Advertisement

ಮಳೆಕೊಯ್ಲು : ಎಲ್ಲೆಡೆ ಜಾಗೃತಿ ಮೂಡಿಸುತ್ತಿರುವ ಸಂಘ-ಸಂಸ್ಥೆಗಳು

10:22 PM Jul 25, 2019 | mahesh |

ಮಹಾನಗರ: “ಉದಯವಾಣಿ’ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರೇಪಿತರಾಗಿ ಹಲವಾರು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುತ್ತಿದ್ದಾರೆ. ಕೇವಲ ಮನೆಗಳಲ್ಲಿ ಮಾತ್ರವಲ್ಲದೆ, ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಲ್ಲಿಯೂ ಮಳೆಕೊಯ್ಲು ಅಳವಡಿಕೆಗೆ ಜನ ಉತ್ಸುಕರಾಗಿದ್ದಾರೆ; ಈಗಾಗಲೇ ಕೆಲವೆಡೆ ಅಳವಡಿಕೆಯಾಗಿದೆ.

Advertisement

ಇನ್ನೊಂದೆಡೆ ಮಳೆಕೊಯ್ಲು ಸಹಿತ ಜಲ ಸಂರಕ್ಷಣೆ ಬಗ್ಗೆ “ಉದಯವಾಣಿ’ ಅಭಿಯಾನದಿಂದ ಪ್ರೇರಣೆ ಪಡೆದು ಹಲವಾರು ಸಂಘ-ಸಂಸ್ಥೆಗಳಿಂದ ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಾಮಾಜಿಕ ಕಾರ್ಯಗಳಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಹಿಳಾ ಮಂಡಲಗಳೂ ಒಂದೆಜ್ಜೆ ಮುಂದಿಟ್ಟು ಮಳೆಕೊಯ್ಲು ಅಳವಡಿಸುವ ದಿಕ್ಕಿನಲ್ಲಿ ತೊಡಗಿಸಿಕೊಂಡಿವೆ.

ಬುಧವಾರ ಉರ್ವ ಹೊಗೆಬೈಲಿನಲ್ಲಿ ಸೌಜನ್ಯ ಮಹಿಳಾ ಮಂಡಲವು “ಉದಯವಾಣಿ’ ಪತ್ರಿಕೆಯ ಸಹಯೋಗದೊಂದಿಗೆ “ಜಲಧಾರೆ-ಮಳೆಕೊಯ್ಲು ಮಾಹಿತಿ’ ಕಾರ್ಯಕ್ರಮ ನಡೆಸಿದೆ. ಸಂಪನ್ಮೂಲ ವ್ಯಕ್ತಿಯಾಗಿದ್ದ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರಕಲಾºವಿ ಭಾಗವಹಿಸಿ, ಮಳೆ ಪ್ರಕೃತಿಯ ಕೊಡುಗೆ. ಈ ಜಲಧಾರೆಯನ್ನು ವ್ಯರ್ಥ ಮಾಡದೆ ಭವಿಷ್ಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕು ಎಂದರು.

ಮಳೆಕೊಯ್ಲು ಅಳವಡಿಸಿಕೊಳ್ಳುವ ಸರಳ ವಿಧಾನಗಳ ಬಗ್ಗೆ ವಿಸ್ತೃತ ವಿವರ ನೀಡಲಾಯಿತು.
ಅಲ್ಲದೆ, ಮಳೆಕೊಯ್ಲು ಅಳವಡಿಸುವ ನಿಟ್ಟಿನಲ್ಲಿ ಸದಸ್ಯರಲ್ಲಿ ಇರುವ ಕೆಲವು ಗೊಂದಲಗಳನ್ನು ಈ ವೇಳೆ ನಿವಾರಿಸಲಾಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಹೇಮಲತಾ ರಮೇಶ್‌ ಸ್ವಾಗತಿಸಿದರು. ಗೌರವಾಧ್ಯಕ್ಷೆ ರೋಹಿಣಿ ಕೆ. ಎ. ಪರಿಚಯಿಸಿದರು. ಉಪಾಧ್ಯಕ್ಷೆ ರಮಾ ಕಲಾºವಿ ಗೌರವಿಸಿದರು. ಕಾರ್ಯದರ್ಶಿ ರಾಜೇಶ್ವರಿ ಎಸ್‌. ರಾವ್‌ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾವತಿ ಜೆ. ಬೈಕಾಡಿ ಕಾರ್ಯ ಕ್ರಮ ನಿರೂಪಿಸಿದರು.

