Advertisement

ಹಿಂದುಳಿದ ತಾಲೂಕಿನಲ್ಲಿ ನೀರಿನ ಬವಣೆ

09:53 AM Feb 23, 2019 | Team Udayavani |

ದೇವದುರ್ಗ: ಕಳೆದ ನಾಲ್ಕು ವರ್ಷಗಳಿಂದ ಸತತ ಬರ ಎದುರಿಸುತ್ತಿರುವ ತಾಲೂಕು ಇದೀಗ ಪ್ರಸಕ್ತ ವರ್ಷ ಬರಕ್ಕೆ ತತ್ತರಿಸಿ ಹೋಗಿದೆ. ಮಳೆ ವೈಫಲ್ಯದಿಂದ ಬೆಳೆ ಇಲ್ಲದೇ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುತ್ತಿದೆ. ಕೃಷ್ಣ ನದಿ ಬತ್ತಿದೆ. ಹಳ್ಳ ಕೊಳ್ಳಗಳು ಬರಡು ಭೂಮಿಯಂತಾಗಿವೆ. ಹೀಗಾಗಿ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತ ಪರಿಸ್ಥಿತಿ ಎದುರಾಗಲಿದೆ.

Advertisement

ಬೇರೆ ರಾಜ್ಯಕ್ಕೆ ಮೇವು ನಿರ್ಬಂಧ: ಮುಂಗಾರು ಹಿಂಗಾರು ಮಳೆ ವೈಫಲ್ಯದಿಂದ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದ ಪರಿಣಾಮ ಬೆಳೆಗಳು ಬಾಡಿ ಹೋಗಿವೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಸಜ್ಜೆ, ಜೋಳ, ಭತ್ತ ಬೆಳೆದಿದ್ದು, ಇದೀಗ ತಾಲೂಕು ಆಡಳಿತ ಇಲ್ಲಿನ ಮೇವು ಬೇರೆ ರಾಜ್ಯಗಳಿಗೆ ಮಾರಾಟ ಮಾಡದಂತೆ
ನಿರ್ಬಂಧ ಹಾಕಿ ಚೆಕ್‌ ಪೋಸ್ಟ್‌ಗಳಲ್ಲಿ ಹೋಗದಂತೆ ಸಿಬ್ಬಂದಿಗೆ ನಿಗಾಹಿಸಲು ಸೂಚಿಸಲಾಗಿದೆ. ಮೇವಿನ ಬೇಡಿಕೆ ಬಾರದಿರುವುದರಿಂದ ಮೇವು ಬ್ಯಾಂಕ್‌ ಸ್ಥಾಪನೆಯಾಗಿಲ್ಲ. ರೈತರ ಬೇಡಿಕೆಯಂತೆ ಸಿಂಧನೂರು ತಾಲೂಕಿನ ಜವಳಗೇರಾ ಸಿಎಸ್‌ಎಫ್‌ ಕ್ಯಾಂಪ್‌, ಮಾನ್ವಿಯಲ್ಲಿ
ಮೇವು ಸಂಗ್ರಹಿಸಲಾಗಿದೆ. ಮೇವು ಅಗತ್ಯ ಬಿದ್ದಲ್ಲಿ ತಾಲೂಕಿನ ರೈತರಿಗೆ ಸಮರ್ಪಕವಾಗಿ ಮೇವು ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ನೀರಿಗಾಗಿ 30 ಲಕ್ಷ ಹಣ: ಕೃಷ್ಣಾ ನದಿ ಹಳ್ಳ ಕೊಳ್ಳಗಳು ಬತ್ತಿ ಹೋಗಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು 30 ಲಕ್ಷ ಅನುದಾನ ಸಹಾಯಕ ಆಯುಕ್ತರ ಖಾತೆಗೆ ಜಮಾ ಆಗಿದೆ. ಅಡಕಲಗುಡ್ಡ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಹೋರಾಟ ನಡೆಸಿದ್ದು ಸ್ಮರಿಸಬೇಕು. ಚಿಕ್ಕಬೂದೂರು, ಸಲಿಕ್ಯಾಪೂರು, ಮಲ್ಲಾಪುರುದೊಡ್ಡಿ, ನದಿ ದಂಡೆ ಬಹುತೇಕ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ನದಿ ನೀರೇ ನಂಬಿದ ಗ್ರಾಮಸ್ಥರು ಬೇಸಿಗೆಯಲ್ಲಿ ಏನಪ್ಪ ಎನ್ನುವ ಆತಂಕ
ಎದುರಾಗಿದೆ.

ಪಟ್ಟಣಕ್ಕೆ 30 ಲಕ್ಷ: ಬೇಸಿಗೆಯಲ್ಲಿ ಕುಡಿವ ನೀರಿಗಾಗಿ 50 ಲಕ್ಷ ರೂ. ಅನುದಾನ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ ಇದೀಗ 30 ಲಕ್ಷ ಅನುದಾನ ಬಿಡುಗಡೆ ಆಗಿದೆ. ನೀರಿನ ತುರ್ತು ಪರಿಸ್ಥಿತಿಗಾಗಿ ಹಣ ಬಳಕೆ ಮಾಡಲಾಗುತ್ತದೆ. ಬೋರ್‌ವೆಲ್‌ ಟ್ಯಾಂಕರ್‌ ಮೂಲಕ ನೀರು ಬೇಡಿಕೆ ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ದಿನ ಬಿಟ್ಟು ಮರು ದಿನವೇ ಪಟ್ಟಣದ 23 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತದೆ. ಇಲ್ಲಿ ದುರಂತ ಎಂದರೇ ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಮುಖ್ಯಾಧಿಕಾರಿ ಸರಿಯಾಗಿ ಕಚೇರಿಗೆ ಬಾರದಿರುವುದರಿಂದ ನೀರು ನಿರ್ವಹಣೆ ಸಿಬ್ಬಂದಿ ಫಜೀತಿ ಅನುಭವಿಸಬೇಕಾಗಿದೆ.

