Advertisement

ಸ್ವತ್ಛ ಭಾರತ ಯಶಸ್ಸಿಗೆ ನೀರಿನ ಬರ!

11:54 AM May 14, 2017 | Harsha Rao |

ಹೊಸದಿಲ್ಲಿ: ಪ್ರಧಾನಿ ಮೋದಿ ಅವರ ಕನಸಿನ ಸ್ವತ್ಛ ಭಾರತ ಅಭಿಯಾನದ ಯಶಸ್ಸಿಗೆ ನೀರಿನ ಬರ ಅಡ್ಡಿಯಾಗಿದೆ! ಸ್ವತ್ಛ ಭಾರತ ಅಭಿಯಾನದಡಿ ನಿರ್ಮಿಸಿರುವ 10 ಶೌಚಾಲಯಗಳ ಪೈಕಿ 6ರಲ್ಲಿ ನೀರಿಲ್ಲ. ಹೀಗಾಗಿ ಶೇ.60ರಷ್ಟು ಸ್ವತ್ಛ ಭಾರತ ಶೌಚಾಲಯಗಳು ಬಳಕೆಯೇ ಆಗುತ್ತಿಲ್ಲ.

Advertisement

ಈ ಬರದ ಸಂಗತಿ ಬಯಲಾಗಿರುವುದು ಸ್ವತಃ ಸರಕಾರ ನಡೆಸಿದ ಸಮೀಕ್ಷೆಯಿಂದ. ದೇಶದ ಶೌಚಾಲಯ ಸೌಲಭ್ಯ ಅಭಿಧಿವೃದ್ಧಿಯಾಗುತ್ತಿದೆ ಎನ್ನುವಾಗಲೇ ನೀರಿನ ಬರ ಎದುರಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್‌ಡಿಎ ಸರಕಾರ, ಮುಂದಿನ ಚುನಾವಣೆ ವೇಳೆಗೆ ಭಾರತವನ್ನು ಬಯಲು ಶೌಚಮುಕ್ತವಾಗಿಸುವ ಪಣತೊಟ್ಟಿತ್ತು.

ಅದರಂತೆ ಸರಕಾರದ ಸಹಾಯನದಡಿಯಲ್ಲಿ 3.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೂ ನೀರಿನ ಬರದಿಂದಾಗಿ ಪ್ರಸ್ತುತ ದೇಶದ ಶೇ.55.4 ಮಂದಿಯ ಶೌಚಕ್ರಿಯೆ ಬಯಲಲ್ಲೇ ನಡೆಯುತ್ತಿದೆ. ಮೊದಲು ಹೊಸದಾಗಿ ನಿರ್ಮಿಸಿದ ಶೌಚಾಲಯ ಬಳಸಲು ಸಾರ್ವಜನಿಕರು ಹಿಂದೇಟು ಹಾಕಿದ್ದರು. ಜಾಹೀರಾತು ಸೇರಿ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗುತ್ತಿರುವ ನಡುವೆಯೇ ನೀರಿನ ಬರ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next