Advertisement
ಪಟ್ಟಣದ ಆದರ್ಶ ನಗರದಲ್ಲಿನ ಸ್ನೇಹಸೌಧಕ್ಕೆ ಭೇಟಿ ನೀಡಿ ಮಾತನಾಡಿದರು. ತಾಲೂಕಿನ ನೀರಿನ ಸಮಸ್ಯೆಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಗಮನಕ್ಕೆ ತಂದಿದ್ದಾರೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆ ಹರಿಸುವ ದೃಷ್ಟಿಯಿಂದ ಜಲಧಾರೆ ಯೊಜನೆಗೆ ಒತ್ತು ನೀಡಲಾಗುವುದು ಎಂದರು ತಿಳಿಸಿದರು.
Related Articles
Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮುಖ್ಯ ಕಾರ್ಯದರ್ಶಿ ಅತಿಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಜಿಪಂ ಕಾರ್ಯರ್ನಿಹಣಾ ಧಿಕಾರಿ ವೆಂಕಟೇಶ್, ಚಂದ್ರಶೇಖರ್ ಇತರರಿದ್ದರು.
ನರೇಗಾ ಪ್ರಚಾರ ರಥಕ್ಕೆ ಚಾಲನೆಚನ್ನರಾಯಪಟ್ಟಣ: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮೀಣ ಭಾಗದ ಬಡ ರೈತರಿಗೆ ಆರ್ಥಿಕವಾಗಿ ಭದ್ರತೆ ಒದಗಿಸುತ್ತಿದೆ ಇದರ ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ತಾಲೂಕು ಕ್ರೀಡಾಂಗಣದಲ್ಲಿ ತಾಪಂನಿಂದ ಆಯೋಜಿಸಿದ್ದ ನರೇಗಾ ಯೋಜನೆಯ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಮೂಲಕ ಪ್ರತಿ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ ಹಾಗೂ ಆರ್ಥಿಕವಾಗಿ ಗ್ರಾಮೀಣ ಭಾಗದ ಬಡವರಿಗೆ ಅನುಕೂಲ ಆಗಲೆಂದು ಈ ಯೋಜನೆ ಜಾರಿತೆ ತಂದಿದ್ದು ಉತ್ತಮವಾಗಿದೆ ಎಂದರು. ಮಹಿಳೆ ಮತ್ತು ಪುರುಷ ಎಂಬ ಭೇದವಿಲ್ಲದೆ 18 ವರ್ಷ ತುಂಬಿದ ಕೂಲಿ ಕೆಲಸ ಮಾಡುವ ಸರ್ವರೂ ಸಮಾನರು ಎಂಬ ಉದ್ದೇಶದಿಂದ ವಾರ್ಷಿಕ 150 ದಿವಸ ಉದ್ಯೋಗ ನೀಡುವ ಯೋಜನೆ ಇದಾಗಿದೆ. ಇದರಿಂದ ತಮ್ಮ ಕೃಷಿ ಭೂಮಿ ಅಭಿವೃದ್ಧಿ ಮಾಡಿಕೊಂಡರೆ ಎರಡು ಪ್ರಯೋಜನವಾಗಲಿದೆ. ತಮಗೆ ಹಣ ನೀಡುವುದಲ್ಲದೆ ತಮ್ಮದೇ ಕೃಷಿ ಭೂಮಿ ಅಭಿವೃದ್ಧಿಯಾಗಲಿದೆ ಎಂದು ನುಡಿದರು. ಇನ್ನು ಗ್ರಾಮದಲ್ಲಿ ಚರಡಿ, ರಸ್ತೆ ಸೇರಿದಂತೆ ತಮ್ಮ ರಾಸುಗಳ ಅನುಕೂಲಕ್ಕಾಗಿ ಕೊಟ್ಟಿಗೆ ನಿರ್ಮಾಣ ಹಾಗೂ ಆಶ್ರಯ ಮನೆಗೂ ಇದರ ಲಾಭವನ್ನು ಪಡೆದುಕೊಳ್ಳಬಹುದು. ಪ್ರಚಾರ ರಥ ಒಂದು ಕಡೆ ನಿಲ್ಲದೆ ತಾಲೂಕಿನ 40 ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಂಚಾರ ಮಾಡುವ ಮೂಲಕ ಪ್ರತಿಯೋಬ್ಬರಿಗೂ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶಿಸಿದರು. ತಾಪಂ ಅಧ್ಯಕ್ಷ ರಂಜಿತಾ, ಜಿಪಂ ಸದಸ್ಯೆಯರಾದ ಮಂಜುಳಾ, ಶ್ವೇತಾ, ಮಮತಾ, ಸದಸ್ಯ ಸಿ.