Advertisement

ಪ್ರಾಣಿ, ಪಕ್ಷಿಗಳಿಗೆ ಮಡಕೆಯಲ್ಲಿ ನೀರು

10:37 PM Jan 09, 2020 | mahesh |

ಮಹಾನಗರ: ಕರಾವಳಿ ಭಾಗದಲ್ಲಿ ಉರಿ ಬಿಸಿಲು ಏರುತ್ತಿದ್ದು, ನದಿಗಳಲ್ಲಿನ ನೀರು ವಾಡಿ ಕೆ ಗಿಂತ ಮೊದಲೇ ಬತ್ತುತ್ತಿದೆ. ಕುಡಿಯಲು ನೀರಿ ಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರಲಾ ರಂಭಿಸಿವೆ. ಹೀಗಿರುವಾಗ, ಮಂಗಳೂರಿನ ಪ್ರಾಣಿ ಪ್ರೇಮಿ ತೌಸಿಫ್‌ ಅಹಮ್ಮದ್‌ ಅವರು ತನ್ನ ಸ್ವಂತ ಖರ್ಚಿನಲ್ಲಿ ಸಿಮೆಂಟ್‌ ಮಡಕೆಗಳನ್ನು ಖರೀದಿ ಮಾಡಿ ಪ್ರಾಣಿ, ಪಕ್ಷಿಗಳಿಗೆಂದು ಅದರಲ್ಲಿ ನೀರು ತುಂಬಿಸಿ ನಗರದ ಅಲ್ಲಲ್ಲಿ ಇಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Advertisement

ಈ ಹೊಸ ಯೋಜನೆಗೆ “ಪ್ರಾಜೆಕ್ಟ್ ಜಲ್‌’ ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ 100 ಮಡಕೆಗಳು ತಯಾರಾ ಗುತ್ತಿದ್ದು, ಇವು ಹಳದಿ, ಹಸುರು ಮತ್ತು ಕೆಂಪು ಬಣ್ಣದಲ್ಲಿರಲಿವೆ. ಮುಂದಿನ ಎರಡು ವಾರದಲ್ಲಿ ನಗರದ ಅಲ್ಲಲ್ಲಿಗೆ ಮಡಕೆಗಳ ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ.

ಮುಖ್ಯವಾಗಿ ನಗರದ ಅಂಗಡಿ ಗಳ ಬದಿಗಳಲ್ಲಿ, ಮನೆಗಳ ಟೆರೇಸ್‌ನಲ್ಲಿ ಈ ಮಡಕೆ ಇಡಲಾಗುತ್ತದೆ. ಸಾರ್ವಜನಿಕರು ಈ ಮಡಕೆಗೆ ನೀರು ಹಾಕುವಂತೆ ಕೇಳಿಕೊಳ್ಳಲಾಗುತ್ತದೆ. ಇದರಿಂದ ಪಕ್ಷಿಗಳು, ದನ, ಬೀದಿ ನಾಯಿ ಸಹಿತ ಪ್ರಾಣಿಗಳು ಬಾಯಾರಿದಾಗ ನೀರು ಕುಡಿಯಲು ಸಾಧ್ಯ. ನೀರು ಮಡಕೆಯಲ್ಲಿರುವದರಿಂದ ಶುದ್ಧವಾಗಿರುತ್ತದೆ.

ಪ್ರಾಣಿಪ್ರಿಯ ತೌಸಿಫ್‌ ಅವರು “ಸುದಿನ’ ಜತೆ ಮಾತನಾಡಿ, “ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷವಾಗಿ ಶಾಲಾ-  ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡ  ಬೇಕು. ಅದಕ್ಕೆಂದು ಈ ಯೋಜನೆಗೆ ನಗ ರದ ಕೆಲವೊಂದು ಶಾಲಾ-ಕಾಲೇಜುಗಳ ಸಹ ಯೋಗ ವನ್ನೂ ಪಡೆಯುತ್ತೇನೆ. ಶಾಲಾ- ಕಾಲೇಜುಗಳಲ್ಲಿಯೂ ಮಣ್ಣಿನ ಮಡಕೆ ಇಡುತ್ತೇವೆ. ಇದರೊಂದಿಗೆ ವಿದ್ಯಾರ್ಥಿಗಳು ಪ್ರಾಣಿ-ಪಕ್ಷಿಗಳ ಬಗ್ಗೆ ಆಸಕ್ತಿ ಮೂಡಿ ತಮ್ಮ ಹತ್ತೆವರಲ್ಲಿಯೂ ಈ ವಿಚಾರ ಹೇಳುತ್ತಾರೆ’ ಎಂದ್ದಾರೆ.

