ಕಾರ್ಕಳ: ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾಧಿಗಳ ಸಂಘ, ಕಾರ್ಕಳ ತಾಲೂಕು ಆಡಳಿತ ಕಾರ್ಕಳ, ಕಾರ್ಕಳ ಪ್ರಾದೇಶಿಕ ಅರಣ್ಯ ವಲಯ ಕಾರ್ಕಳ ವನ್ಯಜೀವಿ ವಲಯ ಇವುಗಳ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಜಲ ಸಂರಕ್ಷಣೆ ಅಭಿವೃದ್ಧಿ, ಮಾಲಿನ್ಯ ರಹಿತ ಜಲ, ವಾಯುವಿನ ಹಕ್ಕು ಬಗ್ಗೆ ಮಾಹಿತಿ ಕಾರ್ಯಕ್ರಮ ಸ್ತ್ರೀ ಶಕ್ತಿ ಸಭಾಭವನ ಕಾರ್ಕಳ ಇಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಇವರು ಕಾರ್ಯಕ್ರಮ ಉದ್ಘಾಟಿಸುವರು. ನ್ಯಾಯವಾಧಿಗಳ ಸಂಘದ ಪ್ರ. ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆ ವಹಿಸಲಿರುವರು.ತಹಶಿಲ್ದಾರ್ ಅನಂತಕೃಷ್ಣ, ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯಾರಣ್ಯಧಿಕಾರಿ ಪ್ರಕಾಶ್ಚಂದ್ರ ಮತ್ತಿತರರ ಗಣ್ಯರು ಉಪಸ್ಥಿತಿರಿರುವರು ಎಂದು ಕೋರ್ಟ್ ಪ್ರಕಟನೆ ತಿಳಿಸಿದೆ