Advertisement
ವಾರಾಹಿ ಕಾಲುವೆ ನೀರು ದಬ್ಬೆಕಟ್ಟೆಯ ಸಮೀಪದಲ್ಲಿಯೇ ಹಾದುಹೋದ ಪರಿಣಾಮ ಕಾಲುವೆಯಲ್ಲಿ ಹರಿದುಬಂದ ಹೆಚ್ಚುವರಿ ನೀರನ್ನು ಸಮೀಪದ ತೋಡುಗಳಿಗೆ ಹಾಯಿಸುವ ಕೆಲಸ ನಿರಂತರವಾಗಿ ನಡೆಯುವ ಪರಿಣಾಮ ಗ್ರಾಮದಲ್ಲಿ ನೀರಿನ ಒರತೆ ಹೆಚ್ಚಾಗಿದೆ.
ಕಾಳಾವರ: ಆಸೋಡು, ವಕ್ವಾಡಿ, ದಬ್ಬೆಕಟ್ಟೆ ನಿವಾಸಿಗಳ ಬಹಳಷ್ಟು ನಿರೀಕ್ಷೆ ವಾರಾಹಿ ನೀರಿನ ಹರಿವಿಗೆ ವ್ಯವಸ್ಥೆಗೊಳಿಸಲಾಗಿದ್ದು ಈ ಭಾಗದ ಮಂದಿ ಕಾಳಾವರ ಗ್ರಾ.ಪಂ.ಗೆ ಕೃತಜ್ಞತೆ ಸಲ್ಲಿಸಿರುತ್ತಾರೆ. ಕಾಳಾವರ ಗ್ರಾ.ಪಂ.ಅಧ್ಯಕ್ಷ ಸುಖಾನಂದ ಹೆಗ್ಡೆ ಅವರ ಮನವಿ ಪುರಸ್ಕರಿಸಿದ ವಾರಾಹಿ ಯೋಜನೆಯ ಮುಖ್ಯ ಎಂಜಿನಿಯರ್ ಎ.17 ರಂದು ದಬ್ಬೆಕಟ್ಟೆ ತೋಡಿನ ಮೂಲಕ ನೀರನ್ನು ಹರಿಯಲು ಬಿಟ್ಟಿರುತ್ತಾರೆ. ಇದರಿಂದಾಗಿ ಆಸೋಡು, ದಬ್ಬೆಕಟ್ಟೆ, ವಕ್ವಾಡಿ, ಹಾಗೂ ಕಾಳಾವರ ಜನರಿಗೆ ಬೇಸಗೆಯಲ್ಲಿ ಬರಿದಾದ ಬಾವಿಯಲ್ಲು ನೀರು ಸಿಗುವಂತಾಗಿದೆ ಹಾಗೂ ಕೃಷಿ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ ಎಂದು ಕಾಳಾವರ ಗ್ರಾ.ಪಂ.ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ ಸ್ಥಳಕ್ಕೆ ಭೇಟಿಯಿತ್ತು ಉದಯವಾಣಿಗೆ ಮಾಹಿತಿ ನೀಡಿದರು.