ಸುರತ್ಕಲ್: ನೀರಿನ ಮಿತವ್ಯಯ, ಸಮರ್ಪಕ ನಿರ್ವಹಣೆಗಾಗಿ ಇಂಧನ ಮತ್ತು ಪರಿಸರ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಯನ್ನು ಎಂಆರ್‌ಪಿಎಲ್ ಕಂಪನಿಯು ಪಡೆದುಕೊಂಡಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಹೌಸಿಂಗ್ ಆಂಡ್ ಅರ್ಬನ್ ಅಫೇರ್ಸ್ ಮಿನಿಸ್ಟ್ರಿಯ ಸಚಿವ ಕೌಶಲ್ ಕಿಶೋರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕಂಪೆನಿಯ ಆಪರೇಷನ್ ವಿಭಾಗದ ವೆಂಕಟೇಶ್ ಎಂ ನಾಯಕ್, ಎಚ್‌ಎಸ್‌ಇ ವಿಭಾಗದ ಎಂಜಿನಿಯರ್ ಅರ್ಪಿತ್ ಗೌರ್,ಎಂಆರ್‌ಪಿಎಲ್ ತಂಡದ ಪರವಾಗಿ ಪ್ರಶಸ್ತಿಯನ್ನು ಪಡೆದರು.
ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ರಕ್ಷಣೆಗೆ ಕೊಡುಗೆ ನೀಡಲು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರತಿ ಕೈಗಾರಿಕಾ ವಲಯಕ್ಕೆ ನೀಡಲಾಗುತ್ತಿದೆ.
ನೀರಿನ ಕೊರತೆಯ ಸವಾಲಿನ ಅವಧಿಯಲ್ಲಿ ಶುದ್ಧ ನೀರಿನ ಅವಲಂಬನೆಯನ್ನು ಕಡಿಮೆ ಮಾಡಲು 2023ರ ಎಪ್ರಿಲ್‌ನಿಂದ ಜೂನ್‌ವರೆಗಿನ ಬೇಸಗೆಯ ತಿಂಗಳುಗಳಲ್ಲಿ ಸಂಸ್ಕರಣಾಗಾರವು ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಕೈಗೊಂಡಿದೆ.
ಸಂಸ್ಕರಣಾಗಾರವು ತೆಗೆದುಕೊಂಡ ಕ್ರಮಗಳು ತನ್ನದೇ ಆದ ಸುಸ್ಥಿರತೆಗೆ ಕೊಡುಗೆ ನೀಡಿದ್ದು ಮಾತ್ರವಲ್ಲದೆ ಮಂಗಳೂರು ನಗರದ ನಿವಾಸಿಗಳಿಗೆ ತನ್ನದೇ ಅಣೆಕಟ್ಟು ನೀರು ಹರಿಸುವ ಮೂಲಕ ಪ್ರಯೋಜನವನ್ನು ನೀಡಿವೆ. ಸಂಸ್ಕರಿಸಿದ ನಗರದ ಒಳಚರಂಡಿ ನೀರು, ತನ್ನದೇ ಸಂಸ್ಕರಣ ಘಟಕವನ್ನು ಸಂಸ್ಥೆ ಹೊಂದಿದೆ.