Advertisement

ಅಂತರ್ಜಲ ವೃದ್ಧಿಗೆ ದೀಕ್ಷೆ ತೊಟ್ಟ ಭಗೀರಥ

03:32 PM Mar 22, 2021 | Team Udayavani |

ಹುಬ್ಬಳ್ಳಿ: ಪ್ರತಿಯೊಂದು ಮಳೆ ಹನಿ ಹಿಡಿದಿಡಬೇಕೆಂಬ ಹಳ್ಳಿ ಯುವಕನ ಸಣ್ಣ ಯತ್ನ ಇಂದು ಬೃಹದಾಕಾರವಾಗಿ ಬೆಳೆದಿದೆ ಹುಬ್ಬಳ್ಳಿಯಿಂದ ಆರಂಭವಾದ ಈ ಪಯಣ 11 ರಾಜ್ಯಗಳಿಗೆ ವಿಸ್ತರಿಸಿದೆ. ಬತ್ತಿದ ಕೊಳವೆ ಬಾವಿಗಳಲ್ಲಿ ಮತ್ತೆಜೀವಜಲ ಚಿಮ್ಮುವಂತೆ ಮಾಡಿದ್ದು ಒಂದೆಡೆಯಾದರೆ, ಮಳೆನೀರುಕೊಯ್ಲು ಕುರಿತಾಗಿ ರೈತರು,ನಗರವಾಸಿಗಳು, ಉದ್ಯಮಿಗಳಿಗೆ ಜಾಗೃತಿಮೂಡಿಸಿ, ಮಳೆ ನೀರು ಸಂಗ್ರಹದ ಸಾಧನೆ ಪ್ರೇರಣಾದಾಯಕವಾಗಿದೆ.

Advertisement

ಜಲಸಂರಕ್ಷಣೆ, ಅಂತರ್ಜಲ ಮರುಪೂರಣದೀಕ್ಷೆ ತೊಟ್ಟ ಸಿಕಂದರ್‌ ಮೀರಾನಾಯ್ಕಎಂಬ ಗ್ರಾಮೀಣ ಯುವಕ 11 ರಾಜ್ಯಗಳಲ್ಲಿ ತನ್ನ ಸೇವಾ ಕಾರ್ಯ ವಿಸ್ತರಿಸಿದ್ದಾನೆ. ವಿದೇಶದಲ್ಲಿನ ದಾನಿಗಳು ಸಹ ಭಾರತದಲ್ಲಿಮಳೆನೀರು ಕೊಯ್ಲು, ಅಂತರ್ಜಲ ಹೆಚ್ಚಳಕ್ಕೆನೆರವು ನೀಡಲು ಮುಂದಾಗಿದ್ದಾರೆ. ಸಂಕಲ್ಪಗ್ರಾಮೀಣಾಭಿವೃದ್ಧಿ ಸೊಸೈಟಿ ಅಡಿಯಲ್ಲಿರೈತರ ಹೊಲಗಳಲ್ಲಿ ಬತ್ತಿದ ಕೊಳವೆ ಬಾವಿಗಳಪುನರುಜ್ಜೀವನ, ಮಳೆ ನೀರು ಸಂಗ್ರಹಕಾರ್ಯಗಳ ಜತೆಗೆ, ಸಂಕಲ್ಪ ಮಳೆ ನೀರುಕೊಯ್ಲು ಸಲ್ಯೂಶನ್ಸ್‌ ಅಡಿಯಲ್ಲಿ ನಗರಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ಗಳು,ಕಾರ್ಖಾನೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

ವರ್ಷಕ್ಕೆ 30-40 ಬೋರ್‌ಗಳಿಗೆ ಮರುಜೀವ :

