Advertisement

KKR ಫೈನಲ್ ಲಗ್ಗೆ ಸಂಭ್ರಮ : ಶಾರುಖ್ ಖಾನ್ ಕ್ಷಮೆ ಕೇಳಿದ್ದು ಯಾಕೆ? Watch Video

11:49 AM May 22, 2024 | Team Udayavani |

ಅಹಮದಾಬಾದ್ : ಕೆಕೆಆರ್ ತಂಡ ಹೈದರಾಬಾದ್ ವಿರುದ್ಧ ಜಯಭೇರಿ ಸಾಧಿಸಿ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಬಾಲಿವುಡ್ ದಿಗ್ಗಜ ನಟ , ತಂಡದ ಮಾಲಕ ಶಾರುಖ್ ಖಾನ್ ಸಂಭ್ರಮದಲ್ಲಿ ತೇಲಾಡಿದ್ದಾರೆ.

Advertisement

ಅವರ ಮಕ್ಕಳಾದ ಸುಹಾನಾ ಮತ್ತು ಅಬ್ರಾಮ್ ಜತೆಗೆ ಸಂಭ್ರಮ ಆಚರಿಸುತ್ತಿದ್ದ ಶಾರುಖ್ ಆನ್-ಗ್ರೌಂಡ್ ಲೈವ್ ಶೋಗೆ ಅಡ್ಡಿಪಡಿಸಿದರು. ತಪ್ಪನ್ನು ಮನಗಂಡ ಶಾರುಖ್ ಪಂದ್ಯವನ್ನು ವಿಶ್ಲೇಷಿಸುತ್ತಿದ್ದ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಪಾರ್ಥಿವ್ ಪಟೇಲ್ ಮತ್ತು ಸುರೇಶ್ ರೈನಾ ಅವರಲ್ಲಿ ಕ್ಷಮೆಯಾಚಿಸಿದರು.

ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊ ಕ್ಲಿಪ್ ನಲ್ಲಿ ಶಾರುಖ್ ಗುಂಪಿನತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಒಂದು ಹಂತದಲ್ಲಿ ಕೆಮರಾ ಮುಂದೆ ಬಂದು ನೇರಪ್ರಸಾರಕ್ಕೆ ಅಡ್ಡಿಪಡಿಸಿದ್ದು ಅವರಿಗೆ ಅರಿವಾಗಲಿಲ್ಲ. ಕೈ ಮುಗಿದ ಮುಗಿದ ಶಾರುಖ್ ಕ್ಷಮೆ ಯಾಚಿಸಿದರು. ಪ್ರತಿಕ್ರಿಯಿಸಿದ ಆಕಾಶ್ ‘”ಅರೆ, ಇದು ಸಂಪೂರ್ಣವಾಗಿ ಉತ್ತಮವಾಗಿದೆ, ನೀವು ದಿನವನ್ನು ನಮ್ಮದಾಗಿಸಿದ್ದೀರಿ” ಎಂದರು.

ಈ ಬಗ್ಗೆ ಸುರೇಶ್ ರೈನಾ ಪ್ರತಿಕ್ರಿಯಿಸಿದ್ದು, “ಇಂದು ಯಾವಾಗಲೂ ವಿನಮ್ರ ಶಾರುಖ್ ಖಾನ್ ಅವರನ್ನು ಭೇಟಿಯಾದದ್ದು ಅದ್ಭುತವಾಗಿತ್ತು. ಅವರ ಸೂಪರ್‌ಸ್ಟಾರ್ ಸ್ಥಾನಮಾನದ ಹೊರತಾಗಿಯೂ, ಅವರು ತಮ್ಮ ಡೌನ್-ಟು-ಆರ್ತ್ ವರ್ತನೆಯನ್ನು ನಿರ್ವಹಿಸುತ್ತಾರೆ, ಪ್ರತಿ ಸಂವಾದದಲ್ಲಿ ನಮ್ರತೆಯನ್ನು ಪ್ರದರ್ಶಿಸುತ್ತಾರೆ. ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಕೆಕೆಆರ್ ಗೆ ಅಭಿನಂದನೆಗಳು!” ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮನಸ್ಥಿತಿಯೇ ಬದಲು
ಶಾರುಖ್ ಅವರ ಉಪಸ್ಥಿತಿಯು ತಂಡದ ಮನಸ್ಥಿತಿಯನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಕುರಿತು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ. “ತಂಡದಲ್ಲಿ ಅವರ ಉಪಸ್ಥಿತಿಯು ತಂಡದ ವಾತಾವರಣಕ್ಕೆ ಉತ್ಸಾಹವನ್ನು ಸೇರಿಸುತ್ತದೆ. ತಂಡದ ವರ್ತನೆ ಮತ್ತು ವಿಧಾನವು ಸ್ವಯಂಚಾಲಿತವಾಗಿ ಬದಲಾಗುತ್ತದೆ” ಎಂದು ಹಾಡಿ ಹೊಗಳಿದ್ದಾರೆ. ಅಮೋಘ ಗೆಲುವಿನ ಬಳಿಕ ಶಾರುಖ್, ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬಿಗಿದಪ್ಪಿ ಸಂಭ್ರಮ ಹಚ್ಚಿಕೊಂಡರು.

Advertisement

ಕಿಂಗ್

ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದು ತಾತ್ಕಾಲಿಕವಾಗಿ ‘ಕಿಂಗ್’ ಎಂದು ಶೀರ್ಷಿಕೆ ಇಡಲಾಗಿದ್ದು ಚಿತ್ರರಲ್ಲಿ ಬಹುಶಃ ಸುಹಾನಾ ಖಾನ್ ಕೂಡ ನಟಿಸಲಿದ್ದಾರೆ, ಆದರೆ ತಯಾರಕರು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next