Advertisement

ಐದು ವರ್ಷಗಳಲ್ಲಿ ಎಲ್ಲ ಗ್ರಾಮಗಳಿಗೂ ಜಲಜೀವನ

12:23 PM May 07, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕೆ ಸುಮಾರು 40ರಿಂದ 50 ಗ್ರಾಮಗಳನ್ನು ತಾಂತ್ರಿಕ, ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಹಂತ-ಹಂತವಾಗಿ ಆಯ್ಕೆ ಮಾಡಲಾಗುತ್ತಿದೆ. ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಜಲಜೀವನ ಮಿಷನ್‌ ಯೋಜನೆ ಅನುಷ್ಠಾನಗೊಳಿಸಲು ಕ್ರಿಯಾಯೋಜನೆ ಸಿದ್ಧಗೊಳಿಸಲಾಗುತ್ತದೆ ಎಂದು ಜಿಪಂ ಸಿಇಒ ಡಾ| ಬಿ.ಸಿ.ಸತೀಶ ಹೇಳಿದರು.

Advertisement

ನಗರದ ಜಿಪಂ ಸಭಾಭವನದಲ್ಲಿ ನಡೆದ ಜಲ ಜೀವನ ಮಿಷನ್‌ ಜಿಲ್ಲಾಮಟ್ಟದ ಸಭೆಯಲ್ಲಿ ಕೇಂದ್ರ ಜಲ ಜೀವನ ಮಿಷನ್‌ ಯೋಜನೆಗಾಗಿ ಆಯ್ಕೆಗೊಂಡ ಗ್ರಾಮಗಳ ಕ್ರಿಯಾ ಯೋಜನೆ ಪರಿಶೀಲಿಸಿ ಅವರು ಮಾತನಾಡಿದರು. ಜಲಜೀವನ ಮಿಷನ್‌ ಯೋಜನೆಯ ಫಲಾನುಭವಿ ಗ್ರಾಮಗಳು ಸಾಮಾನ್ಯ ಸಭೆ ಜರುಗಿಸಿವೆ. ಈ ಯೋಜನೆಗೆ ಆಯ್ಕೆಯಾಗುವ ಗ್ರಾಮಗಳು ಶೇ.10ವಂತಿಗೆ ಪಾವತಿಸಬೇಕು. ರಾಜ್ಯ ಸರ್ಕಾರ ಶೇ.45 ಮತ್ತು ಕೇಂದ್ರ ಸರ್ಕಾರ ಶೇ.45 ಅನುದಾನ ಬಿಡುಗಡೆ ಮಾಡುತ್ತವೆ. ಗ್ರಾಪಂ ಸಾಮಾನ್ಯ ಸಭೆ ಮೂಲಕ ಯೋಜನೆ ಅನುಷ್ಠಾನಕ್ಕೆ ಮತ್ತು ಶೇ.10 ವಂತಿಗೆ ಕಟ್ಟಲು ಒಪ್ಪಿ ಠರಾವು ಪಾಸು ಮಾಡಿರುವ ಗ್ರಾಪಂಗಳ ಕ್ರಿಯಾ ಯೋಜನೆ ಪರಿಶೀಲನೆ ನಡೆದಿದ್ದು, ನಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ರಾಜಶೇಖರ್‌ ಮುನವಳ್ಳಿ, ಜಿಲ್ಲಾ ಪಂಚಾಯತ್‌ ಪ್ರಭಾರ ಉಪಕಾರ್ಯದರ್ಶಿ ಬಿ.ಎಸ್‌. ಮೂಗನೂರಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್‌ ಐ.ಬಿ., ಮಲಪ್ರಭಾ ಬಲದಂಡೆ ಕಾಲುವೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅ ಧಿಕಾರಿಗಳು, ಪಿಡಿಒಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.

ಗ್ರಾಮೀಣ ಭಾಗದ ಪ್ರತಿ ಮನೆ ಪ್ರತಿ ಸದಸ್ಯರಿಗೆ ಪ್ರತಿದಿನ 55 ಲೀಟರ್‌ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಜಲಜೀವನ ಮಿಷನ್‌ ಯೋಜನೆ ರೂಪಿಸಿದೆ. ಈ ಯೋಜನೆಯ 2019-20 ರಿಂದ 2020-24ರ ವರೆಗಿನ ಐದು ವರ್ಷ ಅವಧಿಯದ್ದಾಗಿದೆ ಎಂದು ಜಿಪಂ ಸಿಇಒ ಡಾ| ಸತೀಶ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next