Advertisement

ಹಂಪಿ ಸ್ಮಾರಕಗಳ ಆವರಣದಲ್ಲಿ ನೀರು

02:08 PM May 20, 2022 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಂಪಿ ಸ್ಮಾರಕಗಳ ಆವರಣದಲ್ಲಿ ನೀರು ಸಂಗ್ರಹವಾಗಿವೆ.

Advertisement

ಕೃಷ್ಣ ದೇಗುಲ, ಪಾನ್‌ ಸೂಪಾರಿ ಬಜಾರ್‌, ರಂಗ ದೇವಾಲಯ, ಹಾಜರ ರಾಮಚಂದ್ರ ದೇವಾಲಯ, ಉಗ್ರ ನರಸಿಂಹ, ವಿಜಯವಿಠಲ ದೇವಾಲಯದ ಆವರಣದಲ್ಲಿ ನೀರು ಸಂಗ್ರಹಗೊಂಡಿದೆ. ಮಳೆ ನೀರಿನಲ್ಲಿ ಸ್ಮಾರಕಗಳ ಬಿಂಬ ಗೋಚರಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ತಂಪೆರೆದ ಮಳೆ

ಬಿಸಿಲಿನಿಂದ ಸುಡುತ್ತಿದ್ದ ವಿಜಯನಗರ ಜಿಲ್ಲೆಯಲ್ಲಿಗ ಬುಧವಾರ ಸುರಿದ ಮಳೆ ತಂಪು ಎರೆದಿದ್ದು, ತಣ್ಣನೆ ಅನುಭೂತಿ ನೀಡಿದೆ. ಬುಧವಾರ ರಾತ್ರಿಯಿಂದಲೇ ಜಿಲ್ಲೆಯಲ್ಲಿ ಆರಂಭವಾದ ಮಳೆ, ಗುರುವಾರ ಬೆಳಗಿನ ವರಿಗೂ ಮುಂದುವರೆದಿದೆ. ಮಳೆಯ ನೀರು ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದೆ.

Advertisement

ಬಿಸಿಲಿನ ತಾಪಕ್ಕೆ ಬಸವಳಿದು ಹೋಗಿದ್ದ ಜಿಲ್ಲೆಯ ಜನರು ಮಳೆ ಆಗಮನವನ್ನೇ ಎದುರು ನೋಡುತ್ತಿದ್ದರು. ಇದೀಗ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಜನರು ಹೊರ ಬರದಂತಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹೊಸಪೇಟೆ ತಾಲೂಕಿನ ಬಸವನದುರ್ಗ ಹಾಗೂ ಪೋತಲಕಟ್ಟೆ ಗ್ರಾಮದಲ್ಲಿ ಮಳೆಗೆ ಎರಡು ಮನೆಗಳು ಉರುಳಿ ಬಿದ್ದಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next