Advertisement

Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನ ರದ್ದು: ಕಾರಣ?

01:53 AM Jun 14, 2024 | Team Udayavani |

ತಿರುವನಂತಪುರ: ಕೇರಳದ ಕಾರ್ಯವೊಟ್ಟಂನಲ್ಲಿರುವ ಯುನಿವರ್ಸಿಟಿ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಜು.5ರಂದು ನಡೆಯಬೇಕಿದ್ದ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ ನೃತ್ಯ ಪ್ರದರ್ಶನ ರದ್ದುಗೊಳಿಸಲಾಗಿದೆ. ಕ್ಯಾಂಪಸ್‌ನ ಒಳಗಾಗಲೀ, ಹೊರಗಾಗಲೀ ಇಂಥ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗದು ಎಂದು ಕೇರಳ ವಿವಿ ಉಪಕುಲಪತಿ ಡಾ| ಮೋಹನನ್‌ ಹೇಳಿದ್ದಾರೆ. ಅಲ್ಲದೆ ವಿದ್ಯಾರ್ಥಿ ಸಂಘವು ನೃತ್ಯ ಪ್ರದರ್ಶನಕ್ಕೆ ಪೂರ್ವ ಅನುಮತಿ ಪಡೆದಿರಲಿಲ್ಲ ಎಂದೂ ಹೇಳಲಾಗಿದೆ.

Advertisement

ಒಂದು ವರ್ಷದ ಹಿಂದೆ ಕೊಚ್ಚಿನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ (CUSAT) ನಿಖಿತಾ ಗಾಂಧಿ ನೇತೃತ್ವದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತದಿಂದಾಗಿ ನಾಲ್ವರು ಸಾವನ್ನಪ್ಪಿ 60 ಕ್ಕೂ ಹೆಚ್ಚು ಜನರು ಗಾಯಗೊಂಡ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಿತಕರ ಘಟನೆಯ ನಂತರ, ರಾಜ್ಯ ಸರ್ಕಾರವು ಕಾಲೇಜು ಕ್ಯಾಂಪಸ್‌ಗಳಲ್ಲಿ ಬಾಹ್ಯ ಡಿಜೆ ಪಾರ್ಟಿಗಳು, ಸಂಗೀತ ರಾತ್ರಿಗಳು ಅಥವಾ ಅಂತಹುದೇ ಕಾರ್ಯಕ್ರಮಗಳನ್ನು ನಿಷೇಧಿಸಿದೆ.

ಕುತೂಹಲಕಾರಿಯಾಗಿ, ಸನ್ನಿ ಲಿಯೋನ್ ತನ್ನ ಮಲಯಾಳಂ ಚಿತ್ರರಂಗ ಪ್ರವೇಶಕ್ಕೆ ಸಿದ್ಧವಾಗಿರುವ ಸಮಯದಲ್ಲಿ ಘಟನೆ ನಡೆದಿದೆ. ಈ ವರ್ಷದ ಏಪ್ರಿಲ್‌ನಲ್ಲಿ,ಶೀಘ್ರದಲ್ಲೇ ಮಲಯಾಳಂ ಚಿತ್ರ ರಂಗ ಪ್ರವೇಶಿಸುವುದಾಗಿ ಘೋಷಿಸಿದ್ದರು. ಸೆಟ್‌ಗಳಲ್ಲಿ ಮುಹೂರ್ತ ಸಮಾರಂಭದ ಒಂದು ನೋಟವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next