ಸಿಂಗಾಪುರ: ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡುತ್ತೇವೆ. ಅರ್ಧ ಗಂಟೆಯೊಳಗೆ ಫುಡ್ ಡೆಲಿವೆರಿಯೂ ಆಗುತ್ತದೆ. ಡೆಲಿವೆರಿ ಮಾಡುವವರು ಟೈಮ್ ಗೆ ಸರಿಯಾಗಿ ಆಹಾರವನ್ನು ತಲುಪಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಫುಡ್ ಡೆಲಿವೆರಿ ಮಾಡಿಯೇ ಸುದ್ದಿಯಾಗಿದ್ದಾರೆ.
ಸಿಂಗಾಪುರದ ಮಹಿಳೆಯೊಬ್ಬರು ಅಂಟಾರ್ಟಿಕಾದಲ್ಲಿರುವ ಗ್ರಾಹಕರೊಬ್ಬರಿಗೆ ಆರ್ಡರ್ ಮಾಡಿದ ಆಹಾರವನ್ನು ತಲುಪಿಸಿದ್ದಾರೆ. ಸಿಂಗಾಪುರದಿಂದ ಅಂಟಾರ್ಟಿಕಾ ಎಂದರೆ 5-10 ಕಿಮೀಗಳಷ್ಟು ದೂರವಲ್ಲ. ಇವರು ಸಾಗಿದ್ದು 30,000 ಸಾವಿರ ಕೀ.ಮಿ, ದಾಟಿದ್ದು 4 ಖಂಡಗಳನ್ನು.!
ಸಿಂಗಾಪುರದ ಮಾನಸ ಗೋಪಾಲ್ ʼಫುಡ್ ಪಾಂಡʼ ಪ್ರಾಯೋಜಕತ್ವದಲ್ಲಿ ಸಿಂಗಾಪುರದಿಂದ ಅಂಟಾರ್ಟಿಕಾಕ್ಕೆ ಫುಡ್ ಡೆಲಿವೆರಿ ಮಾಡಿದ್ದಾರೆ. ಮಾನಸ ತಮ್ಮ ಪಯಣವನ್ನು ಚಿತ್ರೀಕರಿಸಿ ಇನ್ಸ್ಟಾಗ್ರಾಮ್ ನಲ್ಲಿ ಆಪ್ಲೋಡ್ ಮಾಡಿದ್ದು, ಇದು ವೈರಲ್ ಆಗಿದೆ.
ತಮ್ಮ ಕೈಯಲ್ಲಿ ಆರ್ಡರ್ ತಲುಪಿಸಲಿರುವ ಆಹಾರದ ಪೊಟ್ಟಣವನ್ನು ಹಿಡಿದುಕೊಂಡು ಸಿಂಗಾಪುರದಿಂದ ಹೊರಟ ಮಾನಸ ಗೋಪಾಲ್ ಬ್ಯೂನಸ್ ಅರೆಸ್, ಉಶುಯಾಯಾ ತಲುಪಿದ ಬಳಿಕ ಅಂಟಾರ್ಟಿಕಾ ಮುಟ್ಟಿದ್ದಾರೆ. ದಾರಿ ಮಧ್ಯ ಹಿಮಭರಿತ ಮಾರ್ಗ, ಮಣ್ಣಿನ ರಸ್ತೆಯನ್ನು ದಾಟಿಕೊಂಡು ಕೊನೆಗೆ ಗ್ರಾಹಕನ ಕೈಗೆ ತಲುಪಿಸಿದ್ದಾರೆ.
Related Articles
ತಮ್ಮ ವಿಶೇಷ ಪಯಣದ ಬಗ್ಗೆ ಮಾನಸ ಅವರು ವಿಡಿಯೋ ಹಂಚಿಕೊಂಡಿದ್ದಾರೆ. 37,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಮಾನಸ ಅವರ ಈ ಸಾಹಸವನ್ನು ಶ್ಲಾಘಿಸಿದ್ದಾರೆ.