Advertisement

ವರನಿಗೆ ಕೋವಿಡ್ ದೃಢ : ಪಿಪಿಇ ಕಿಟ್ ಧರಿಸಿ ಹಸೆಮಣೆ ಏರಿದ ಜೋಡಿ…!

12:09 PM Apr 27, 2021 | Team Udayavani |

ರತ್ಲಮ್ (ಮಧ್ಯಪ್ರದೇಶ) : ವರನಿಗೆ ಕೊವಿಡ್​ 19 ಸೋಂಕು ತಗುಲಿದ್ದ ಕಾರಣ ವಧು ಮತ್ತು ವರ ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ರತ್ಲಮ್​ ನಲ್ಲಿ ಬೆಳಕಿಗೆ ಬಂದಿದೆ.

Advertisement

ವಧು -ವರರು ಪಿಪಿಇ ಕಿಟ್ ಧರಿಸಿ ವಿವಾಹವಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸದೇ ಕೇವಲ ಪಿಪಿಇ ಕಿಟ್ ಧರಿಸಿ ಈ ಜೋಡಿ ಮದುವೆಯಾಗಿದೆ.

ಇವರಿಬ್ಬರೂ ಅಗ್ನಿಕುಂಡದ ಸುತ್ತ ತಿರುಗುವಾಗ ಹಿನ್ನೆಲೆಯಲ್ಲಿ ಮಂತ್ರಗಳ ಪಠಣೆಯನ್ನೂ ಕೇಳಬಹುದು. ಮದುವೆಗೆ ಮುಹೂರ್ತ ನಿಗದಿಯಾಗಿ ಹೋಗಿತ್ತು. ಆದರೆ ಏಪ್ರಿಲ್ 19ರಂದು ವರನಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ಮದುವೆಯನ್ನು ಮುಂದೂಡಲು ಆಗಲಿಲ್ಲ. ಇದೇ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಈ ಜೋಡಿ, ಮದುವೆಯಾಗಿದೆ.

ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ, ಕೊವಿಡ್ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗುವಂತೆ  ಷರತ್ತು ವಿಧಿಸಿದ್ದ ಕಾರಣ ನಾವು ಈ ರೀತಿ ಮದುವೆಯಾಗಬೇಕಾಯಿತು ಎಂದು ನವ ಜೋಡಿ ತಿಳಿಸಿದೆ.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭದಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಅಲ್ಲದೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಮದುವೆಯಾಗಬೇಕು ಎಂದು ಮಧ್ಯಪ್ರದೇಶದ ಸರ್ಕಾರ ಆದೇಶ ಹೊರಡಿಸಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next