Advertisement
ಬಿಬಿಎಂಪಿ ವ್ಯಾಪ್ತಿಯ 10 ಲಕ್ಷ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರನ್ನೇ ಅವಲಂಬಿ ಸಿವೆ. ಅಂದಾಜಿನ ಪ್ರಕಾರ 40 ಲಕ್ಷ ಜನ ಪ್ಲ್ರಾಟ್‌ಗಳಲ್ಲೇ ವಾಸಿಸುತ್ತಿದ್ದಾರೆ. ಪ್ರಮುಖ ಕೈಗಾರಿಕಾ ಪ್ರದೇಶಗಳಾದ ವೈಟ್ ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರದ ಬಳಿ ಕಚೇರಿಗೆ ಸಮೀಪ ಲಕ್ಷಾಂತರ ಟೆಕಿಗಳು ಬಾಡಿಗೆ ಫ್ಲ್ಯಾಟ್‌ಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.
Related Articles
Advertisement
ನೀರು ಪೋಲು ಮಾಡದಂತೆ ಜಲಮಂಡಳಿ ಮನವಿ:ಬೆಂಗಳೂರಿನ ಒಂದೊಂದು ಪ್ರದೇಶದ ಅಪಾರ್ಟ್‌ಮೆಂಟ್‌ಗಳಿಗೂ ಒಂದೊಂದು ದಿನಕ್ಕೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆ ಆಗುತ್ತದೆ. ಇನ್ನು ಕೆಲವು ಅಪಾರ್ಟ್‌ಮೆಂಟ್‌ಗಳಿಗೆ 3 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಪ್ರತ್ಯೇಕ ಅಪಾರ್ಟ್‌ಮೆಂಟ್ ಗಳಿಗೆ ಇಂತಿಷ್ಟೇ ನೀರು ಪೂರೈಕೆ ಮಾಡಬೇಕೆಂಬ ನಿಯಮಗಳಿಲ್ಲ. ಕಾವೇರಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ 3-4 ವರ್ಷಗಳಿಂದ ನಿರಂತರ ಪೂರೈಸಲಾಗುತ್ತಿರುವ 1,450 ಎಂಎಲ್‌ಡಿ ನೀರು ಈಗಲೂ ಪೂರೈಕೆಯಾಗುತ್ತಿದೆ. ಕಾವೇರಿ ನೀರನ್ನು ಮಿತವಾಗಿ ಬಳಸಿದರೆ ಉತ್ತಮ. ಅನಗತ್ಯವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಪೂಲು ಮಾಡಬಾರದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಬಿ.ಸುರೇಶ್ ಈ ಮೂಲಕ ಮನವಿ ಮಾಡಿದ್ದಾರೆ.
ಅಂತರ್ಜಲಮಟ್ಟ ಕುಸಿತ: ಮಳೆ ಕೊರತೆ, ಉಷ್ಣಾಂಶ ಹೆಚ್ಚಳದಿಂದ ಅಂತರ್ಜಲ ಮಟ್ಟ ರಾಜಧಾನಿಯಲ್ಲೂ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇನ್ನು ಬೆಂಗಳೂರಿನಲ್ಲಿ ತೆರೆದ ಬಾವಿ, ಕೊಳವೆ ಬಾವಿ ಸೇರಿ ಸಾರ್ವ ಜನಿಕ ಜಲಾಶಯಗಳು ಬತ್ತಿ ಹೋಗಿ ಜಲಾಕ್ಷಮ ಉಂಟಾ ಗುವ ಲಕ್ಷಣ ಗೋಚರಿಸಿವೆ. ಮುಂದಿನ ವರ್ಷ ಮಳೆ ಆರಂಭ ವಾಗುವವರೆಗೂ ಬಹುತೇಕ ಅಪಾರ್ಟ್‌ಮೆಂಟ್ ವಾಸಿಗಳು ಸಂಪೂರ್ಣ ಕಾವೇರಿ ನೀರಿಗೆ ಅವಲಂಬಿತರಾಗಿದ್ದಾರೆ. ಕಾವೇರಿ ನೀರು ಪೂರೈಕೆ ಆಗದ ಕೆಲವು ದಿನಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್ ನೀರಿನ ಮೊರೆ ಹೋಗುತ್ತಾರೆ. ಇದು ಭಾರಿ ಹೊರೆಯಾಗು ತ್ತಿದೆ ಎಂಬುದು ಅಪಾರ್ಟ್‌ಮೆಂಟ್ ನಿವಾಸಿಗಳ ಗೋಳು. ನೀರನ್ನು ಪೋಲು ಮಾಡದೇ, ಪ್ರಸ್ತುತ ಲಭ್ಯ ಇರುವ ನೀರನ್ನು ಅಗತ್ಯ ಉಪಯೋಗಕ್ಕೆ ಮಾತ್ರ ಬಳಸಿದರೆ ಮುಂದೆ ನೀರಿನ ಬವಣೆಯಿಂದ ಪಾರಾಗಬಹುದು ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.
ಶೇ.50 ಎಸ್‌ಟಿಪಿ ನೀರು ಚರಂಡಿಗೆ: ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ(ನೀರು ಸಂಸ್ಕರಣ ಘಟಕ) ಅಳವಡಿಸುವಂತೆ 2017ರಲ್ಲಿ ಜಲಮಂಡಳಿ ಆದೇಶಿಸಿತ್ತು. ಈ ನೀರನ್ನು ಗಾರ್ಡನ್‌ಗಳಿಗೆ, ಕಾರು ಕ್ಲಿನಿಂಗ್ ಇನ್ನೀತರ ಕಾರ್ಯಗಳಿಗೆ ಉಪಯೋಗಿಸಲು ಸೂಚಿಸಿತ್ತು. ಅಪಾರ್ಟ್‌ಮೆಂಟ್ ನಿವಾಸಿಗಳು ಈ ಸಂಸ್ಕರಣಾ ನೀರು ಬಳಸಿದರೆ ಪೋಲಾಗುವ ಅರ್ಧಕ್ಕರ್ಧ ಕಾವೇರಿ ನೀರು ಉಳಿತಾಯವಾಗಲಿದೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಆದರೆ, ಶೇ.70 ಅಪಾರ್ಟ್ ಮೆಂಟ್‌ಗಳಲ್ಲಿ ಎಸ್‌ಟಿಪಿಗಳಲ್ಲಿ ಸಂಸ್ಕರಣೆಯಾಗುವ ನೀರು ಬಳಕೆಯಾಗುತ್ತಿಲ್ಲ. ಶೇ.50 ನೀರು ಗಾರ್ಡನ್‌ಗೆ ಬಳಸಿದರೆ, ಉಳಿದ ಶೇ.50 ನೀರು ಚರಂಡಿ ಸೇರುತ್ತಿದೆ.
ಬೆಂಗಳೂರಿನಲ್ಲಿ ಬಹುತೇಕ ಅಪಾರ್ಟ್ ಮೆಂಟ್‌ಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಯಾಗುತ್ತಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ನೀರನ್ನು ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡಬೇಡಿ. – ಬಿ.ಸುರೇಶ್, ಪ್ರಧಾನ ಮುಖ್ಯ ಅಭಿಯಂತರ,ಜಲಮಂಡಳಿ.
-ಅವಿನಾಶ ಮೂಡಂಬಿಕಾನ