Advertisement

ರಾಜಧಾನಿಗೆ ಶೀಘ್ರದಲ್ಲೇ ತಟ್ಟಲಿದೆ ನೀರಿನ ಬಿಲ್‌ ಬಿಸಿ

10:10 AM Jun 26, 2023 | Team Udayavani |

ಬೆಂಗಳೂರು: ಜಲಮಂಡಳಿಯು ನೀರಿನ ಶುಲ್ಕವನ್ನು ಪರಿಷ್ಕರಣೆ ಮಾಡಲು ಚಿಂತಿಸಿದ್ದು, ಸದ್ಯದಲ್ಲೇ ನೀರಿನ ಬಿಲ್‌ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇದೀಗ ವಿದ್ಯುತ್‌ ಬಿಲ್‌ ಏರಿಕೆ ಬಿಸಿ ತಟ್ಟಿದ ಬೆನ್ನಲ್ಲೇ ನೀರಿನ ಬಿಲ್‌ ಬಿಸಿ ತಟ್ಟುವ ಸಾಧ್ಯತೆಗಳಿವೆ. ಬೆಂ

Advertisement

ಗಳೂರಿನಲ್ಲಿ ಕಳೆದ 8 ವರ್ಷಗಳಿಂದ ನೀರಿನ ಬಿಲ್‌ ಹೆಚ್ಚಳ ಮಾಡಿರಲಿಲ್ಲ. ಇದರಿಂದ ಜಲಮಂಡ ಳಿಗೆ ನಷ್ಟ ಉಂಟಾಗಿದ್ದು, 8 ಕೋಟಿ ರೂ.ಗೂ ಅಧಿಕ ಹೊರೆಯಾಗುತ್ತಿದೆ. ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಜಲಮಂಡಳಿ ಸದಸ್ಯರ ಜೊತೆಗೆ ನಡೆಸಿದ ಸಭೆಯಲ್ಲಿ ನೀರಿನ ಬಿಲ್‌ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.

ವಿದ್ಯುತ್‌ ಬಿಲ್‌ಗ‌ಳನ್ನು ಎಷ್ಟು ಪ್ರಮಾಣದಲ್ಲಿ, ಯಾವ ರೀತಿ ಜನರಿಗೆ ಹೊರೆಯಾಗದಂತೆ ಹೆಚ್ಚಳ ಮಾಡಬಹದು ಎಂಬ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಂದ ಮಾಹಿತಿ ಪಡೆದ ದ್ದಾರೆ. ಇದರ ಬೆನ್ನಲ್ಲೇ ನೀರಿನ ಬಿಲ್‌ ಹೆಚ್ಚಳ ಮಾಡಲು ಜಲಮಂಡಳಿಯು ಸದ್ದಿಲ್ಲದೇ ಕೆಲ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.

ಆದಾಯದಲ್ಲಿ ಶೇ.80 ವಿದ್ಯುತ್‌ಗೆ ಬಳಕೆ: ಮತ್ತೂಂದೆಡೆ ಜಲಮಂಡಳಿಗೂ ವಿದ್ಯುತ್‌ ಶುಲ್ಕ ಏರಿಕೆಯ ಬಿಸಿ ತಟ್ಟಿದೆ. ಪ್ರಧಾನ ಕಚೇರಿ, ಪಂಪಿಂಗ್‌ ಸ್ಟೇಷನ್‌, ಜಲಮಂಡಳಿಯ ಉಪ ವಿಭಾಗಗಳು, ಇನ್ನೀತರ ಉಪ ಕಚೇರಿಗಳಲ್ಲಿ ಬಳಸಿದ ವಿದ್ಯುತ್‌ಗೆ ತಿಂಗಳಿಗೆ 78 ಕೋಟಿ ರೂ. ಶುಲ್ಕ ಪಾವತಿಸಲಾಗುತ್ತಿತ್ತು. ಇದೀಗ ವಿದ್ಯುತ್‌ ಏರಿಕೆಯಿಂದ ಬರುವ ಆದಾಯದಲ್ಲಿ 88 ರಿಂದ 90 ಕೋಟಿ ರೂ. ವಿದ್ಯುತ್‌ ಶುಲ್ಕದ ಪಾಲಾಗುತ್ತಿದೆ. ನೀರಿನ ಬಿಲ್‌ ಹೆಚ್ಚಳ ಮಾಡದಿದ್ದಲ್ಲಿ ಜಲಮಂಡಳಿಯ ನಿರ್ವಹಣೆಯೂ ಸವಾಲಾಗಿದೆ ಎನ್ನುತ್ತಾರೆ ಜಲಮಂಡಳಿಯ ಅಧಿಕಾರಿಗಳು.

