Advertisement

ನೀರು ಶುದ್ಧೀಕರಣ ಘಟಕ ಪರಿಶೀಲನೆ

06:07 PM Jul 10, 2022 | Team Udayavani |

ಯಾದಗಿರಿ: ಹೊಸಳ್ಳಿ ಕ್ರಾಸ್‌ ಬಳಿಯಿರುವ ನೀರು ಶುದ್ಧೀಕರಣ ಘಟಕಕ್ಕೆ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಅಶುದ್ಧ ನೀರು ಕುಡಿಯಲು ಪೂರೈಕೆ ಆಗುತ್ತದೆ ಎಂಬ ಜನರ ಆರೋಪ ಗಮನಕ್ಕೆ ಬಂದಿದ್ದರಿಂದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಲಾಗಿದ್ದು, ಶುದ್ಧ ಕುಡಿವ ನೀರು ನಗರಕ್ಕೆ ಪೂರೈಸುವಂತೆ ಸೂಚಿಸಿದರು.

ಇದೀಗ ಮಳೆಗಾಲ ಜೋರಾಗಿ ಆರಂಭವಾಗಿದೆ. ಜನರಿಗೆ ನಾವು ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಇದು ನಮ್ಮ ಪ್ರಮುಖವಾದ ಜವಾಬ್ದಾರಿ ಕೂಡ ಆಗಿದೆ. ಹೀಗಾಗಿಯೇ ನೀರು ಶುದ್ಧೀಕರಣ ಮಾಡಿ ಬಿಡುವಂತೆ ಹೇಳಿದರು.

ಯಾವುದೇ ರೀತಿಯಿಂದ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗಬಾರದು. ಹೀಗಾಗಿಯೇ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜನರು ಕೂಡ ನಿರಾಳವಾಗಿ ಇರಬಹುದು. ನಿಮ್ಮ ಆರೋಗ್ಯ ಹಿತ ಕಾಯಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಅಧಿಕಾರಿಗಳು ಕೂಡ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ನೀರಿನ ವಿಷಯದಲ್ಲಿ ನಿರ್ಲಕ್ಷ್ಯತನ ಮಾಡಿದರೆ ಅವರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಇಇ ರಜನಿಕಾಂತ, ಜೆಇ ರಾಕೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next