ಮುಧೋಳ : ನಿನ್ನಿಯಿಂದ ಇಳಿಮುಖದತ್ತ ಸಾಗಿರುವ ಘಟಪ್ರಭಾ ನದಿ ಪ್ರವಾಹ ನೀರು ಇಂದು ಬೆಳಗಿನ ಸಮಯದಲ್ಲಿ ಚಿಂಚಖಂಡಿ ಸೇತುವೆ ಮೇಲೆ ಗಣನೀಯವಾಗಿ ಇಳಿಕೆಯಾಗಿದೆ.
ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ಇದುವರೆಗೂ ಆರಂಭಿಸಿಲ್ಲ.
ಇಂದು ಮಧ್ಯಾಹ್ನದ ವೇಳೆಗೆ ಪ್ರವಾಹ ಮತ್ತಷ್ಟು ತಗ್ಗುವ ಸೂಚನೆಯಿದ್ದು ಆ ಬಳಿಕಷ್ಟೆ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾಹನ ಸಂಚಾರದ ಬಗ್ಗೆ ನಿರ್ಧರಿಸುವ ಸಾಧ್ಯತೆಯಿದೆ.
ಯಾದವಾಡ ಸೇತುವೆ ಸ್ಥಿತಿಗತಿ : ಮುಧೋಳ-ಯಾದವಾಡ ಸೇತುವೆ ಮೇಲೆ ನೀರಿನ ಪ್ರವಾಹ ತಗ್ಗಿದ್ದರೂ ಸೇತುವೆ ಮೇಲೆ ಇನ್ನು 4-5ಅಡಿ ನೀರು ಹರಿಯುತ್ತಿದೆ. ಸೇತುವೆ ಮೇಲಿನ ನೀರು ತಗ್ಗಿ ಸಂಚಾರ ಆರಂಭಕ್ಕೆ ಕನಿಷ್ಠ ಒಂದು ವಾರ ಸಮಯಾವಕಾಶವಾದರೂ ಬೇಕಾಗಬಹುದು.