Advertisement

ತಾಂಡಾ-ಗ್ರಾಮಗಳಲ್ಲೀಗ ನೀರು ದೊರೆತ ಸಂಭ್ರಮ

11:50 AM Jan 16, 2018 | |

ಚಿಂಚೋಳಿ: ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಬೇಸಿಗೆ ದಿನಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ತಾಲೂಕಿನ ಗಡಿಲಿಂಗದಳ್ಳಿ ಬಹುಗ್ರಾಮ ಯೋಜನೆ ಯಶಸ್ವಿಯಾಗಿ ಗ್ರಾಮ, ತಾಂಡಾಗಳಿಗೆ ನೀರು ಸರಬರಾಜು ಆಗುತ್ತಿರುವುದರಿಂದ ಸದಾ ನೀರಿನ ದಾಹದಿಂದ ಬಳಲುತ್ತಿದ್ದ ಜನರಲ್ಲಿ ಸಂತಸದ ಕಳೆ ಮೂಡಿಸಿದೆ.

Advertisement

ತಾಲೂಕಿನ ಐನಾಪುರ ವಲಯದಲ್ಲಿ ಬರುವ ಬಹುತೇಕ ಗ್ರಾಮ, ತಾಂಡಾಗಳು ಬೇಸಿಗೆ ದಿನಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸರಕಾರದಿಂದ 2015-16ನೇ ಸಾಲಿನಲ್ಲಿ ಗಡಿಲಿಂಗದಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಾಂಡಾ/ಗ್ರಾಮಗಳಿಗೆ ಶುದ್ಧ ನೀರು ಪೂರೈಕೆಗೆ ಬಹುಗ್ರಾಮ ನೀರಿನ ಯೋಜನೆ ಮಂಜೂರಿಗೊಂಡಿದೆ. ಯೋಜನೆ ಅನುಷ್ಠಾನಕ್ಕಾಗಿ 4 ಕೋಟಿ ರೂ. ಅನುದಾನ ನೀಡಿ ಕಾಮಗಾರಿಯನ್ನು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗಕ್ಕೆ ವಹಿಸಿಕೊಡಲಾಗಿದೆ.

ಚೆನ್ನೂರ ಗ್ರಾಮದ ಹತ್ತಿರ ಇರುವ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ದಿನನಿತ್ಯ ನೀರು ಪೂರೈಕೆ ಆಗುತ್ತಿದೆ.
2017ರಲ್ಲಿ ಗಡಿಲಿಂಗದಳ್ಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಪ್ರಾರಂಭ ಆಗಿರುವುದರಿಂದ ಕಾನೂ ನಾಯಕ
ತಾಂಡಾ, ಫತ್ತು ನಾಯಕ ತಾಂಡಾ, ರೂಪ್ಲಾ ನಾಯಕ ತಾಂಡಾ, ಹೇಮಲಾ ನಾಯಕ ತಾಂಡಾ, ಶಿವರಾಮ ನಾಯಕ
ತಾಂಡಾ, ಚೆನ್ನೂರ ತಾಂಡಾ ಜನರು ನೀರಿನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಹಿಳೆಯರ ಮುಖದಲ್ಲಿ
ಮಂದಹಾಸ ಮೂಡಿದೆ.

ಕಳೆದ ಎರಡು ದಶಕಗಳಿಂದ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಬರ ಎದುರಿಸುತ್ತಿದ್ದ ಐನಾಪುರ, ಚಂದನಕೇರಾ, ಪಸ್ತಪುರ, ಮೋಘಾ, ಹೂವಿನಬಾವಿ, ಸಾಸರಗಾಂವ್‌, ರಾಣಾಪುರ, ರುಮ್ಮನಗೂಡ ಭೂಯ್ನಾರ(ಕೆ) ಖಾನಾಪುರ,
ಕೊಟಗಾ, ಚೆಂಗಟಾ, ಪಂಗರಗಾ, ಗಡಿಲಿಂಗದಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಈಗಾಗಲೇ ಚಂದನಕೇರಾ
ಬಹುಗ್ರಾಮ ಯೋಜನೆಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿರುವುದರಿಂದ ಕಳೆದ ವರ್ಷದ ಬೇಸಿಗೆ
ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿಲ್ಲವೆಂದು ಎಇಇ ಶಿವಾಜಿರಾವ ಡೋಣಿ ತಿಳಿಸಿದ್ದಾರೆ.

ಚಂದನಕೇರಾ ಬಹುಗ್ರಾಮಕ್ಕೆ 19 ಕೋಟಿ ರೂ. ಗಡಿಲಿಂಗದಳ್ಳಿ-ಐನಾಪುರ ಗ್ರಾಮ ಯೋಜನೆಗೆ 4ಕೋಟಿ ರೂ.
ಮತ್ತು ಪಸ್ತಪುರ-ಹೂವಿನಬಾವಿ ಬಹುಗ್ರಾಮ ಯೋಜನೆಗೆ 5ಕೋಟಿ ರೂ. ನೀಡಿದ್ದರಿಂದ ಯೋಜನೆಗಳು ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿ ಆಗಿರುವುದರಿಂದ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಎಇ ರಾಮಚಂದ್ರ ಜಾಧವ್‌ ತಿಳಿಸಿದ್ದಾರೆ.

Advertisement

ನೀರು ದೊರೆತಿದ್ದು ಸಂತಸ ತಂದಿದೆ
ಗಡಿಲಿಂಗದಳ್ಳಿ ಗ್ರಾಪಂ ವ್ಯಾಪ್ತಿಯ ತಾಂಡಾಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ಡಾ| ಉಮೇಶ ಜಾಧವ ಬಹುಗ್ರಾಮ ಯೋಜನೆ ಮಂಜೂರಿಗೊಳಿಸಿದ್ದಾರೆ. ಈಗ ಎಲ್ಲ ತಾಂಡಾದ ಜನರು ನೀರು ಪಡೆದುಕೊಳ್ಳುತ್ತಿದ್ದಾರೆ. ನಮಗೆ ಖುಷಿ ತಂದಿದೆ. ಒಟ್ಟಾರೆ ಗ್ರಾಮಸ್ಥರು ಬಹು ದಿನಗಳಿಂದ ಎದುರಿಸುತ್ತಿದ್ದ ಕುಡಿಯುವ ನೀರಿನ ಬರ ಬಹುಗ್ರಾಮ ಯೋಜನೆ ಮೂಲಕ ನೀಗಿದಂತಾಗಿದೆ. 
 ವಿಜಯಕುಮಾರ ರಾಠೊಡ, ಗ್ರಾಪಂ ಸದಸ್ಯ

ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next