ಚಿಕ್ಕಬಳ್ಳಾಪುರ: ಪಾತಾಳಕ್ಕೆ ಕುಸಿದಿರುವ ರಾಜ್ಯದ ಅಂತರ್ಜಲಮಟ್ಟ ವೃದ್ದಿಸಿ ರೈತನ ಹೊಲಕ್ಕೆ ನೀರು ಹಾಗೂ ಕುಟುಂಬಕ್ಕೆ ಉದ್ಯೋಗ ಒದಗಿಸುವಂತಹ ಅಂತರ್ಜಲ ಚೇತನ ಯೋಜನೆ ಯನ್ನು ರಾಜ್ಯದ ಪ್ರತಿ ಜಿಲ್ಲೆಗೂ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಮರಳಿ ಗ್ರಾಪಂ ವ್ಯಾಪ್ತಿಯ ಗವಿಗಾನಹಳ್ಳಿ ಹಾಗೂ ಕುಪ್ಪಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತನೂರು ಗ್ರಾಮದಲ್ಲಿ ಮಂಗಳವಾರ ನರೇಗಾ ಯೋಜ ನೆಯಡಿ ರೈತರ ಹೊಲಗಳಲ್ಲಿ ಅಂತರ್ಜಲ ಚೇತನ ಯೋಜನೆ ಯಡಿ ಬದು ನಿರ್ಮಾಣ ಕಾಮಗಾರಿಗೆ ಹಾಗೂ ಉತ್ತರ ಪಿನಾಕಿನಿ ನದಿ ಪುನಶ್ಚೇತನಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಡ ಳಿತ ಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೊದಿ, ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿ ಸುವ ಕಾಮಗಾರಿಗಳಿಗೆ ಒತ್ತು ಕೊಡಲಾ ಗುವುದು ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಗ್ರಾಮೀಣಾಭ ವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತ ಅನಿರುದ್ ಶ್ರವಣ್, ಜಿಲ್ಲಾಧಿಕಾರಿ ಲತಾ, ಎಸ್ಪಿ ಮಿಥುನ್ ಕುಮಾರ್, ಸಿಇಒ ಫೌಝೀಯಾ ತರುನ್ನುಮ್ ಇದ್ದರು.
ಜಿಲ್ಲೆಯಲ್ಲಿ ಒಟ್ಟು 15,979 ಕಾಮಗಾರಿಗೆ ಚಾಲನೆ: ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಜೊತೆಗೂಡಿ ಜಿಲ್ಲೆಯಲ್ಲಿ ಅಂತರ್ಜಲ ಚೇತನ ಯೋಜನೆಯಡಿ ನದಿ ಪುನಃಶ್ಚೇತನಕ್ಕಾಗಿ ಸುಮಾರು 5760 ಕಾಮಗಾರಿಗಳು, ಜಲಾಮೃತ -ಜಲಾನಯನ ಅಭಿವೃದ್ಧಿ ಯಡಿ 2129 ಹಾಗೂ ಜಲ ಸಂರಕ್ಷಣೆಯಡಿ 8090 ಕಾಮ ಗಾರಿಗಳು ಸೇರಿದಂತೆ ಒಟ್ಟು 15979 ಕಾಮಗಾರಿಗಳಿಗೆ ಚಾಲನೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ರೈತಾಪಿ ಕೂಲಿ ಕಾರ್ಮಿಕರು ಸಹ ನರೇಗಾ ಯೋಜನೆ ಯಲ್ಲಿ ನಮ್ಮ ನಿರೀಕೆ¡ಗೂ ಮೀರಿ ತೊಡಗಿಸಿಕೊಳ್ಳುತ್ತಿದ್ದಾರೆ.
-ಕೆ.ಎಸ್.ಈಶ್ವರಪ್ಪ, ಆರ್‌ಡಿಪಿಆರ್ ಸಚಿವ