Advertisement

Water Problem ; ಬಿಜೆಪಿ ಐಟಿ ಸೆಲ್ ಗೆ ಸೂಕ್ತ ಬಹುಮಾನ ನೀಡುತ್ತೇವೆ ಎಂದ ಕಾಂಗ್ರೆಸ್

07:04 PM Mar 08, 2024 | Team Udayavani |

ಬೆಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲೇ ರಾಜ್ಯ ರಾಜಧಾನಿ ಸೇರಿ ವಿವಿಧೆಡೆ ನೀರಿನ ಸಮಸ್ಯೆ ತಾಂಡವವಾಡಲು ಆರಂಭಿಸಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎಕ್ಸ್ ನಲ್ಲಿ ಸಮರಕ್ಕಿಳಿದಿವೆ.

Advertisement

ನೀರಿಲ್ಲ, ನೀರಿಲ್ಲ ರಾಜಧಾನಿ ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಕುಡಿಯಲು ನೀರಿಲ್ಲ.ಸಿಎಂ ಸಿದ್ದರಾಮಯ್ಯ ಅವರ #ಸ್ಲೀಪಿಂಗ್_ಸರ್ಕಾರ ಬಿಸ್ಲೇರಿ ನೀರು ಕುಡಿದು ಮಲಗುತ್ತಿದೆ. ಕೈ ತೊಳೆದುಕೊಳ್ಳಲು ಟ್ಯಾಂಕರ್‌ ನೀರು ಹಾಕಿಸಿಕೊಳ್ಳುತ್ತಿದೆ. ಆದರೆ, ಜನರಿಗೆ ಮಾತ್ರ ಕುಡಿಯಲು ಹನಿ ನೀರಿಗೂ ಹಾಹಾಕಾರ. 12 ದಿನಕ್ಕೊಮ್ಮೆ ನೀರು ಬರುತ್ತಿದೆ. ಟ್ಯಾಂಕರ್‌ ನೀರು ಬೇಕೆಂದರೆ ದುಬಾರಿ ಬೆಲೆ ನೀಡಬೇಕು. ಡಬಲ್‌ ಬೆಲೆ ಕೊಟ್ಟರೂ ನೀರು ಸಿಗುತ್ತಿಲ್ಲ.ಬ್ರ್ಯಾಂಡ್‌ ಬೆಂಗಳೂರನ್ನು ಟ್ರಬಲ್‌ ಬೆಂಗಳೂರು ಮಾಡಿದ್ದೇ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವ
ಡಿ.ಕೆ.ಶಿವಕುಮಾರ್ ಅವರ ಸಾಧನೆ” ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

”ರಾಜ್ಯ ಭೀಕರ ಬರ ಎದುರಿಸುತ್ತಿದೆ,ನೈಸರ್ಗಿಕ ಅಸಮತೋಲನದಿಂದಾಗಿ ನೀರಿಗೆ ಕೊರತೆ ಎದುರಾಗಿದೆ, ನಮ್ಮ ಸರ್ಕಾರ ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಂಡಿದೆ, ಟ್ಯಾಂಕರ್ ಗಳ ಸುಲಿಗೆಗೆ ಕಡಿವಾಣ ಹಾಕಿದೆ.ಇದೆಲ್ಲದರ ನಡುವೆ,ಕನ್ನಡಿಗರ ತೆರಿಗೆ ಸುಲಿಗೆ ಮಾಡುವ ಕೇಂದ್ರ ಸರ್ಕಾರ ಬರ ಎದುರಿಸುತ್ತಿರುವ ರಾಜ್ಯಕ್ಕೆ ನೀಡಿದ ನೆರವು ಏನು? ಬಿಜೆಪಿಯ 25 ಎಂಪಿಗಳು ಬರ ನಿರ್ವಹಣೆಗೆ ಮಾಡಿದ ಕೆಲಸವೇನು? ಸಾಕ್ಷಿ ಸಮೇತ ಉತ್ತರಿಸಿದರೆ ಬಿಜೆಪಿ ಕರ್ನಾಟಕದ ಐಟಿ ಸೆಲ್ ಗೆ ಸೂಕ್ತ ಬಹುಮಾನ ನೀಡುತ್ತೇವೆ!” ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next