Advertisement

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

09:22 PM Apr 18, 2024 | Team Udayavani |

ಸುಳ್ಯ: ಸ್ನಾನ ಮಾಡುವ ವೇಳೆ ಮಂಡೆಕೋಲು ಗ್ರಾಮದ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಎ.17ರಂದು ಸಂಜೆ ಬಳಿಕ ಸಂಭವಿಸಿದೆ.

Advertisement

ಈಶ್ವರಮಂಗಲದ ಪ್ರವೀಣ್‌(38) ಮೃತರು.

ಪ್ರವೀಣ್‌ ಅವರು ಎ.17ರಂದು ತನ್ನ ಸ್ನೇಹಿತರೊಂದಿಗೆ ಮಂಡೆಕೋಲು ಗ್ರಾಮದ ಪರಪೆಗಮಂನ್‌ ಗಾಯ ಎಂಬಲ್ಲಿ ಹರಿಯುವ ಪಯಸ್ವಿನಿ ನದಿಗೆ ಮೀನು ಹಿಡಿಯಲು ತೆರಳಿದ್ದವರು, ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಪ್ರವೀಣ್‌ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಅಲ್ಲಿದ್ದವರು ಇತರರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಪೈಚಾರಿನ ಮುಳುಗು ತಜ್ಞರ ತಂಡ ಆಗಮಿಸಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಮೇಲೆತ್ತಿದ್ದು, ಅದಾಗಲೇ ಆ ವ್ಯಕ್ತಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next