Advertisement

ಸರ್ಕಾರಿ ಕಾಲೇಜಿನ ಗಿಡಗಳಿಗೆ ನೀರಿನ ಭಾಗ್ಯ

10:31 AM Apr 01, 2022 | Team Udayavani |

ಜೇವರ್ಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ 50ಕ್ಕೂ ಹೆಚ್ಚು ಗಿಡಮರಗಳಿಗೆ ಕಾಲೇಜಿನ ಪ್ರಾಚಾರ್ಯ ಅಲ್ಲಾವುದ್ದೀನ್‌ ಸಾಗರ, ಉಪನ್ಯಾಸಕರು ಗುರುವಾರ ನೀರುಣಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಕಳೆದ ಎರಡು ವರ್ಷಗಳ ಹಿಂದೆ ಸ್ಥಳಿಯ ಅರಣ್ಯ ಇಲಾಖೆ ಸಿಬ್ಬಂದಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ನಿರ್ವಹಣೆ ಮಾಡಿದ್ದರು. ಪ್ರಸಕ್ತ ವರ್ಷದ ಕೆಂಡದಂತ ಬಿಸಿಲಿಗೆ ಕಾಲೇಜಿನ ಆವರಣದಲ್ಲಿರುವ ಗಿಡಮರಗಳು ಒಣಗಿ ಕೇವಲ ಟೊಂಗೆಗಳು ಕಾಣುತ್ತಿದ್ದವು. ಈ ಕುರಿತು “ಉದಯವಾಣಿ’ “ರಣರಣ ಬಿಸಿಲಿಗೆ ಒಣಗುತ್ತಿವೆ ಗಿಡಮರ’ ಎನ್ನುವ ಶೀರ್ಷಿಕೆಯಡಿ ಕಳೆದ ಮಾ. 30ರಂದು ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ನೀರಿನ ಟ್ಯಾಂಕರ್‌ ಮೂಲಕ ಕಾಲೇಜಿನ ಆವರಣದಲ್ಲಿನ ಎಲ್ಲ ಗಿಡಮರಗಳಿಗೆ ನೀರು ಹರಿಸಿದ್ದಾರೆ. ಸರ್ಕಾರಿ ಕನ್ಯಾ ಪ್ರೌಢಶಾಲೆ ಆವರಣದಲ್ಲಿ ನೂತನ ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದ ನೀರಿನ ಟ್ಯಾಂಕರ್‌ ಮೂಲಕ ಗುತ್ತಿಗೆದಾರ ಹಾಗೂ ಕಾಲೇಜಿನ ಸಿಬ್ಬಂದಿ ಜತೆಗೂಡಿ ಎಲ್ಲ ಗಿಡಮರಗಳಿಗೆ ನೀರು ಹರಿಸಿ ಪರಿಸರ ಉಳಿವಿಗೆ ನೆರವಾಗಿದ್ದಾರೆ.

ಕನ್ಯಾ ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ವೈ. ಗುಡುಮಿ, ಎನ್‌ಎಸ್‌ಎಸ್‌ ಅಧಿಕಾರಿ ಎಚ್‌.ಬಿ.ಪಾಟೀಲ, ಗುತ್ತಿಗೆದಾರ ಶರಣು ಗುತ್ತೇದಾರ, ದೈಹಿಕ ಶಿಕ್ಷಕಿ ಶಾಂತಾಬಾಯಿ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next