Advertisement
ಈಗಾಗಲೇ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಕಲುಷಿತ ನೀರು ಪೂರೈಕೆಗೆ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟು ದಿನ ಇಲ್ಲದೇ ಈಗ ಏಕಾಏಕಿ ನೀರು ವಿಷವಾಗಿ ಪರಿವರ್ತನೆಗೊಳ್ಳಲು ಇನ್ನೂ ಏನು ಕಾರಣಗಳಿರಬಹುದು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
Related Articles
Advertisement
ಶನಿವಾರ ರಾಂಪುರ ಕೆರೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ನೇತೃತ್ವದ ತಂಡ, ನಗರಸಭೆ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ. ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆಯೇ ಶುದ್ಧೀಕರಣ ಘಟಕದಲ್ಲಿ ಎರಡ್ಮೂರು ಹಲ್ಲಿಗಳು ಸತ್ತು ಬಿದ್ದಿರುವ ದೃಶ್ಯ ಕಣ್ಣಿಗೆ ಬಿದ್ದಿರುವುದು ನಗರಸಭೆ ಆಡಳಿತ ವೈಖರಿಗೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಗೊಳಿಸಿ ಜನರಿಗೆ ಶುದ್ಧ ಕುಡಿವ ನೀರು ಕೊಡದಿದ್ದಲ್ಲಿ ನಗರಸಭೆ ಅಧಿಕಾರಿಗಳು, ಶಾಸಕರು ಹಾಗೂ ಸದಸ್ಯರ ಮನೆಗೆ ಕಲುಷಿತ ನೀರು ಪೂರೈಸಿ ಕುಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ.
ಚರಂಡಿಗಳಲ್ಲಿ ಪೈಪ್‌ಲೀಕ್!
ಕಲುಷಿತ ನೀರು ಪೂರೈಕೆ ವಿಚಾರವಾಗಿ ಮಾಹಿತಿ ನೀಡುವ ಭರದಲ್ಲಿ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರು, ನಗರದಲ್ಲಿ ಕೆಲವೊಂದು ಚರಂಡಿಗಳಲ್ಲಿ ಕುಡಿವ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಎಲ್ಲಿಯಾದರೂ ಲೀಕ್ ಆಗಿ ಕೊಚ್ಚೆ ನೀರು ಮಿಶ್ರಣಗೊಂಡು ಪೂರೈಕೆ ಆಗಿರಬಹುದೇನೊ. ಈ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದಿದ್ದಾರೆ. ನಗರದಲ್ಲಿ ಬಹುತೇಕ ಕಡೆ ಚರಂಡಿಗಳಲ್ಲೇ ಕುಡಿವ ನೀರಿನ ಪೈಪ್‌ಲೈನ್‌ಗಳು ಹಾದು ಹೋಗಿದ್ದು, ಎಲ್ಲೆಲ್ಲಿ ಹಾಳಾಗಿದೆಯೋ ಎನ್ನುವ ಆತಂಕ ಶುರುವಾಗಿದೆ.
50 ರೂ. ಕೊಟ್ಟು ಶುದ್ಧ ನೀರು ಕುಡಿಯಲಾಗದ ಬಡವರು, ಕಲುಷಿತ ನೀರು ಸೇವಿಸಿದ ಪರಿಣಾಮ ಇಂದು ಸಾವಿರಾರು ರೂ. ಆಸ್ಪತ್ರೆಗಳಿಗೆ ಕಟ್ಟುವಂತಾಗಿದೆ. ನೂರಾರು ಕೋಟಿ ಖರ್ಚು ಮಾಡಿದರೂ ಶುದ್ಧ ಕುಡಿವ ನೀರು ಕೊಡದ ಹೀನ ಸ್ಥಿತಿ ನಗರದಲ್ಲಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಶೀಘ್ರದಲ್ಲೇ ವ್ಯವಸ್ಥೆ ಸುಧಾರಿಸದಿದ್ದಲ್ಲಿ ಅಧಿಕಾರಿಗಳಿಗೆ ಅಶುದ್ಧ ನೀರು ಕುಡಿಸುವ ಎಚ್ಚರಿಕೆ ನೀಡಲಾಗಿದೆ. -ರಾಮನಗೌಡ ಏಗನೂರು ಜೆಡಿಎಸ್ ಮುಖಂಡ