ತೊರೆಕಾಡನಹಳ್ಳಿ, ಹಾರೋಹಳ್ಳಿ ತಾತುಗುಣಿಯಲ್ಲಿ ಜಲಮಂಡಳಿಯ ಪಂಪಿಂಗ್‌ ಸ್ಟೇಷನ್‌ ಇದೆ. ಪ್ರತಿದಿನ ಕಾವೇರಿಯಿಂದ ನಗರದ ವಿವಿಧ ಭಾಗಗಳಿಗೆ 1,450 ದಶಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದೆ. ಇದರಿಂದ ತಿಂಗಳಿಗೆ ಸರಾಸರಿ 110 ಕೋಟಿ ರೂ. ಆದಾಯ ಜಲಮಂಡಳಿ ಬೊಕ್ಕಸ ಸೇರುತ್ತಿದೆ. ಆದರೆ, ಇವುಗಳಲ್ಲಿ ಶೇ.80ರಷ್ಟು ವಿದ್ಯುತ್‌ ಬಿಲ್‌ ಪಾವತಿಗೆ ಬಳಸಿದರೆ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗೆ ವೇತನ ಕೊಡಲು ಸಮಸ್ಯೆ ಉಂಟಾಗಿದೆ.

Advertisement

ಶುಲ್ಕ ಹೆಚ್ಚಳ ಸಾರ್ವಜನಿಕರಿಗೆ ಹೊರೆ : ನಿರೀಕ್ಷೆಗೆ ತಕ್ಕಂತೆ ಮಳೆ ಬೀಳದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಲ್ಲೂ ಸಂಗ್ರಹಿಸಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೂ, ಆಗಸ್ಟ್‌ವರೆಗೆ ಬೆಂಗಳೂರಿಗೆ ಬೇಕಾಗಿರುವಷ್ಟು ನೀರನ್ನು ಸಂಗ್ರಹಿಸಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಆಗಸ್ಟ್‌ ನಂತರವೂ ನಿರೀಕ್ಷೆಗೆ ತಕ್ಕಂತೆ ಮಳೆ ಬಾರದಿದ್ದರೆ ನೀರಿನ ಕೊರತೆ ಎದುರಾಗಲಿದೆ. ಇದೀಗ ನೀರಿನ ಕೊರತೆಯ ಜೊತೆಗೆ ನೀರಿನ ದರ ಹೆಚ್ಚಳ ಶುಲ್ಕವು ಸಾರ್ವಜನಿಕರಿಗೆ ಹೊರೆಯಾಗಲಿದೆ. ಜಲಮಂಡಳಿ ಕಳೆದ 3 ವರ್ಷಗಳ ಹಿಂದೆಯೂ ನೀರಿನ ದರ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೋವಿಡ್‌ ಭೀತಿಯಿಂದ ಜನ ಸಾಮಾನ್ಯರು ಸಂಕಷ್ಟಕೀಡಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರವು ನೀರಿನ ದರ ಪರಿಷ್ಕರಣೆಗೆ ಅನುಮತಿ ನೀಡಿರಲಿಲ್ಲ. ಇದೀಗ ಕೋವಿಡ್‌ ಸಂಕಷ್ಟ ದೂರವಾಗಿ ಜನ ಜೀವನ ಮತ್ತೆ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ದರ ಪರಿಷ್ಕರಣೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next