ಮುಡಿಪು: ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಡಿಪು ಕಂಬ್ಲಪದವು ಸಮೀಪದ ಸಾಂಬಾರುತೋಟ ಭಾಗದ ಮನೆಗಳಿಗೆ ನೀರು ನುಗ್ಗಿದ್ದು, ಜನತೆ ರಾತ್ರಿಯೆಲ್ಲಾ ನೀರಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮುಡಿಪು ಗುಡ್ಡದ ಭಾಗದಿಂದ ರಾತ್ರಿ 1ರ ಸುಮಾರಿಗೆ ಮಳೆ ನೀರು ಹರಿದು ಸಾಂಬಾರುತೋಟ ಭಾಗದ ಕೆಲವು ಮನೆಯೊಳಗೆ ನೀರು ನುಗ್ಗಿತ್ತು. ನೀರಿನ ರಭಸಕ್ಕೆ ಕಾಮಗಾರಿಯಲ್ಲಿದ್ದ ಮುಖ್ಯ ರಸ್ತೆಯ ತಡೆಗೋಡೆ ಕುಸಿದಿದೆ. ವಿದ್ಯುತ್ ಕಂಬಗಳು ಕೂಡಾ ಅಪಾಯದಲ್ಲಿದೆ.
ಶಾಸಕ ಯು.ಟಿ.ಖಾದರ್, ಬಂಟ್ವಾಳ ತಾಲೂಕು ಪಂ.ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ತಹಶಿಲ್ದಾರ್ ರಶ್ಮಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಮಳೆಯಿಂದಾಗಿ ಇನ್ ಪೋಸಿಸ್ ನ ತಡೆಗೋಡೆ ರಸ್ತೆಗೆ ಕುಸಿದು ಬಿದ್ದಿದೆ. ಇದರಿಂದಾಗಿ ರಸ್ತೆ ಸಂಚಾರ ಬೆಳಗ್ಗೆ ಕೆಲವು ಹೊತ್ತು ಅಸ್ತವ್ಯಸ್ತವಾಗಿತ್ತು.