Advertisement
ಅಂಚೆಚೀಟಿಗಳು1990ರಲ್ಲಿ ಅಂಚೆ ಇಲಾಖೆಯು ಸೇಫ್ ವಾಟರ್ (ಸ್ವತ್ಛ ಜಲ) ಎಂಬ ಸಂದೇಶ ಹೊತ್ತ 4 ರೂ.ಮುಖಬೆಲೆಯ ಅಂಚೆಚೀಟಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಮಹಿಳೆಯೊಬ್ಬಳು ಬೋರ್‌ವೆಲ್‌ನಿಂದ ನೀರು ಸೇದುವ ಚಿತ್ರವಿತ್ತು. ಅನಂತರ ಎರಡನೇ ಅಂಚೆ ಚೀಟಿ 2007ರ ಡಿಸೆಂಬರ್ 28ರಂದು ರಾಷ್ಟ್ರೀಯ ಜಲದಿನದ ಅಂಗವಾಗಿ ಹೊರಬಂದಿತ್ತು. ಈ ಸ್ಟಾಂಪ್ 5ರೂ. ಮುಖಬೆಲೆ ಹೊಂದಿತ್ತು.
ಅಂಚೆ ಇಲಾಖೆಯು 25 ಪೈಸೆ ಮುಖಬೆಲೆಯ ಮೇಘದೂತ ಪೋಸ್ಟ್ ಕಾರ್ಡ್ ಬಿಡುಗಡೆಗೊಳಿಸಿತ್ತು. ಇದರಲ್ಲಿ ಅಂತರ್ಜಲ ಅತಿ ಮುಖ್ಯವಾಗಿದ್ದು, ಅದನ್ನು ಮಿತವಾಗಿ ಬಳಸಿ ಎಂಬ ಸಂದೇಶವಿತ್ತು. ಕಾರ್ಡ್‌ನಲ್ಲಿ ಮಹಿಳೆ ಬೊರ್‌ವೆಲ್‌ನಿಂದ ನೀರು ಸೇದುವ ಚಿತ್ರವೂ ಅದರಲ್ಲಿತ್ತು. ಇದಾದ ಅನಂತರ 2013ರ ಡಿ. 12ರಂದು 50 ಪೈಸೆ ಮುಖಬೆಲೆಯ ಮತ್ತೂಂದು ಪೋಸ್ಟ್‌ಕಾರ್ಡ್ ಅನ್ನು ಅಂಚೆ ಇಲಾಖೆ ಬಿಡುಗಡೆಗೊಳಿಸಿದೆ. ವಿಶೇಷ ಅಂಚೆ ಲಕೋಟೆ
1999ರ ನವೆಂಬರ್ 23ರಂದು ಪುಟ್ಟಪರ್ತಿ ಶ್ರೀ ಸತ್ಯಸಾಯಿ ಕುಡಿಯುವ ನೀರಿನ ಯೋಜನೆ ಬಗ್ಗೆ ವಿಶೇಷ ಅಂಚೆ ಲಕೋಟೆ ಹಾಗೂ 2015ರ ಜು.7ರಂದು ಕೇಂದ್ರ ಸರಕಾರದ ನೀರು ಸಂರಕ್ಷಣೆ ಯೋಜನೆಗೆ ಚಾಲನೆ ನೀಡಿದ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಇಲಾಖೆ ಹೊರತಂದಿದೆ.
Related Articles
ಇತ್ತೀಚಿನ ದಿನಗಳಲ್ಲಿ ಜೀವಜಲ ಕಡಿಮೆಯಾಗುತ್ತಿದ್ದು, ಜೀವಜಲದ ಮಹತ್ವ ಈಗ ಅರಿವಾಗುತ್ತಿದೆ. ಜೀವಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ನೀರು ಉಳಿಸುವ ಅಭಿಯಾನದ ಸಂದೇಶ ಹೊತ್ತ ಪೋಸ್ಟ್ ಕಾರ್ಡ್, ಲಕೋಟೆಯನ್ನು ಅಂಚೆ ಇಲಾಖೆಯ ಮೂಲಕ ಬಿಡುಗಡೆಗೊಳಿಸಬಹುದು.
– ಎಂ.ಕೆ.ಕೃಷ್ಣಯ್ಯ, ಹಿರಿಯ ಅಂಚೆಚೀಟಿ ಸಂಗ್ರಹಕಾರರು ಉಡುಪಿ
Advertisement