ಎನ್. ಪುಟ್ಟಸ್ವಾಮಿಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಣ್ಣ, ತಹಶೀಲ್ದಾರ್ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್ ಇತರರಿದ್ದರು. ಅರಸೀಕರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶಾಸಕರು ಹಾಗೂ ಲೋಕಸಭಾ ಸದಸ್ಯರ ಅನುದಾನ ಕೇಳುವವರಿಲದಂತಾಗಿದೆ, ಅನುದಾನ ನೀಡಿದರೆ ಹಣ ಬಿಡುಗಡೆ ಮಾಡಿಸಲು ಬೆಂಗಳೂರಿನ ಮುಖ್ಯ ಆಭಿಯಂತರರ ಕಚೇರಿಗೆ ಅಲೆಯಬೇಕು ಹಾಗೂ ಅಧಿಕಾರಿಗೆ ಶೇ.1 ರಷ್ಟು ಹಣ ನೀಡಬೇಕಿರುವು ದರಿಂದ ಗ್ರಾಮಗಳ ಸಮುದಾಯ ಭವನ ಹಾಗೂ ಇತರೆ ಕಾಮಗಾರಿ ಮಾಡುವ ಗುತ್ತಿಗೆದಾರ ಎಂಎಲ್‌ಎ ಮತ್ತು ಎಂಪಿ ಅನುದಾನ ಕೊಡುತ್ತೇವೆಂದರು ಬೇಡ ಎನ್ನುತ್ತಾರೆ ಕೆಲವು ಮಾರ್ಪಾಡು ಮಾಡಿ, 5 ಲಕ್ಷ ರೂ. ವರೆಗೆ ನೀಡುವ ಅನುದಾನಕ್ಕೆ ಮುಖ್ಯ ಅಭಿಯಂತರು ಕಾಮಗಾರಿಗೆ ಮಾಡಲು ಅನುಮತಿ ಕೊಡಿಸಬೇಕು. ಈ ಬಗ್ಗೆ ಗಮನ ಹರಿಸುವಂತೆ ಮಂತ್ರಿಗಳಿಗೆ ಮನವಿ ಮಾಡಿದರು. ಶಾಸಕರಿಬ್ಬರ ಮಾತು ಆಸಲಿದ ಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು. ಎಂಎಲ್‌ಎ, ಎಂಪಿ ಅನುದಾನ ಕೇಳುವವರಿಲ್ಲ: ಅರಸೀಕರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶಾಸಕರು ಹಾಗೂ ಲೋಕಸಭಾ ಸದಸ್ಯರ ಅನುದಾನ ಕೇಳುವವರಿಲದಂತಾಗಿದೆ, ಅನುದಾನ ನೀಡಿದರೆ ಹಣ ಬಿಡುಗಡೆ ಮಾಡಿಸಲು ಬೆಂಗಳೂರಿನ ಮುಖ್ಯ ಆಭಿಯಂತರರ ಕಚೇರಿಗೆ ಅಲೆಯಬೇಕು ಹಾಗೂ ಅಧಿಕಾರಿಗೆ ಶೇ.1 ರಷ್ಟು ಹಣ ನೀಡಬೇಕಿರುವುದರಿಂದ ಗ್ರಾಮಗಳ ಸಮುದಾಯ ಭವನ ಹಾಗೂ ಇತರೆ ಕಾಮಗಾರಿ ಮಾಡುವ ಗುತ್ತಿಗೆದಾರ ಎಂಎಲ್‌ಎ ಮತ್ತು ಎಂಪಿ ಅನುದಾನ ಕೊಡುತ್ತೇವೆಂದರು ಬೇಡ ಎನ್ನುತ್ತಾರೆ ಕೆಲವು ಮಾರ್ಪಾಡು ಮಾಡಿ, 5 ಲಕ್ಷ ರೂ. ವರೆಗೆ ನೀಡುವ ಅನುದಾನಕ್ಕೆ ಮುಖ್ಯ ಅಭಿಯಂತರು ಕಾಮಗಾರಿಗೆ ಮಾಡಲು ಅನುಮತಿ ಕೊಡಿಸಬೇಕು. ಈ ಬಗ್ಗೆ ಗಮನ ಹರಿಸುವಂತೆ ಮಂತ್ರಿಗಳಿಗೆ ಮನವಿ ಮಾಡಿದರು. ಶಾಸಕರಿಬ್ಬರ ಮಾತು ಆಸಲಿದ ಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.