ರಾಜ್ಯದಲ್ಲಿ ನೀರಾವರಿಗೆ ಒಳಪಟ್ಟ ಕೃಷಿಭೂಮಿ ಶೇ.30. ಉತ್ತರ ಕರ್ನಾಟಕದಲ್ಲಿ ಶೇ.25 ಮಾತ್ರ. ಜಲಾಶಯಗಳ ಕಾಲುವೆ, ಹಳ್ಳ-ನದಿ, ಕೆರೆಗಳಿಂದ ನೀರಾವರಿ ಮಾಡುತ್ತಿದ್ದು, ಅನೇಕ ರೈತರು ಕೊಳವೆ ಬಾವಿ ಆಶ್ರಯಿಸಿದ್ದಾರೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿಯುತ್ತಿದೆ. 200-300 ಅಡಿಗೆಸಿಗುತ್ತಿದ್ದ ನೀರು ಇದೀಗ 1000-1,200 ಅಡಿಗೆ ಕುಸಿದಿದೆ. ಉತ್ತರದ ಅನೇಕ ಜಿಲ್ಲೆಗಳನ್ನು ಕೊಳವೆಬಾವಿ ಕೊರೆಯಲು ನಿಷಿದ್ಧ ಎಂದು ಕೆಂಪು ಪಟ್ಟಿಗೆ ಸೇರಿಸಿದ್ದರೂ ಕೊಳವೆ ಬಾವಿಗಳ ಕೊರೆಯುವುದು ನಿಂತಿಲ್ಲ. ಸಾಲ ಮಾಡಿ ಕೊಳವೆ ಬಾವಿ ತೋಡಿಸಲು ಮುಂದಾಗಿ ನೀರು ಬಾರದೆ ವಿಫಲ ಆಗಿದ್ದಕ್ಕೆ, ಇದ್ದ ಕೊಳವೆ ಬಾವಿ ಬತ್ತಿ ಬೆಳೆ ನಷ್ಟ ಆಗಿದ್ದಕ್ಕೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಲ್ಲೀಗನಿಧಾನವಾಗಿ ಅಂತರ್ಜಲ ಮರುಪೂರಣ ತಿಳಿವಳಿಕೆ ಮೂಡುತ್ತಿದೆ. ದಶಕದಿಂದ ಅಂತರ್ಜಲಮರುಪೂರಣ, ಮಳೆನೀರು ಕೊಯ್ಲು ಕುರಿತಾಗಿ ರೈತರಿಗೆ ತಿಳಿವಳಿಕೆ ನೀಡುತ್ತ ಉಚಿತವಾಗಿಯೇಮರುಪೂರಣ ವ್ಯವಸ್ಥೆ ಮಾಡುತ್ತ ಬಂದಿದ್ದ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಇದೀಗ ರೈತರೇ ಶುಲ್ಕ ನೀಡಿ ಮರುಪೂರಣಕ್ಕೆ ಬೇಡಿಕೆ ಸಲ್ಲಿಸತೊಡಗಿದ್ದಾರೆ. ಪ್ರಸ್ತುತ ಸಂಸ್ಥೆಯು ವಾರ್ಷಿಕ 30-40 ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ ನೀಡುತ್ತಿದೆ.

11 ರಾಜ್ಯಗಳಲ್ಲಿ ಕಾರ್ಯ ದೇಶಪಾಂಡೆ ಫೌಂಡೇಶನ್‌ :

Advertisement

ನೆರವಿನೊಂದಿಗೆ ಪ್ರತಿಷ್ಠಾನ ಕಟ್ಟಡದ ಸಣ್ಣ ಕೋಣೆಯಲ್ಲಿ ಸಂಕಲ್ಪಗ್ರಾಮೀಣಾಭಿವೃದ್ಧಿ ಸೊಸೈಟಿಆರಂಭಿಸಿದ್ದ ಸಿಕಂದರ್‌ ಮೀರಾನಾಯ್ಕ,ಕೊಳವೆ ಬಾವಿಗಳ ಮರುಪೂರಣಕಾರ್ಯ ಹಾಗೂ ಜಾಗೃತಿ ಒಬ್ಬರೇಕೈಗೊಳ್ಳುತ್ತಿದ್ದರು. ಇದೀಗ ಸುಮಾರು33 ಜನರಿಗೆ ಉದ್ಯೋಗ ನೀಡಿದ್ದಾರೆ.ಅನೇಕ ಮಹಿಳೆಯರ ಸ್ವಾವಲಂಬಿಬದುಕಿಗೆ ಮಾರ್ಗ ತೋರಿದ್ದಾರೆ. ಮಳೆ ನೀರು ಕೊಯ್ಲು, ಅಂತರ್ಜಲಮರುಪೂರಣ ಕಾಯಕವನ್ನು 11 ರಾಜ್ಯಗಳಿಗೆ ವಿಸ್ತರಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಒಟ್ಟು 11ರಾಜ್ಯಗಳ 266 ಗ್ರಾಮಗಳಲ್ಲಿ,8,600 ರೈತ ಕುಟುಂಬಗಳ ಅಂದಾಜು4,360 ಎಕರೆಯಷ್ಟು ಭೂಮಿಗೆನೀರೊದಗಿಸುವ ನಿಟ್ಟಿನಲ್ಲಿ ಅಂತರ್ಜಲಮರುಪೂರಣ ಹಾಗೂ ಮಳೆ ನೀರುಕೊಯ್ಲು ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ನಗರ ಪ್ರದೇಶದಲ್ಲೂ ಜಲಜಾಗೃತಿ :

