Advertisement

ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು; ಜನ ಜಾಗೃತರಾಗಲು ಸೂಚನೆ

07:46 PM Jul 07, 2022 | Team Udayavani |

ರಬಕವಿ-ಬನಹಟ್ಟಿ : ಮಳೆಗಾಲ ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದರೂ ಅಷ್ಟೇನು ದೊಡ್ಡಪ್ರಮಾಣದ ಮಳೆ ಇಲ್ಲದೆ ಸೊರಗಿರುವ ಈ ಭಾಗದ ಜನಕ್ಕೆ ಈಗ ಸಮೀಪದ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲು ಪ್ರಾರಂಭಿಸಿದೆ.

Advertisement

ಗುರುವಾರ ಸಂಜೆಯವರೆಗೆ ಕೃಷ್ಣೆ ಈಗ ತನ್ನ ಎರಡು ವಡಲುಗಳ ಮೈದುಂಬಿಕೊಂಡು ಹರಿಯುತ್ತಿದ್ದಾಳೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಹಾಗೂ ದೂದಗಂಗಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದರಿಂದ ಈಗ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಎಂದು ತಹಸೀಲ್ದಾರ ಎಸ್. ಬಿ. ಇಂಗಳೆ ತಿಳಿಸಿದರು.

ಪ್ರವಾಹ ಬೀತಿ ಇಲ್ಲ; ಮುಂದಿನ ವಾರದಲ್ಲಿ ನದಿಯು ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಈಗ ಪ್ರವಾಹದ ಯಾವುದೇ ಭಯಬೇಡ, ೨ ಲಕ್ಷ ಕ್ಯೂಸೆಕ್ಸ ನೀರು ನದಿಗೆ ಬಂದಾಗ ಮಾತ್ರ ಪ್ರವಾಹ ಎದುರಿಸಬೇಕಾಗುತ್ತದೆ. ಈಗ ನದಿ ಪಾತ್ರದ ಪ್ರತಿ ಗ್ರಾಮದಲ್ಲಿಯೂ ಒಬ್ಬ ನೋಡಲ ಅಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ನೀರಿನ ಏರಿಳಿತಗಳ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹತಿ ರವಾನೆಯಾಗುತ್ತಿರುತ್ತದೆ. ಈ ಬಾರಿಯೂ ತಾಲೂಕು ಆಢಳಿತ ಪ್ರವಾಹ ಮುನ್ನೆಚ್ಚರಿಕಾ ಕ್ರಮಗಳನ್ನು ಭಹಳ ಜಾಗರುಕತೆಯಿಂದ ನಿಭಾಯಿಸಲಿದೆ. ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡು ನದಿದಡದಲ್ಲಿನ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ತೀರ ನದಿ ಹತ್ತಿರದಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಉತ್ತಮ ಎಂದು ತಹಸೀಲ್ದಾರ ಎಸ್. ಬಿ. ಇಂಗಳೆ ಪತ್ರಿಕೆಗೆ ತಿಳಿಸಿದರು.

ಗುರುವಾರ ದುದಗಂಗಾ ಜಲಾಶಯದಿಂದ 14120 ಕ್ಯೂಸೆಕ್ಸ , ರಾಜಾಪುರ ಡ್ಯಾಂ ದಿಂದ 65870 ಕ್ಯೂಸೆಕ್ಸ ನೀರು ನದಿಗೆ ಹರಿದು ಬರುತ್ತಿದ್ದು, ಗುರುವಾರ ಸಂಜೆಯಿಂದ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ನೀರಿನ ಪ್ರಮಾಣದಲ್ಲಿ ಅಂದರೆ 65000 ಕ್ಯೂಸೆಕ್ಸ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಎಸ್. ನಾಯಕ ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next