Advertisement

ರಾತ್ರೋರಾತ್ರಿ ಆಂಧ್ರಕ್ಕೆ ನೀರು

08:30 PM Mar 27, 2021 | Team Udayavani |

ಗಂಗಾವತಿ: ತುಂಗಭದ್ರಾ ನದಿಯ ಮೂಲಕ ಆಂಧ್ರಪ್ರದೇಶಕ್ಕೆ ನೀರು ಹರಿಸದಂತೆ ಸರಕಾರದ ಸೂಚನೆಯನ್ನು ಧಿಕ್ಕರಿಸಿ ನದಿಯ ಮೂಲಕ ಪುನಃ ಆಂಧ್ರಪ್ರದೇಶಕ್ಕೆ ತುಂಗಭದ್ರಾ ಯೋಜನೆಯ ಅ ಧಿಕಾರಿಗಳು ನೀರು ಹರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ ಮಾ.17ರಿಂದ ಸತತವಾಗಿ ನದಿಗೆ ನೀರು ಹರಿಸಲಾಗುತ್ತಿದ್ದು, ರೈತರು ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಕೊಟ್ಟ ನಂತರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮುಖ್ಯ ಅಭಿಯಂತರು ಮತ್ತು ತುಂಗಭದ್ರಾ ಬೋಡ್‌ ಅಧ್ಯಕ್ಷರ ಜತೆ ಮಾತನಾಡಿ ನದಿಗೆ ನೀರು ಹರಿಸದಂತೆ ರಾಜ್ಯ ಸರಕಾರದ ಪರವಾಗಿ ಸೂಚನೆ ಕೊಟ್ಟಿದ್ದರೂ ಪುನಃ ಅ ಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಹಗಲು ರಾತ್ರಿ ನದಿಯ ಮೂಲಕ ಆಂಧ್ರಪ್ರದೇಶಕ್ಕೆ ನೀರು ಹರಿಸುತ್ತಿದ್ದಾರೆ.

ಸದ್ಯ ಡ್ಯಾಂನಲ್ಲಿ 13 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಸುಮಾರು 8 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಸೇರಿ ಇತರೆ ಬೆಳೆ ಬೆಳೆದಿದ್ದು ಇರುವ ನೀರು ಬೆಳೆದು ನಿಂತ ಬೆಳೆಗೆ ಸಾಲುವುದಿಲ್ಲ ಎಂದು ರೈತರ ಆಕ್ರೋಶವಾಗಿದೆ.

ರೈತರಿಂದ ಮುತ್ತಿಗೆ: ಅಚ್ಚುಕಟ್ಟು ರೈತರ ಹಿತ ಮರೆತು ಆಂಧ್ರಪ್ರದೇಶಕ್ಕೆ ನೀರು ಹರಿಸುತ್ತಿರುವ ತುಂಗಭದ್ರಾ ಬೋರ್ಡ್‌ ಮತ್ತು ಜಲಸಂಪನ್ಮೂಲ ಇಲಾಖೆ ಅ ಧಿಕಾರಿಗಳನ್ನು ರಾಜ್ಯ ಸರಕಾರ ನಿಯಂತ್ರಿಸಲು ಆಗುತ್ತಿಲ್ಲ. ಶೀಘ್ರವೇ ರೈತರ ನೇತೃತ್ವದಲ್ಲಿ ತುಂಗಭದ್ರಾ ಡ್ಯಾಂಗೆ ಮುತ್ತಿಗೆ ಹಾಕಿ ರೈತರೇ ನೀರನ್ನು ಆಂಧ್ರಪ್ರದೇಶಕ್ಕೆ ಹೋಗದಂತೆ ತಡೆಲಿದ್ದೇವೆ ಎಂದು ಕನಕಗಿರಿ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next