Advertisement

ಮಾಳನೂರ ಕೆರೆ ನೀರಿನ ಸಂಗ್ರಹಮಟ್ಟ ಪರಿಶೀಲನೆ

07:08 PM Nov 14, 2020 | Suhan S |

ತಾಳಿಕೋಟೆ: ಪಟ್ಟಣದ ಜನರಿಗೆ ಮೂರು ದಿನಗಳಿಂದ ಕುಡಿಯುವ ನೀರಿನ ತೊಂದರೆಯಾಗಿರುವುದನ್ನು ಗಮನಿಸಿದ ಪುರಸಭೆ ನೂತನ ಅಧ್ಯಕ್ಷ ಸಂಗಮೇಶ ಇಂಗಳಗಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶುಕ್ರವಾರ ನೀರು ಸರಬರಾಜು ಮಾಡುವ ಮಾಳನೂರ ಕೆರೆಗೆ ಭೇಟಿ ನೀಡಿ ಪಂಪ್‌ಸೆಟ್‌ ದುರಸ್ತಿ ಕಾರ್ಯವನ್ನು ವಿಕ್ಷೀಸಿದರಲ್ಲದೇ ಕೂಡಲೇಕಾರ್ಯವನ್ನು ಬೇಗನೆ ಮುಗಿಸಿನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ ಎಂದು ಉಪಸ್ಥಿತ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮೋಟರ್‌ನಲ್ಲಿ ಸವಕಳಿಯಿಂದಾಗಿ ದುರಸ್ತಿಗೆ ಬಂದಿದೆ. ಮೂರು ದಿನಗಳಿಂದ ಸತತ ಹಗಲು ರಾತ್ರಿಯನ್ನದೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಸಂಜೆಯ ಹೊತ್ತಿಗೆ ಸಂಪೂರ್ಣದುರಸ್ತಿ ಮುಗಿಯಲಿದೆ. ಶನಿವಾರಪಟ್ಟಣದ ಜನರಿಗೆ ಎಂದಿನಂತೆ ನೀರು ಪೂರೈಕೆಯಾಗಲಿದೆ ಎಂದು ನೀರು ಸರಬರಾಜು ಮೇಲ್ವಿಚಾರಕ ಶಂಕರಗೌಡ ಬಿರಾದಾರ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಮಾತನಾಡಿ, ಕೇರ್‌ ಸಿಟಿ ಮತ್ತು ಕುಡಿಯುವ ನೀರಿನಯೋಜನೆ ವತಿಯಿಂದ 20 ಲಕ್ಷ ರೂ. ತೆಗೆದಿಡಲಾಗಿದೆ. ಕೆಲ ಪಂಪ್‌ಸೆಟ್‌ಗಳು ಹಳೆಯದಾಗಿರುವದನ್ನು ಪದೇ-ಪದೇದುರಸ್ತಿಗೆ ಬರುತ್ತಿವೆ. ಅವುಗಳನ್ನು ಬದಲಿಸುವುದು ಅಗತ್ಯವಿದೆ. ಅವುಗಳನ್ನು ಖರೀದಿಸಿ ಬದಲಿಸಿದರೆತೊಂದರೆ ತಪ್ಪಲಿದೆ. ಅದಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮುತ್ತಪ್ಪಣ್ಣ ಚಮಲಾಪುರ, ಜೈಸಿಂಗ್‌ ಮೂಲಿಮನಿ, ಮುದಕಣ್ಣಬಡಿಗೇರ, ಮೈಹಿಬೂಬ ಲಾಹೋರಿ, ಉಮರಶ್ಯಾ ಮಕಾಂದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next