ಹಾಸನ: ಬಡವರ ಊಟಿ ಎಂದು ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಬಿರು ಬಿಸಿಲು. ಮಾರ್ಚ್ ಮುಗಿಯುವ ಮುನ್ನವೇ ಆರಂಭವಾದ ಬಿಸಿಲ ತಾಪ ಈಗ 33 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿದ್ದು ಬಿಸಿಲ ತಾಪದ ಅಸಹನೀಯ ಬದುಕಿನೊಂದಿಗೆ ಕುಡಿವ ನೀರಿನ ಅಭಾವ ಎದುರಾಗುವ ಆತಂಕವಿದೆ.
ಸಿದ್ಧತೆ: ಜಿಲ್ಲೆಯ 8 ತಾಲೂಕುಗಳ 95 ಗ್ರಾಮಗಳಲ್ಲಿ ಈಗಾಗಲೇ ಕುಡಿವ ನೀರಿನ ಸಮಸ್ಯೆಯಿದೆ. ಬೇಸಿಗೆಯಲ್ಲಿ ಎದುರಾಗಬಹುದಾದ 199 ಗ್ರಾಮಗಳನ್ನು ಜಿಲ್ಲಾಡಳಿತ ಗುರ್ತಿಸಿದೆ. ಜನ,ಜಾನುವಾರುಗಳಿಗೆ ಕುಡಿಯುವ ನೀರಿನಅಭಾವವಿರುವ ಒಟ್ಟು 294 ಗ್ರಾಮಕ್ಕೆ ಕುಡಿಯುವನೀರು ಪೂರೈಕೆಗೆ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಪಂಗಳ ಸಹಕಾರದೊಂದಿಗೆ ಸಿದ್ಧತೆ ನಡೆಸಿದೆ.
ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲದ ಮಟ್ಟ ಸುಧಾರಿಸಿದೆ.ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದ್ದು, ಅಂತರ್ಜಲದಮಟ್ಟವೂ ಸುಧಾರಿಸಿದೆ. ಜಿಲ್ಲೆಯ ಬಹುತೇಕಗ್ರಾಮಗಳಿಗೆ ಕೊಳೆವೆ ಬಾವಿಗಳ ಮೂಲಕವೂ ಕುಡಿ ಯುವ ನೀರು ಪೂರೈಕೆಯಾಗುತ್ತಿದೆ.ಹೀಗಾಗಿ ಜಿಲ್ಲೆಯ ಯಾವುದೇ ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ಕುಡಿವ ನೀರು ಪೂರೈಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿಲ್ಲ.
ಪೂರೈಕೆ: ಜಿಲ್ಲೆಯ 8 ತಾಲೂಕು ಕೇಂದ್ರಗಳ ನಗರಹಾಗೂ ಪಟ್ಟಣಗಳಿಗೆ ನದಿ ಮೂಲದಿಂದ ಕುಡಿವ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ಕುಡಿವ ನೀರಿನ ಸಮಸ್ಯೆ ಎದುರಾಗಿಲ್ಲ. ಹಾಸನ ನಗರಕ್ಕೆ ಹೇಮಾವತಿ ನದಿ ಮೂಲ ದಿಂದ ನೀರು ಪೂರೈಸುವುದರ ಜತೆಗೆ ಬೋರ್‌ವೆಲ್‌ಗಳ ಮೂಲಕವೂ ನೀರು ಪೂರೈಕೆಯಾಗುತ್ತಿದೆ. ಅರಸೀಕೆರೆ ನಗರ, ಚನ್ನರಾಯಪಟ್ಟಣ, ಹೊಳೆ ನರಸೀಪುರ, ಅರಕಲಗೂಡು, ಸಕಲೇಶಪುರ ಪಟ್ಟಣಕ್ಕೆ ಹೇಮಾವತಿ ನದಿಯಿಂದ ಹಾಗೂ ಬೇಲೂರು ಮತ್ತುಆಲೂರು ಪಟ್ಟಣಕ್ಕೆ ಯಗಚಿ ನದಿಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕಿನ ಕೆಲವು ಗ್ರಾಮಗಳಿಗೆ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರುಯೋಜನೆಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿದ್ದ ಅರಸೀಕೆರೆ ತಾಲೂಕಿನ 530ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಳೆದ ವರ್ಷದಿಂದ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಹಾಗಾಗಿ ಬರದ ನಾಡಿನ ಕುಡಿಯುವ ನೀರಿನ ಅಭಾವ ಬಹುತೇಕ ನೀಗಿದೆ. ಇನ್ನು 21 ಗ್ರಾಮಗಳಲ್ಲಿ ಮಾತ್ರಕುಡಿಯುವ ನೀರಿನ ಸಮಸ್ಯೆಯಿದ್ದು, ಕೊಳವೆ ಬಾವಿಗಳ ಮೂಲಕ ಪೂರೈಸಲಾಗುತ್ತಿದೆ.
ಹೇಮೆ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ :
- ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ನದಿ ಮೂಲದಿಂದ ಬಹುಗ್ರಾಮ ಕುಡಿವ ನೀರಿನ ಯೋಜನೆ ( ಎಂವಿಎಸ್) ಅನುಷ್ಠಾನಗೊಳಿಸಲಾಗುತ್ತಿದೆ. ಅರಸೀಕೆರೆ ತಾಲೂಕಿನಲ್ಲಿ ಯೋಜನೆ ಪೂರ್ಣ ಗೊಂಡಿದೆ. ಇನ್ನುಳಿದಂತೆ ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ.
