Advertisement

ಶಾಸ್ತ್ರೀ ಜಲಾಶಯದಿಂದ ನದಿಗೆ ನೀರು

05:27 PM Mar 27, 2018 | |

ಆಲಮಟ್ಟಿ: ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯದ 9 ಗೇಟು ಹಾಗೂ ಜಲ ವಿದ್ಯುತ್‌ ಘಟಕದಿಂದ ಜಲಾಶಯದ ಮುಂಭಾಗಕ್ಕೆ ವ್ಯಾಪಕ ನೀರು ಹರಿದು ಬಿಡುತ್ತಿರುವುದ ರಿಂದ ಈ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.

Advertisement

ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಸಮರ್ಪಕ ಮಳೆಯಾಗದಿರುವುದರಿಂದ ನೀರಿಗಾಗಿ ಪರದಾಡುವಂತಾಗಿದೆ. ಇದೆಲ್ಲದರ ಮಧ್ಯೆಯೂ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡುವುದರಿಂದ ಜೂನ್‌ -ಜುಲೈ ತಿಂಗಳ ಅಂದರೆ ಮಳೆಗಾಲದ ಆರಂಭದವರೆಗೂ
ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲವೇ ಎನ್ನುವುದು ಕೂಡ ಯಕ್ಷ ಪ್ರಶ್ನೆಯಾಗಿದೆ.

ಸೋಮವಾರ 519.6 ಮೀ. ಎತ್ತರದ ಜಲಾಶಯದಲ್ಲಿ 509.88 ಮೀ. ಎತ್ತರದಲ್ಲಿ 27.74 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ ಜಲ ವಿದ್ಯುತ್‌ ಘಟಕದಿಂದ 2100 ಕ್ಯೂಸೆಕ್‌, ಗೇಟುಗಳಿಂದ 7063 ಕ್ಯೂಸೆಕ್‌, ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ 1124 ಕ್ಯೂಸೆಕ್‌ ಹಾಗೂ ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್‌ ಘಟಕಕ್ಕೆ 30 ಕ್ಯೂಸೆಕ್‌ ಸೇರಿ ಒಟ್ಟು 11,377 ಕ್ಯೂಸೆಕ್‌ ನೀರನ್ನು ಹೊರ
ಬಿಡಲಾಗುತ್ತಿದೆ. ಇನ್ನು ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ 488.61 ಮೀ. ಎತ್ತರದಲ್ಲಿ 19.204 ಟಿಎಂಸಿ ಅಡಿ ನೀರು
ಸಂಗ್ರಹವಿದ್ದು 8136 ಕ್ಯೂಸೆಕ್‌ ನೀರು ಒಳ ಹರಿವಿದ್ದು ಇದರಲ್ಲಿ ಎನ್‌ಎಲ್‌ಬಿಸಿ ಕಾಲುವೆಗೆ 11,715 ಕ್ಯೂಸೆಕ್‌, ಎನ್‌ಆರ್‌ಬಿಸಿ ಕಾಲುವೆಗೆ 2800 ಕ್ಯೂಸೆಕ್‌, ಆರ್‌ಎಲ್‌ ಐಎಸ್‌ಗೆ 353 ಕ್ಯೂಸೆಕ್‌, ಎಂಎಲ್‌ಐಎಸ್‌ಗೆ 140 ಕ್ಯೂಸೆಕ್‌, ಜಿಂದಾಲ್‌ಗೆ 37 ಕ್ಯೂಸೆಕ್‌, ವಿವಿಧ ಕುಡಿಯುವ ನೀರು ಯೋಜನೆಗೆ 50 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

ಆಲಮಟ್ಟಿ ಜಲಾಶಯದಲ್ಲಿ ಒಟ್ಟು ಸಂಗ್ರಹವಿರುವ ನೀರಿನಲ್ಲಿ 17.620 ಟಿಎಂಸಿ ಅಡಿ ಜಲಚರಗಳಿಗಾಗಿ ಮೀಸಲಿರುವ ನೀರು. ಅಂದರೆ ಜಲಾಶಯದ ಎತ್ತರದ ಮಟ್ಟ 506.87 ಮೀ. ಸಂಗ್ರಹವಿಟ್ಟುಕೊಂಡು ಜನ- ಜಾನುವಾರುಗಳಿಗೆ ಕುಡಿಯುವ ನೀರನ್ನೂ
ಸಂಗ್ರಹವಿರಿಸಿಕೊಂಡು ಇನ್ನುಳಿದ ನೀರನ್ನು ಬಳಸಿಕೊಳ್ಳಬಹುದಾಗಿದೆ. ಅಂದರೆ ಇನ್ನು 10.12 ಟಿಎಂಸಿ ಅಡಿ ನೀರಿನಲ್ಲಿಯೇ ಕುಡಿಯುವ ನೀರು ಸಂಗ್ರಹಮಾಡಿಕೊಂಡು ಮಾರ್ಚ್‌ 31ರವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ನೀರು
ಹರಿಸಬೇಕು. ಈಗ ಜಲಾಶಯದಿಂದ ವ್ಯಾಪಕವಾಗಿ ನೀರು ಹೊರಬಿಟ್ಟರೆ ಕಡು ಬೇಸಿಗೆಯಲ್ಲಿ ಅವಳಿ ಜಲಾಶಯ ವ್ಯಾಪ್ತಿಯ ಜನ-ಜಾನುವಾರುಗಳಿಗೆ ನೀರು ಕೊಡಲು ಸಾಧ್ಯವೇ ಎನ್ನುವುದು ಜನರ ದುಗುಡಕ್ಕೆ ಕಾರಣವಾಗಿದೆ.

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 505.17 ಮೀ.ಎತ್ತರದಲ್ಲಿ 13.172 ಟಿಎಂಸಿ ಅಡಿ ನೀರು ಸಂಗ್ರಹವಿದ್ದರಿಂದ ಕುಡಿಯುವ ನೀರಿಗೆ ಪರದಾಡುವಂತಾಗಿ ಜಲಚರಗಳ ಸಾವಿಗೂ ಕಾರಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂದುವರಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಬಸವ ಸಾಗರ ಜಲಾಶಯ ವ್ಯಾಪ್ತಿ ಕಾಲುವೆಗಳಿಗೆ ನೀರು ಹರಿಸಲು ಆಲಮಟ್ಟಿಯಿಂದ ಗೇಟುಗಳ ಮೂಲಕ ಹಾಗೂ ಜಲ ವಿದ್ಯುತ್‌ ಘಟಕದಿಂದ ಜಲಾಶಯದ ಮುಂಭಾಗಕ್ಕೆ ನೀರು ಬಿಡಲಾಗುತ್ತಿದೆ. 
 ಎಸ್‌.ಎಚ್‌. ಮಂಜಪ್ಪ, ಮುಖ್ಯಅಭಿಯಂತರ

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next