ಚರ್ಚ್‌ನಲ್ಲಿ ಮಳೆಕೊಯ್ಲು ಮಾಹಿತಿ
ಜೆಪ್ಪು ಸಿಎಸ್‌ಐ ಕಾಂತಿ ದೇವಾಲಯವು “ಉದಯವಾಣಿ’ ಸಹಯೋಗದೊಂದಿಗೆ ಮಳೆಕೊಯ್ಲು ಕುರಿತಾದ ವಿಶೇಷ ಮಾಹಿತಿ, ಪ್ರಾತ್ಯಕ್ಷಿಕೆಯನ್ನು ಜು. 28ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಚರ್ಚ್‌ನಲ್ಲಿ ರವಿವಾರದಂದು ನಡೆಯುವ ಪ್ರಾರ್ಥನೆ ಅನಂತರ ಎಲ್ಲ ಭಕ್ತರಿಗೆ ಮಳೆಕೊಯ್ಲು ಮಹತ್ವದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆ ಮೂಲಕ, ಚರ್ಚ್‌ ವ್ಯಾಪ್ತಿಯ ಎಲ್ಲ ಮನೆಗಳಲ್ಲಿಯೂ ಮಳೆ ನೀರಿನ ಸಂರಕ್ಷಣೆಯತ್ತ ಜನರನ್ನು ಜಲ ಸಾಕ್ಷರರನ್ನಾಗಿ ಮಾಡುವ ಪ್ರಯತ್ನವನ್ನು ಜೆಪ್ಪು ಸಿಎಸ್‌ಐ ಕಾಂತಿ ಚರ್ಚ್‌ ಮಾಡಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಮಳೆಕೊಯ್ಲು ಕುರಿತು ಮಾಹಿತಿ ನೀಡಲಿದ್ದಾರೆ. ಸಿಎಸ್‌ಐ ಕಾಂತಿ ದೇವಾಲಯದ ಸೆಂಟನರಿ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ನೀರಿನ ಕೊರತೆ ನೀಗಿಸಲು ಮಳೆಕೊಯ್ಲು
ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಟೀಲಿನ ಹಿಂದಿ ಶಿಕ್ಷಕ, ಕಿನ್ನಿಗೋಳಿ ತಾಳಿಪಾಡಿಯ ಉಮೇಶ್‌ ನೀಲಾವರ ಅವರು ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗಬಾರದೆಂಬ ಉದ್ದೇಶದಿಂದ ಉದಯವಾಣಿ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತರಾಗಿ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ನೀರಿಗಾಗಿ ಸುಮಾರು ಏಳು ವರ್ಷಗಳ ಹಿಂದಿನ ಬಾವಿ ಇವರ ಮನೆಯಲ್ಲಿದ್ದು, ಈವರೆಗೆ ಯಾವುದೇ ರೀತಿಯ ನೀರಿನ ಅಭಾವ ಬಂದೊದಗಲಿಲ್ಲ. ಸದ್ಯ ಮಳೆ ಕೊರತೆಯಿಂದಾಗಿ ಭವಿಷ್ಯದಲ್ಲಿ ನೀರು ಉಳಿಸಬೇಕು ಎಂಬ ಉದ್ದೇಶದಿಂದ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.
ಮನೆಯ ಛಾವಣಿಯ ನೀರು ಪೈಪ್‌ ಮುಖಾಂತರ ಫಿಲ್ಟರ್‌ಗೆ ಹರಿಸಿ, ಅಲ್ಲಿಂದ ಶುದ್ಧವಾದ ನೀರನ್ನು ಬಾವಿಗೆ ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಅಕ್ಕಪಕ್ಕದ ಮನೆ ಮಂದಿಗೆ ಕೂಡ ಮಳೆಕೊಯ್ಲು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.

ಮಳೆಕೊಯ್ಲು ಅಭಿಯಾನಕ್ಕೆ ಓದುಗರ ಸ್ಪಂದನೆ
ಅಮೂಲ್ಯ ಕಾರ್ಯ
ಮನೆಮನೆಗೆ ಮಳೆಕೊಯ್ಲು ಅಭಿಯಾನ ಆರಂಭಿಸುವ ಮೂಲಕ “ಉದಯವಾಣಿ’ ಅಮೂಲ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀರುಳಿತಾಯಕ್ಕೆ ಪ್ರೇರಣೆ ಒದಗಿಸಿಕೊಟ್ಟ ಪತ್ರಿಕೆಯ ಕ್ರಮ ಶ್ಲಾಘನೀಯ. ಪತ್ರಿಕೆಯ ಸ್ಫೂರ್ತಿಯಿಂದ ಹಲವರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಲು ಮುಂದಾಗಿರುವುದು ಸಾರ್ಥಕವಾಗಿದೆ.
-ವಿ.ಕೆ. ವಾಲ್ಪಾಡಿ

