Advertisement
ತುಂಗಭದ್ರಾ ಡ್ಯಾಂನಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 700 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 1280 ಕ್ಯೂಸೆಕ್ ನೀರು, ರಾಯ-ಬಸವಣ್ಣ ಕಾಲುವೆಗೆ ಜೂ.1ರಿಂದ ಡಿ.10ರ ವರೆಗೂ 250 ಕ್ಯೂಸೆಕ್ ನೀರು, ನದಿಗೆ ಪೂರಕವಾಗಿ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್ ನೀರು ಹರಿಸಲಾಗುವುದು. ಇನ್ನೂ ಎಡದಂಡೆ ಮುಖ್ಯ ಕಾಲುವೆ ಮತ್ತು ಮೇಲ್ಮಟ್ಟದ ಕಾಲುವೆಗೆ ಜು.25 ರಿಂದ ನ.30ರ ವರೆಗೂ 4100 ಕ್ಯೂಸೆಕ್‌ನಂತೆ ನೀರು, ಕಾರ್ಖಾನೆಗಳಿಗೆ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್, ಏತ ನೀರಾವರಿ ಯೋಜನೆಗಳಿಗೆ ಜು.25 ರಿಂದ ನ.30ರ ವರೆಗೂ 100 ಕ್ಯೂಸೆಕ್ ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ. ಆನ್ ಆ್ಯಂಡ್ ಆಫ್ ಪದ್ಧತಿ ಅಳವಡಿಕೆ: ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಒದಗಿಸಲು ಕಳೆದ ವರ್ಷದಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆನ್ ಆ್ಯಂಡ್ ಆಫ್ ಪದ್ಧತಿ ಅನುಸಾರ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.
Related Articles
Advertisement
ಇನ್ನೂ ವಿತರಣಾ ಕಾಲುವೆ 76, 85,87, 89, 90,91,92ರ ವರೆಗೂ ಸೆ.10ರ ಬೆಳಗ್ಗೆ 8 ರಿಂದ ಸೆ.13ರ ಬೆಳಗ್ಗೆ 8ರ ವರೆಗೂ, ಅ.10ರ ಬೆಳಗ್ಗೆ 8 ರಿಂದ ಅ.13ರ ಬೆಳಗ್ಗೆ 8ರ ವರೆಗೂ, ನ.10ರ ಬೆಳಗ್ಗೆ 8 ರಿಂದ ನ.13ರ ಬೆಳಗ್ಗೆ 8ರ ವರೆಗೂ, ಡಿ.10ರ ಬೆಳಗ್ಗೆ 8 ರಿಂದ ಡಿ.13ರ ಬೆಳಗ್ಗೆ 8ರ ವರೆಗೂ ಕಾಲುವೆಗೆ ನೀರು ಹರಿಸುವುದು ಸ್ಥಗಿತ ಮಾಡಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ಧರಿಸಿದ್ದಾರೆಂದು ನೀರಾವರಿ ಅಭಿಯಂತರರು ತಿಳಿಸಿದ್ದಾರೆ.