ಸಂಕಲ್ಪ ಮಳೆನೀರು ಕೊಯ್ಲು ಸಲ್ಯೂಶನ್ಸ್‌ ಅಡಿಯಲ್ಲಿ ನಗರ ಪ್ರದೇಶ ಹಾಗೂ ಉದ್ಯಮ ವಲಯದಲ್ಲಿ ಮಳೆ ನೀರು ಕೊಯ್ಲಿಗೆ ಮುಂದಾಗಿದ್ದಾರೆ. ಬೆಂಗಳೂರಿನ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿದ್ದು,ತೆಲಂಗಾಣದ ಹೈದರಾಬಾದ್‌ನಲ್ಲಿ ಶಾಲಾ ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿಮಳೆನೀರು ಕೊಯ್ಲು ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ, ತುಮಕೂರು,ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಟ್ಟಡಗಳಿಗೆಮಳೆನೀರು ಕೊಯ್ಲು ಕೈಗೊಂಡಿದ್ದಾರೆ.

ಮುಡಿಗೇರಿದ ಪ್ರಶಸ್ತಿಗಳು : ಸಿಕಂದರ್‌ ಮೀರಾನಾಯ್ಕ ಅವರ ಕಾರ್ಯಕ್ಕೆ ಆಸ್ಟ್ರೇಲಿಯಾದ ಶಝರ್‌ ರಾಬಿನ್ಸನ್‌ ಅವರ ಪ್ರೋತ್ಸಾಹ ಪ್ರಮುಖವಾಗಿದೆ. ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿಯ ಜಲ ಸಂರಕ್ಷಣೆ-ಸಂವರ್ಧನೆ ಕಾಳಜಿ ಕಂಡು ಇರಾನ್‌ನಲ್ಲಿ ಎನರ್ಜಿ ಗ್ಲೋಬಲ್‌ ಪ್ರಶಸ್ತಿ, ಶ್ರೀಲಂಕಾದದಲ್ಲಿ ಅಂತಾರಾಷ್ಟ್ರೀಯ ವಾಟರ್‌ ಅಸೋಸಿಯೇಶನ್‌ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ.

ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಿಂದ ಮಳೆ ನೀರು ಕೊಯ್ಲು, ಕೊಳವೆ ಬಾವಿ ಮರುಪೂರಣಕ್ಕೆ ಬೇಡಿಕೆಬರುತ್ತಿದೆ. ಅಮೆರಿಕದಲ್ಲಿನ ಸೇವ್‌ ಇಂಡಿಯನ್‌ಫಾರ್ಮರ್ ಟ್ರಸ್ಟ್‌ ದೇಣಿಗೆ ನೀಡುತ್ತಿದ್ದು, ಈಗಾಗಲೇತಮಿಳುನಾಡಿನಲ್ಲಿ ಕಾರ್ಯ ಕೈಗೊಳ್ಳಲಾಗಿದೆ. ದೇಶದಎಲ್ಲ ರಾಜ್ಯಗಳಲ್ಲೂ ಇದು ವಿಸ್ತರಿಸಬೇಕೆಂಬುದುಟ್ರಸ್ಟ್‌ನ ಚಿಂತನೆಯಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿವಿಸ್ತರಣೆ ಕಾರ್ಯ ಸಾಧ್ಯವಾಗಿಲ್ಲ. ಈ ವರ್ಷ ಅಸ್ಸಾಂ ಸೇರಿದಂತೆ ಇನ್ನಷ್ಟು ರಾಜ್ಯಗಳಿಗೆ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ. – ಸಿಕಂದರ್‌ ಮೀರಾನಾಯ್ಕ, ಸಿಇಒ, ಸಂಕಲ್ಪ ಗ್ರಾಮೀಣಾಭಿವೃದ್ಧಿ ಸೊಸೈಟಿ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next