ಅಭಿಯಾನ ಪ್ರಶಂಸನೀಯ
“ಉದಯವಾಣಿ’ ನಡೆಸುತ್ತಿರುವ ಜಲಜಾಗೃತಿ ಅಭಿಯಾನ ಪ್ರಶಂಸನೀಯ. ನೀರಿನ ಉಳಿತಾಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬರೂ ಮಳೆ ಕೊಯ್ಲು, ಇಂಗುಗುಂಡಿ ನಿರ್ಮಿಸಿ ಕೊಳ್ಳಬೇಕಾದ ಆವಶ್ಯಕತೆ ಪ್ರಸ್ತುತ ಇದೆ.
-ದೀಪಾ ಆರ್‌. ಭಂಡಾರ್ಕರ್‌, ಮೂಡುಬಿದಿರೆ

ಅಭಿಯಾನ ಪ್ರಶಂಸನೀಯ
“ಉದಯವಾಣಿ’ ನಡೆಸುತ್ತಿರುವ ಜಲಜಾಗೃತಿ ಅಭಿಯಾನ ಪ್ರಶಂಸನೀಯ. ನೀರಿನ ಉಳಿತಾಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬರೂ ಮಳೆ ಕೊಯ್ಲು, ಇಂಗುಗುಂಡಿ ನಿರ್ಮಿಸಿ ಕೊಳ್ಳಬೇಕಾದ ಆವಶ್ಯಕತೆ ಪ್ರಸ್ತುತ ಇದೆ.
-ದೀಪಾ ಆರ್‌. ಭಂಡಾರ್ಕರ್‌, ಮೂಡುಬಿದಿರೆ

ಮಳೆಕೊಯ್ಲಿಗೆ ಪ್ರೇರಣೆ
ಜನರಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲು ಪ್ರೇರೇಪಿಸಿದ “ಉದಯವಾಣಿ’ಯ ಕೆಲಸ ಅಭಿನಂದನೀಯ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗದೇ ಇರುವಷ್ಟು ಜನ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರನ್ನೂ ಹುರಿದುಂಬಿಸಿ ಮಳೆಕೊಯ್ಲು ಅಳವಡಿಸುವಂತೆ ಪ್ರೇರೇಪಿಸುವ ಕೆಲಸ ಪತ್ರಿಕೆಯಿಂದ ಆಗಬೇಕೆಂಬುದು ನನ್ನ ಸದಾಶಯ.
-ರವಿಕಲಾ ಸುಧಾಕರ್‌, ಸುರತ್ಕಲ್‌

ಜೀವ ಜಲ ಉಳಿತಾಯ
“ಉದಯವಾಣಿ’ಯ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದಾಗಿ ಜೀವಜಲ ಉಳಿತಾಯಕ್ಕೆ ಜನ ಮುಂದಾಗಿರುವುದು ಉತ್ತಮ ಬೆಳವಣಿಗೆ. ಪಾಲಿಕೆ ಮಾಡಬೇಕಾದ ಕೆಲಸವನ್ನು ಪತ್ರಿಕೆ ಮಾಡಿರುವುದು ಶ್ಲಾಘನೀಯ. ಪಾಲಿಕೆಯೂ ನೀರಿನ ಉಳಿತಾಯದ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕಿದೆ.
-ಹರೀಶ್‌ ದೇವಾಡಿಗ ಶಿವಾಜಿನಗರ, ಪಚ್ಚನಾಡಿ

ಉದಯವಾಣಿ ಪ್ರಯತ್ನ ಶ್ಲಾಘನೀಯ
ಮನೆಮನೆಗೆ ಮಳೆಕೊಯ್ಲು ಒಂದು ವಿಭಿನ್ನ ಆಲೋಚನೆಯಾಗಿದ್ದು, ಎಲ್ಲರಿಗೂ ಮಾದರಿಯಾಗಿದೆ. ಪ್ರತಿಯೊಬ್ಬರಿಗೂ ನೀರು ಆವಶ್ಯಕವಾಗಿದ್ದು, ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಉದಯವಾಣಿ ಪ್ರಯತ್ನ ಶ್ಲಾಘನೀಯ.
-ರೇಶ್ಮಾ, ಬಜ್ಜೋಡಿ

Advertisement

Udayavani is now on Telegram. Click here to join our channel and stay updated with the latest news.

Next