Advertisement

ನೀರಿನ ಸಮಸ್ಯೆ ವಿಪರೀತ

08:29 AM Feb 12, 2019 | Team Udayavani |

ಚಿಂಚೋಳಿ: ತಾಲೂಕಿನ ಅತಿ ಹಿಂದುಳಿದ ಪ್ರದೇಶಗಳಾದ ರುಮ್ಮನಗೂಡ, ಪಸ್ತಪುರ ಗ್ರಾಪಂಗಳ ವ್ಯಾಪ್ತಿಯ 14 ಗ್ರಾಮಗಳಲ್ಲಿ ಇದೀಗ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ದೂರದ ಗ್ರಾಮಗಳಿಗೆ ತೆರಳಿ ತಲೆ ಮೇಲೆ ಕೊಡ ಹೊತ್ತುಕೊಂಡು ನೀರು ಪರಿಸ್ಥಿತಿ ಉಂಟಾಗಿದ್ದರು ಸಹ ಅಧಿಕಾರಿಗಳ ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

Advertisement

ತಾಲೂಕಿನ ರುಮ್ಮನಗೂಡ ಮತ್ತು ಪಸ್ತಪುರ, ಚಂದನಕೇರಾ, ಚೆಂಗಟಾ, ಖಾನಾಪುರ, ಭೂಯಾರ(ಬಿ), ಕೊಟಗಾ, ರಾಣಾಪುರ, ಸಾಸರಗಾಂವ ಗ್ರಾಮಗಳು ಸೇರಿದಂತೆ ಸುತ್ತಲಿನ ತಾಂಡಾಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಳೆದ 10 ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 19 ಕೋಟಿ ರೂ. ಖರ್ಚು ಮಾಡಿ ಗ್ರಾಮ ಮತ್ತು ತಾಂಡಾಗಳಲ್ಲಿ ಪೈಪ್‌ಲೈನ್‌ ಮಾಡಲಾಗಿತ್ತು. ಆದರೆ ಕೆಲವು ಗ್ರಾಮಗಳಲ್ಲಿ ಪೈಪ್‌ಗ್ಳು ಒಡೆದು ಹೋಗಿವೆ. ಅಲ್ಲದೇ ಕೆಲವು ಗ್ರಾಮಗಳಲ್ಲಿ ಪೈಪ್‌ಗ್ಳು ಕಿತ್ತು ಹೋಗಿವೆ. ಹೀಗಾಗಿ ಜನರಿಗೆ ಸಮರ್ಪಕವಾಗಿ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ರುಮ್ಮನಗೂಡ ಗ್ರಾಮದ ಎಲ್ಲ ಓಣಿಗಳಲ್ಲಿ ಪೈಪ್‌ಲೈನ್‌ ಮಾಡಲಾಗಿದೆ. ಆದರೆ ಪೈಪ್‌ಗ್ಳು ಕೆಲವು ಕಡೆಗಳಲ್ಲಿ ಕಿತ್ತು ಹೋಗಿವೆ. ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಪಿಡಿಒ ಮತ್ತು ತಾಪಂ ಅಧಿಕಾರಿಗಳಿಗೆ ಅಲ್ಲದೇ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಸಹ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆ ಯಾರು ಕೇಳುತ್ತಿಲ್ಲ ಎಂದು ಗ್ರಾಪಂ ಸದಸ್ಯ ವೀರಾರೆಡ್ಡಿ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ರುಮ್ಮನಗೂಡ, ಗಂಜಗಿರಿ, ತಾಡಪಳ್ಳಿ, ಹೂವಿನಬಾವಿ, ಹುಲಿ ತಾಂಡಾಗಳಲ್ಲಿ ಕುಡಿಯುವ ನೀರಿನ ಪೂರೈಸುವ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಕೊಳವೆಬಾವಿ ದುರಸ್ತಿ ಮಾಡಬೇಕು. ಅಲ್ಲದೇ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಚಿಂಚೋಳಿ ಪಟ್ಟಣದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರೂ ಇನ್ನುವರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಮಸ್ಥ ಸೂರ್ಯಕಾಂತ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರುಮ್ಮನಗೂಡ ಸುತ್ತಲು ನೀರಿನ ಸಮಸ್ಯೆ ಉಂಟಾಗಿರುವುದರಿಂದ ಸಾಸರಗಾಂವದಿಂದ ಜನರು ತಲೆ ಮತ್ತು ವಾಹನಗಳ ಮೇಲೆ ನೀರು ತರುವಂತಾಗಿದೆ. ಹಳ್ಳಿಯಲ್ಲಿ ಮಹಿಳೆಯರು ಕೇವಲ ನೀರು ತರುವುದಕ್ಕಾಗಿ ಸಮಯ ಮೀಸಲಿಡುವಂತಾಗಿದೆ. ದನಕರುಗಳನ್ನು 5 ಕಿಮೀ ದೂರದಲ್ಲಿರುವ ಕೋಡ್ಲಿ ಅಲ್ಲಾಪುರ ಕೆರೆಗೆ ನೀರು ಕುಡಿಸುವುದಕ್ಕಾಗಿ ಹೊಡೆದುಕೊಂಡು ಹೋಗಬೇಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು ಸಹ ಶಾಸಕ ಡಾ| ಉಮೇಶ ಜಾಧವ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಕೇಳಿಲ್ಲ ಎಂದು ಜನರು ದೂರುತ್ತಿದ್ದಾರೆ.

Advertisement

ತಹಶೀಲ್ದಾರ್‌, ತಾಪಂ ಅಧಿಕಾರಿ ಇನ್ನಿತರ ಇಲಾಖೆ ಅಧಿಕಾರಿಗಳು ತಾಲೂಕಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಭೀಮಶೆಟ್ಟಿ ಮುಕ್ಕಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

10 ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 19 ಕೋಟಿ ರೂ. ಖರ್ಚು ಮಾಡಿ ಗ್ರಾಮ ಮತ್ತು ತಾಂಡಾಗಳಲ್ಲಿ ಪೈಪ್‌ಲೈನ್‌ ಮಾಡಲಾಗಿತ್ತು. ಆದರೆ ಕೆಲವು ಗ್ರಾಮಗಳಲ್ಲಿ ಪೈಪ್‌ಗ್ಳು ಒಡೆದು ಹೋಗಿವೆ. ಅಲ್ಲದೇ ಕೆಲವು ಗ್ರಾಮಗಳಲ್ಲಿ ಪೈಪ್‌ಗ್ಳು ಕಿತ್ತು ಹೋಗಿವೆ. ಹೀಗಾಗಿ ಜನರಿಗೆ ಸಮರ್ಪಕವಾಗಿ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next