Advertisement

ಅಂತಿಮ ಟೆಸ್ಟ್‌ಗೆ ಶಮಿ?

03:50 AM Mar 22, 2017 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಧರ್ಮಶಾಲಾದಲ್ಲಿ ಆಡಲಾಗುವ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಬಂಗಾಲದ ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗುವುದೇ? ಇಂಥದೊಂದು ಸುಳಿವನ್ನು ನೀಡಿದ್ದಾರೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ.

Advertisement

ತಮಿಳುನಾಡು ವಿರುದ್ಧದ “ವಿಜಯ್‌ ಹಜಾರೆ ಟ್ರೋಫಿ’ ಫೈನಲ್‌ನಲ್ಲಿ  ಬಂಗಾಲ ಸೋಲನುಭವಿಸಿದರೂ ಶಮಿ 4 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. “ಶಮಿ ಅವರನ್ನು ಫೈನಲ್‌ನಲ್ಲಿ ಆಡುವಂತೆ ನಾವೇ ಸೂಚಿಸಿದ್ದೆವು. ಅವರಿಗೆ ಒಂದಿಷ್ಟು ಮ್ಯಾಚ್‌ ಪ್ರ್ಯಾಕ್ಟೀಸ್‌ ಲಭಿಸಬೇಕಿತ್ತು. ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಶಮಿ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ನಾನು ಆಯ್ಕೆ ಮಂಡಳಿ ಜತೆ ಯಾವುದೇ ಮಾತುಕತೆ ನಡೆಸಿಲ್ಲ…’ ಎಂಬುದಾಗಿ ಕೊಹ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next