10 ಶುದ್ಧ ಕುಡಿಯುವ ನೀರಿನ ಘಟಕ ಬಂದ್‌: ಗ್ರಾಮೀಣ ಪ್ರದೇಶದಲ್ಲಿ ಜಿಪಂ ಇಲಾಖೆಯಿಂದ 86 ಶುದ್ಧ ಕುಡಿವ ನೀರಿನ ಘಟಕಗಳು ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಇಚ್ಛಾಶಕ್ತಿ ಕೊರತೆ ಹಿನ್ನೆಲೆಯಲ್ಲಿ ಇದೀಗ ಸೂಗೂರಹಾಳ, ನೀಲವಂಜಿ, ಊಟಿ, ಅಡಕಲಗುಡ್ಡ, ಜೇರಬಂಡಿ, ಮುಕ್ಕನಾಳ, ಯಮನಾಳ ಸೇರಿ 10 ಶುದ್ಧ ಕುಡಿವ ನೀರಿನ ಘಟಕಗಳು ಬಂದಾಗಿವೆ. 55 ಆರ್‌ಒ ವಾಟರ್‌ ಸಂಸ್ಥೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. 21 ಘಟಕಗಳು ಗ್ರಾಪಂಗಳು ನಿರ್ವಹಣೆ ಮಾಡಲಾಗುತ್ತಿದೆ. 

Advertisement

ಅಧಿಕಾರಿಗಳು ಕಚೇರಿಯಲ್ಲಿ ಸಕಾಲಕ್ಕೆ ಲಭ್ಯವಿರದ ಕಾರಣ ಆಗಾಗ ದುರಸ್ತಿಗೆ ಬಂದ್‌ ಘಟಕಗಳು ತುರ್ತು ಪರಿಸ್ಥಿತಿಯಲ್ಲಿ ದುರಸ್ತಿ ಆಗದಿರುವ ಕಾರಣ ಜನರು ನೀರಿಗಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಜನರಿಗೆ ಕುಡಿವ ನೀರು ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಕಟ್ಟುನಿಟ್ಟಾಗಿ ಕ್ರಮವಹಿಸಬೇಕು ಎಂದು ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತೀರಾ ಕೊರತೆ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ.
 ಕೆ.ಶಿವನಗೌಡ ನಾಯಕ, 

ತಾಲೂಕಿನಿಂದ ಮೇವು ಬೇರೆ ರಾಜ್ಯಗಳಿಗೆ ಹೋಗದಂತೆ ಚೆಕ್‌ ಪೋಸ್ಟ್‌ ಸ್ಥಾಪಿಸಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ರೈತರಿಂದ ಮೇವಿನ ಬೇಡಿಕೆ ಬಂದಿಲ್ಲ. ಬಂದರೆ ಮೇವಿನ ಬ್ಯಾಂಕ್‌ ಸ್ಥಾಪನೆ ಮಾಡಲಾಗುತ್ತದೆ.
 ಮಂಜುನಾಥ, ತಹಶೀಲ್ದಾರ್‌.

ಬೇಸಿಗೆ ಆರಂಭವಾಗಿದೆ. ಜನ, ಜಾನು ವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸ ಬೇಕಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬೇಸಿಗೆ ಮುಗಿಯವರೆಗೆ ಕಚೇರಿಯಲ್ಲಿ ಇರುವಂತ ಮೇಲಧಿಕಾರಿಗಳು ನೋಡಿಕೊಳ್ಳಬೇಕು. 
 ಮಲ್ಲಯ್ಯ ಕಟ್ಟಿಮನಿ,

ದೇವದುರ್ಗ: ಚಿಕ್ಕಬೂದೂರು ಗ್ರಾಮದಲ್ಲಿ ಬಾವಿಯಲ್ಲಿ ನೀರು ತೆಗೆಯುತ್ತಿರುವ ಗ್ರಾಮಸ್ಥರು. ಕೆಆರ್‌ಎಸ್‌ ತಾಲೂಕಾಧ್ಯಕ್ಷ
ಪಟ್ಟಣ ಸೇರಿ ದೊಡ್ಡಿಗಳಿಗೆ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೃಷ್ಣಾ ನದಿ ಬತ್ತಿ ಹೋಗಿದೆ. ಒಂದು ದಿನ ಬಿಟ್ಟು ಮರು ದಿನವೇ ನೀರು ಪೂರೈಸಲಾಗುತ್ತದೆ. ಅಗತ್ಯ ಬಿದ್ದರೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.
 ತಿಮ್ಮಪ್ಪ ಜಗಲಿ, ಪುರಸಭೆ ಮುಖ್ಯಾಧಿಕಾರಿ.

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next