ತೌಸಿಫ್‌ ಅವರು ಈಗಾಗಲೇ ಪಕ್ಷಿಗಳಿಗೆಂದು ಪಿವಿಸಿ ಪೈಪ್‌ನಲ್ಲಿ ಗೂಡು ತಯಾರಿಸಿದ್ದು, ನಗರದ ಅನೇಕ ಭಾಗಗಳಲ್ಲಿ ಇಟ್ಟಿದ್ದಾರೆ. ಅವರು ಹೇಳುವಂತೆ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ಇಡಲಾಗಿದ್ದ ಗೂಡಿನಲ್ಲಿ ಈಗಾಗಲೇ ಪಕ್ಷಿಗಳು ಬಂದು ಕೂತಿವೆ. ಅಲ್ಲದೆ ಮೊಟ್ಟೆ ಇಟ್ಟಿವೆ. ಅಲ್ಲದೆ ನಗರದ ಬೀದಿ ನಾಯಿಗಳಿಗಳು ರಾತ್ರಿ ವೇಳೆ ವಾಹನ ಅಪಘಾತಕ್ಕೆ ಒಳಗಾಗಬಾರದೆಂದು ನಾಯಿಗಳ ಕುತ್ತಿಗೆಗೆ ರಿಫ್ಲೆಕ್ಟರ್‌ ಅಳವಡಿಸಿದ್ದಾರೆ.

Advertisement

ತೌಸಿಫ್‌ ಪ್ರಾಣಿ ಪ್ರೀತಿ
ತೌಸಿಫ್‌ ಅಹಮ್ಮದ್‌ ಅವರು ಪ್ರಾಣಿ ಪ್ರೇಮಿ. ನಗರದಲ್ಲಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ಆಯಾ ಪ್ರದೇಶಗಳಿಗೆ ತತ್‌ಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಾರೆ. ಬೀದಿ ನಾಯಿಗಳನ್ನು ರಕ್ಷಿಸಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಾರೆ. ತಾನು ಉದ್ಯಮಿಯಾಗಿದ್ದು, ತನ್ನ ಬಿಡುವಿನ ಸಮಯದಲ್ಲಿ ಈ ರೀತಿಯ ಸಮಾಜ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುತ್ತಾರೆ.

ನೀರಿಗೆ ಸಂಕಷ್ಟ ಪಡಬಾರದು
ಇನ್ನೇನು ಕೆಲವು ತಿಂಗಳಲ್ಲಿಯೇ ಬೇಸಗೆ ಆರಂಭವಾಗಲಿದ್ದು, ಈಗಲೇ ಕೆಲವೆಡೆ ನೀರಿನ ಕೊರತೆ ಉಂಟಾಗಿದೆ. ಹೀಗಿರುವಾಗ ಬೇಸಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿಗೆ ಸಂಕಷ್ಟ ಪಡಬಾರದು ಎಂಬ ಉದ್ದೇಶದಿಂದ ಸುಮಾರು 100 ಮಡಕೆ ಖರೀದಿಸಿ ನಗರದ ಅಲ್ಲಲ್ಲಿ ಇಡುತ್ತೇನೆ. ಅಕ್ಕ ಪಕ್ಕದ ಮಂದಿ ಅದಕ್ಕೆ ನೀರು ಹಾಕಿದರಾಯಿತು.
 - ತೌಸಿಫ್‌ ಅಹಮ್ಮದ್‌, ಪ್ರಾಣಿ ಪ್ರೇಮಿ

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next