯಲ್ಲಿ ಸುಂದರ ತಾಣ ಇಲ್ಲದಾಗುತ್ತಿದೆ.
ತಂಪಾದ ಗಾಳಿಯ ಬದಲು ಬಿಸಿ ಗಾಳಿ ಈ ಪ್ರಕೃತಿ ಧಾಮದಲ್ಲಿ ಬರುತ್ತಿದೆ. ಸರ್ಕಾರ ಈ ದೇವರಾನದುರ್ಗ, ನಾಮದಚಿಲುಮೆ ಅಭಿವೃದ್ಧಿ ಪಡಿಸಬೇಕು ಎಂದು ಹೇಳುತ್ತಿದೆ. ಆದರೆ, ಈವರೆಗೂ ಇದರ ಅಭಿವೃದ್ಧಿ ಕಂಡಿಲ್ಲ. ಸುಡುಬಿಸಿಲಿನ ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿಲ್ಲದೇ ಪ್ರಾಣಿ, ಪಕ್ಷಗಳು ಕಂಗಾಲಾಗಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ದೇವರಾಯನದುರ್ಗ ಅರಣ್ಯ ಪ್ರದೇಶವನ್ನು ಉಳಿಸುವತ್ತ ಮುಂದಾಗಬೇಕಾಗಿದೆ.
● ಚಿ.ನಿ. ಪುರುಷೋತ್ತಮ್