Advertisement

ಇಂಗುಗುಂಡಿಗಳ ರಚನೆಯಿಂದ ಜಲಸಂರಕ್ಷಣೆ

12:39 PM Dec 05, 2018 | |

. ಕೊಳವೆ ಬಾವಿ ನಿರ್ಮಿಸುವುದರಿಂದ ಜಲ ಮೂಲಗಳಿಗೆ ಯಾವ ರೀತಿಯ ಹಾನಿ ಉಂಟಾಗುತ್ತದೆ?
ನೀರಿನ ಸಮಸ್ಯೆ ಇರುವವರು ತಮ್ಮ ಅವಶ್ಯಕತೆಗಳಿಗಾಗಿ ಕೊಳವೆಬಾವಿಯನ್ನು ತೆಗೆಯುತ್ತಾರೆ. ಕೊಳವೆ ಬಾವಿ ತೆಗೆದಾಗ ಭೂಮಿಯ ಮೇಲ್ಫಾಗದಲ್ಲಿ ಅಂದರೆ 90 ಪೀಟ್‌ ಗಳಲ್ಲೇ ನೀರು ದೊರೆತರೆ ಅದರಿಂದ ಇತರ ಜಲ ಮೂಲಗಳ ನೀರು ಬತ್ತುವ ಸಾಧ್ಯತೆ ಇರುತ್ತದೆ. ಆದರೆ ಭೂಮಿಯ ಅಡಿಭಾಗದಲ್ಲಿ ದೊರೆಯುವ ನೀರಿನಿಂದ ಇತರ ಜಲಮೂಲಗಳಿಗೆ ಹೆಚ್ಚು ಪರಿಣಾಮ ಬೀರುವುದಿಲ್ಲ.

Advertisement

. ಜಲಮಾಲಿನ್ಯ ತಡೆಗಟ್ಟಲು ಯಾವ ರೀತಿಯ ಕ್ರಮಕೈಗೊಳ್ಳಬಹುದು?
ಕಾರ್ಖಾನೆಗಳಿಂದ ಬರುವ ಕಲುಷಿತ ನೀರನ್ನು ನದಿಗಳಿಗೆ ಬೀಡುವ ಪರಿಪಾಠ ಹೆಚ್ಚುತ್ತಿದೆ. ಅದನ್ನು ತಡೆಯಬೇಕಾಗಿದೆ. ಅದನ್ನು ಹೊರತುಪಡಿಸಿ ನದಿ, ತೋಡುಗಳಲ್ಲಿ ಪ್ರಾಣಿಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದನ್ನು ನಿಲ್ಲಿಸಬೇಕು. ಪ್ರಸ್ತುತ ಬಹುತೇಕ ಭಾಗಗಳಲ್ಲಿ ಸೇತುವೆಯಿಂದ ಕಸದ ರಾಶಿಗಳನ್ನು ನದಿಗೆ ಬಿಸಾಡಲಾಗುತ್ತಿದೆ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸಂಬಂಧಪಟ್ಟ ಇಲಾಖೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ಜನರಿಗೆ ಈ ಬಗ್ಗೆ ಯೋಚನೆ ಇಲ್ಲದಾಗಿದೆ.

. ಹರಿವ ಜಲಮೂಲಗಳನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು?
ಅಣೆಕಟ್ಟುಗಳನ್ನು ನಿರ್ಮಿಸಿ ಸಮುದ್ರಕ್ಕೆ ಹೋಗುವ ನೀರನ್ನು ತಡೆಯುವಂತಹ ಕೆಲಸ ಆಗಬೇಕು. ಅಲ್ಲಲ್ಲಿ ತಡೆ ಮಾಡಿ ನೀರನ್ನು ಬಳಸಿಕೊಳ್ಳುವ ಕೆಲಸ ಮಾಡಿದರೆ ಆ ಪ್ರದೇಶದವರ ಬಳಕೆಗೂ ಅನುಕೂವಾಗುತ್ತದೆ.

. ಹಳ್ಳಿಗಳನ್ನು ನೀರಿನ ಅಭಾವ ತಲೆದೂರುತ್ತಿದ್ದು ಅದನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳೇನು?
ಹವಾಮಾನ ವೈಪರೀತ್ಯದಿಂದಾಗಿ ನೀರಿನ ಒರತೆಗಳಲ್ಲೂ ಸಮಸ್ಯೆಗಳಾಗಿದೆ. ಹಳ್ಳಿಗಳಲ್ಲೂ ನೀರಿನ ಅಭಾವಗಳು ಸೃಷ್ಠಿಯಾಗುತ್ತಿದೆ. ಯಾವುದೋ ಉತ್ತಮ ದೃಷ್ಟಿಯಿಂದ ಮರಳುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ನದಿ ದಡಗಳಲ್ಲಿ ಮರಳು ಹೆಚ್ಚಾದರೆ ನೀರು ಸಂಗ್ರಹವಾಗಲು ಜಾಗದ ಕೊರತೆ ಎದುರಾಗುತ್ತದೆ. ತೋಡುಗಳ ಹೂಳೆತ್ತುವ ಕೆಲಸ, ಮಳೆಗಾಲದಲ್ಲಿ ಇಂಗು ಗುಂಡಿಗಳ ರಚನೆ, ನೀರಿನ ವ್ಯರ್ಥ ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ.

. ಬೇಸಗೆ ಬರುವ ಮುನ್ನವೇ ಜಲಸಂರಕ್ಷಣೆಗೆ ಸ್ಥಳಿಯಾಡಳಿತ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು?
ಮಳೆಗಾಲದಲ್ಲಿ ನೀರು ಇಂಗಿಸುವ ಕಾರ್ಯಮಾಡಿದರೆ ಅದರ ಫಲ ಬೇಸಗೆ ಕಾಲದಲ್ಲಿ ಸಿಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಇಂಗು ಗುಂಡಿಗಳ ರಚನೆ ಮಾಡಲು ಕ್ರಮ ಕೈಗೊಳ್ಳಬೇಕು. ಹಿಂಗಾರು ಮಳೆಯನ್ನು ಸಮುದ್ರಕ್ಕೆ ಹೋಗಲು ಬಿಡಬಾರದು. ಅದರೊಂದಿಗೆ ಚರಂಡಿ, ನದಿಮೂಲಗಳ ಹೂಳೆತ್ತುವ ಕೆಲಸವಾಗಬೇಕಾಗಿದೆ.

Advertisement

 ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next