Advertisement
ಸಾಮಾನ್ಯವಾಗಿ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೋರಮಂಗಲ, ಇಂದಿರಾನಗರ, ಎಂ.ಜಿ.ರಸ್ತೆ, ಜಯನಗರ, ಬನಶಂಕರಿ ಸೇರಿದಂತೆ ಇತರೆ ಪಂಚತಾರಾ ಹೋಟೆಲ್, ರೆಸಾರ್ಟ್‌ಗಳಲ್ಲಿ ಹೋಳಿಯನ್ನು ಸಾಮೂಹಿಕ
Related Articles
Advertisement
ರೈನ್‌ಡ್ಯಾನ್ಸ್ ಹಾಗೂ ಪೂಲ್ ಪಾರ್ಟಿಗೆ ನಿಷೇಧ: ನಗರದ ಪಂಚತಾರಾ ಹೋಟೆಲ್ ಮತ್ತು ರೆಸಾರ್ಟ್‌ಗಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ವಾರಕ್ಕೂ ಮೊದಲೇ ವಿಶೇಷ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಮಾರಾಟ ಕೂಡ ಮಾಡಲಾಗಿದೆ. ಆದರೆ, ಸರ್ಕಾರ ಕೆಲವು ನೀತಿಗಳನ್ನು ಜಾರಿಗೊಳಿಸಿದ ನಂತರ, ಕಾರ್ಯಕ್ರಮ ನಿರ್ವಹಣಾ ವ್ಯವಸ್ಥೆಯು ರೈನ್ ಡ್ಯಾನ್ಸ್ ಮತ್ತು ಪೂಲ್ ಡ್ಯಾನ್ಸ್ ಆಚರಣೆಯನ್ನು ಕೈಬಿಟ್ಟಿದೆ.
ಈ ನಿಟ್ಟಿನಲ್ಲಿ ಮೈಸೂರು ರಸ್ತೆಯ ಜೆ.ಕೆ.ಗ್ರಾಂಡ್ ಅರೆನಾ ಹಾಗೂ ಜಯಮಹಲ್‌ಪ್ಯಾಲೇಸ್ ಹೋಟೆಲ್, ಒರಾಯನ್ ಸೇರಿ ದೊಡ್ಡ-ದೊಡ್ಡ ಹೋಟೆಲ್, ಮಾಲ್‌ಗಳಲ್ಲಿ ನೀರಿನ ಬಳಕೆ ಕಡಿವಾಣ ಹಾಕಲಾಗಿದ್ದು, ಕೆಲವು ರೆಸಾರ್ಟ್ ಮತ್ತು ಈವೆಂಟ್‌ಗಳನ್ನು ಆಯೋಜಿಸುವವರು ಹೋಲಿಗ್ರಾಮ್, ರಂಗೀಲಾ ಉತ್ಸವ ಎಂಬ ಹೆಸರಿನಲ್ಲಿ ಖಾಸಗಿ ಕಾರ್ಯ ಕ್ರಮಗಳನ್ನು ನಡೆಸುತ್ತಿವೆ.
ಬಣ್ಣದ ಬದಲು ಹೂವಿನ ಹೋಳಿ :
ಪ್ರತಿವರ್ಷ ಅದ್ದೂರಿಯಾಗಿ ಹೋಳಿ ಹಬ್ಬ ಆಯೋಜಿಸಲಾಗುತ್ತಿತ್ತು. ಆದರೆ, ಈ ವರ್ಷ ನೀರಿನ ಸಮಸ್ಯೆ ಊಹಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿದೆ. ಅಲ್ಲದೆ, ಕೃತಕ ಬಣ್ಣಗಳ ಬಳಸುವುದರಿಂದ ಆಚರಣೆ ನಂತರ ಚರ್ಮದಿಂದ ಆ ಬಣ್ಣಗಳನ್ನು ಸ್ವತ್ಛಗೊಳಿಸಲು ಕನಿಷ್ಠ ನೀರು ಬಳಸಬೇಕಾಗುತ್ತದೆ. ನೀರಿನ ಬಿಕ್ಕಟ್ಟಿನ ನಡುವೆ ಹೋಳಿ ಸರಳವಾಗಿ ಆಚರಿಸುವ ಉದ್ದೇಶಿಸಿದ್ದೇವೆ. ಬಣ್ಣ ಮತ್ತು ನೀರಿನ ಬದಲು, ಬಣ್ಣಬಣ್ಣದ ಹೂವುಗಳನ್ನು ಬಳಸಿದ “ಫೂಲೋ ಕಾ ಹೋಲಿ’ ಹೆಸರಿನಲ್ಲಿ ರಂಗಿನ ಹಬ್ಬ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬೆಳ್ಳಂದೂರಿನ ಹೋಳಿ ಕಾರ್ಯಕ್ರಮದ ಆಯೋಜಕಿ ಇಶಾ ರಾಥೋಡ್ ತಿಳಿಸುತ್ತಾರೆ. ಒಣ ಹೋಳಿ ಆಡುವ ಮೊದಲು ಚರ್ಮಕ್ಕೆ, ಕೂದಲು, ಕಿವಿಯ ಹಿಂದೆ, ಮೂಗಿನ ಸುತ್ತ ತೆಂಗಿನ ಎಣ್ಣೆ, ಗ್ಲಿಸರಿನ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ ಕೊಳ್ಳುವುದು ಸೂಕ್ತ. ಏಕೆಂದರೆ ಇದನ್ನು ಬೇಗ, ಕಡಿಮೆ ಪ್ರಮಾಣದ ನೀರಿನಿಂದ ಸ್ವತ್ಛಗೊಳಿಸಲು ಸಹಾಯ ಮಾಡುತ್ತದೆ. ಮಕ್ಕಳನ್ನು ಆದಷ್ಟು ದೂರವಿಡಿ.
ನಮ್ಮ ಏರಿಯಾದಲ್ಲಿನ ಬೋರ್‌ವೆಲ್‌ಗಳು ಬತ್ತಿವೆ. ಟ್ಯಾಂಕರ್‌ಗಳಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಹೋಳಿ ಅದ್ದೂರಿಯಾಗಿ ಆಚರಿಸಲು ಆಗುತ್ತಿಲ್ಲ. ಮನೆಯಲ್ಲಿಯೇ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಿದ್ದೇವೆ.-ಶಶಿಧರ್, ಸರ್ಜಾಪುರ ನಿವಾಸಿ
ಹೋಳಿ ನಮ್ಮ ಸಂಪ್ರದಾಯಿಕ ಹಬ್ಬ. ಈ ಬೇಸಿಗೆಯಲ್ಲಿ ಮೈ ತಂಪುಗೊಳಿಸಲು ಹಬ್ಬವಾಗಿದೆ. ಆದರೆ, ಈ ವರ್ಷ ಕುಡಿಯುವ ನೀರಿಗೆ ಬರ ಬಂದಿರುವ ಕಾರಣ, ಸಮೂಹಿಕ ಆಚರಣೆಯನ್ನು ನಮ್ಮ ಪ್ರದೇಶದಲ್ಲಿ ನಿಷೇಧಗೊಳಿಸಿದ್ದೇವೆ. ಮಕ್ಕಳಿಗೂ ನಿಯಮಿತ ನೀರಿನಲ್ಲಿ ಹೋಳಿ ಆಡಲು ತಿಳಿಸಿದ್ದೇವೆ.-ಅಕ್ಷತಾ, ವೈಟ್‌ಫೀಲ್ಡ್ ನಿವಾಸಿ