Advertisement

ಮಳೆಯಾಗದಿದ್ದರೆ ಬೆಳೆಗೆ ಡ್ಯಾಂನಿಂದ ನೀರು

05:19 PM Jun 29, 2021 | Girisha |

ಆಲಮಟ್ಟಿ: ಉತ್ತರಕ ರ್ನಾಟಕದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದ್ದು ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ಮಳೆಗಾಲ ಇನ್ನೂ ಮೂರು ತಿಂಗಳಿದ್ದು ಅಷ್ಟರಲ್ಲಿ ಮಳೆಯಾಗದಿದ್ದರೆ ಅಥವಾ ಶಾಸ್ತ್ರಿ ಜಲಾಶಯದಲ್ಲಿ 123 ಟಿಎಂಸಿ ಅಡಿ ನೀರು ತುಂಬಿದ ನಂತರ ರೈತರಿಗೆ ನೀರು ಕೊಡಲಾಗುವದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ಸೋಮವಾರ ಆಲಮಟ್ಟಿಯ ರಾಕ್‌ ಉದ್ಯಾನದಲ್ಲಿ ಸುದ್ದುಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಮಧ್ಯ ಭಾಗದಲ್ಲಿರುವ ಆಲಮಟ್ಟಿಯಲ್ಲಿ ಜಂಗಲ್‌ ಸಫಾರಿ ಮಾಡಿದರೆ ಅವಳಿ ಜಿಲ್ಲೆಗಳು ಅಭಿವೃದ್ಧಿಯಾಗಲಿವೆ. ಈಗಾಗಲೇ ಬೆಳಗಾವಿಯಲ್ಲಿ ಜಂಗಲ್‌ ಸಫಾರಿ ಮಾಡುವ ಮುಂದಾಲೋಚನೆಯಿಂದ ಹುಲಿ, ಸಿಂಹ ಹಾಗೂ ಜಿಂಕೆಗಳನ್ನು ಬಿಡಲಾಗಿದೆ ಎಂದರು.

ಉತ್ತರ ಕರ್ನಾಟದಲ್ಲಿ ಜೋಳ ವಿತರಣೆ ಮಾಡಲು 6.5 ಲಕ್ಷ ಟನ್‌ ಜೋಳ ಮತ್ತು ದಕ್ಷಿಣ ಭಾಗದಲ್ಲಿ ರಾಗಿ ವಿತರಣೆ ಮಾಡಲು 6.5 ಲಕ್ಷ ಟನ್‌ ರಾಗಿ ಅವಶ್ಯಕತೆಯಿದೆ. ಇದರಲ್ಲಿ 80 ಸಾವಿರ ಟನ್‌ ಜೋಳ ಸಂಗ್ರಹವಿದೆ. ಇನ್ನಷ್ಟು ಜೋಳ ಖರೀದಿಗೆ ಬೆಂಬಲ ಬೆಲೆ ನಿಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ನಂತರ ಜೋಳ ಹಾಗೂ ರಾಗಿಯೊಂದಿಗೆ 2 ಕೆಜಿ ಅಕ್ಕಿಯನ್ನು ಪಡಿತರ ವಿತರಣೆಯಲ್ಲಿ ನೀಡುವ ಚಿಂತನೆಯಿದೆ ಎಂದು ಹೇಳಿದರು. ಶಾಸಕ ಸಿದ್ದು ಸವದಿ, ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next