- ಅರಸೀಕೆರೆ ತಾಲೂಕಿನ 530 ಗ್ರಾಮಗಳಿಗೆ32 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಂಡಿದ್ದು, ಎಲ್ಲ ಗ್ರಾಮಗಳಿಗೂ ಈಗ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
- ಚನ್ನರಾಯಪಟ್ಟಣ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಸೇರಿ
- 7 ಗ್ರಾಮಗಳಿಗೆ15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಶೇ.95 ರಷ್ಟು ಪೂರ್ಣಗೊಂಡಿದೆ. ಇನ್ನುಕೆಲವೇ ದಿನಗಳಲ್ಲಿ ನೀರು ಪೂರೈಕೆಯಾಗಲಿದೆ. ಅಗ್ರಹಾರ ಕುಂಬೇನಹಳ್ಳಿ ಸೇರಿ 16 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 7.50 ಕೋಟಿ ರೂ. ಯೋಜನೆಯೂ ಶೇ.95 ರಷ್ಟು ಪೂರ್ಣಗೊಂಡಿದೆ.
- ಆನೆಕೆರೆ ಸೇರಿ 66 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ45 ಕೋಟಿ ರೂ. ಯೋಜನೆ ಬಹುತೇಕ ಪೂರ್ಣಗೊಂಡಿದೆ. ಈ ತಾಲೂಕಿನಒಟ್ಟು 79 ಗ್ರಾಮಗಳಿಗೆ ಹೇಮಾವತಿ ನದಿಮೂಲದಿಂದ ಕುಡಿಯುವ ನೀರು ಶೀಘ್ರ ಪೂರೈಕೆಯಾಗಲಿದೆ.
- ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ 196 ಗ್ರಾಮಗಳಿಗೆ ಹೇಮಾವತಿ ನದಿ ಮೂಲದಿಂದಕುಡಿಯುವ ನೀರು ಪೂರೈಸುವ 234 ಕೋಟಿ ರೂ.ಯೋಜನೆ ಪ್ರಗತಿಯಲ್ಲಿದ್ದು ಶೇ.30 ಕಾಮಗಾರಿ ಪೂರ್ಣಗೊಂಡಿದೆ.
- ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸೇರಿ 23 ಹಳ್ಳಿಗಳಿಗೆ ಹೇಮಾವತಿ ನದಿ ಮೂಲದಿಂದ ಕುಡಿವ ನೀರು ಪೂರೈಸುವ 15 ಕೋಟಿ ರೂ. ಯೋಜನೆ ಪೂರ್ಣಗೊಂಡಿದೆ. ಕೋಡಿಹಳ್ಳಿ ಸೇರಿ17 ಹಳ್ಳಿಗಳಿಗೆ ಹೇಮಾವತಿ ನದಿಯಿಂದ ಕುಡಿವನೀರು ಪೂರೈಸುವ44 ಕೋಟಿ ರೂ. ಯೋಜನೆ ಶೇ.85 ರಷ್ಟು ಪೂರ್ಣಗೊಂಡಿದೆ.
- ಅರಸೀಕೆರೆ ತಾಲೂಕಿನ 530 ಹಳ್ಳಿ ಹೊರತುಪಡಿಸಿ ಒಟ್ಟು 78 ಕೋಟಿ ರೂ. ಅಂದಾಜಿನ 6 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡರೆ 326 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಸದ್ಯಕ್ಕೆ ನೀರಿನ ಹಾಹಾಕಾರ ಇಲ್ಲ :
ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿಲ್ಲ. ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಇಲ್ಲ. ಪ್ರಸ್ತುತ 95 ಗ್ರಾಮಗಳಲ್ಲಿ ಕುಡಿಯವ ನೀರಿನ ಸಮಸ್ಯೆಯಿದೆ. ಖಾಸಗಿಯವರಬೋರ್‌ವೆಲ್ ಬಳಸಿ ನೀರು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ 199ಗ್ರಾಮಗಳಲ್ಲಿ ನೀರಿನ ಅಭಾವ ಎದುರಾಗಬಹುದೆಂದು ಅಂದಾಜುಮಾಡಲಾಗಿದೆ. ಗ್ರಾಪಂಗಳ ಸಹಕಾರೊಂದಿಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರುಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್.ಜೆ.ವಾತ್ಸಲ್ಯ ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರಕ್ಕೊಂದು ಕೋಟಿ ರೂ. ಕೊಡಿ :
ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ನಿರೀಕ್ಷೆಯಿದ್ದು, ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಿಗೂ ಕನಿಷ್ಠ ಒಂದೊಂದು ಕೋಟಿ ರೂ.ಗಳನ್ನುಕುಡಿಯುವ ನೀರಿನ ತುರ್ತು ಕ್ರಮಗಳಿಗೆ ಸರ್ಕಾರ ಬಿಡುಗಡೆ ಮಾಡಬೇಕು.ಮುಖ್ಯಮಂತ್ರಿ ಹಾಗೂ ಸಚಿವ ಈಶ್ವರಪ್ಪ ಅವರ ನಡುವಿನ ಭಿನ್ನಾಭಿಪ್ರಾಯಗಳೇನೇಇರಲಿ. ಕುಡಿಯುವ ನೀರಿನ ಅಭಾವ ಎದುರಿಸಲು ಹಣ ಬಿಡುಗಡೆ ಮಾಡಬೇಕು. ಸರ್ಕಾರದ ಮುಖ್ಯಕಾರ್ಯದರ್ಶಿಯವರು ನೇರವಾಗಿ ಜಿಲ್ಲಾಧಿಕಾರಿ ಹಾಗೂತಹಶೀಲ್ದಾರರ ಮೂಲಕ ಕುಡಿಯುವ ನೀರಿನ ಅಭಾವ ಎದುರಿಸುವ ಕ್ರಮಗಳ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
– ಎನ್. ನಂಜುಂಡೇಗೌಡ