Advertisement

Cricket; ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌

12:33 AM Jun 03, 2024 | Team Udayavani |

 ಚೆನ್ನೈ: ಕೆಕೆಆರ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ರವಿವಾರ ಶ್ರುತಿ ರಘುನಾಥನ್‌ ಅವರೊಂದಿಗೆ ಭಾನುವಾರ ದಾಂಪತ್ಯ ಜೀವನ ಆರಂಭಿಸಿದರು.

Advertisement

29 ರ ಹರೆಯದ ಅಯ್ಯರ್‌ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಂಪ್ರದಾಯ ಶೈಲಿಯಲ್ಲಿ ವಿವಾಹವಾದರು. ಸುಂದರ ವಿವಾಹ ಸಮಾರಂಭದ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಪಂಚದಾದ್ಯಂತ ಶುಭಾಶಯಗಳನ್ನು ಪಡೆದುಕೊಳ್ಳುತ್ತಿವೆ.ಇಬ್ಬರೂ 2023 ನವೆಂಬರ್ ನಲ್ಲೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ಐಪಿಎಲ್ ನಲ್ಲಿ ಅಯ್ಯರ್ ಅವರು ಕೆಕೆಆರ್‌ನ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದ್ಭುತ ಪ್ರದರ್ಶನ ನೀಡಿದ ಅವರು 14 ಪಂದ್ಯಗಳಲ್ಲ 158.80 ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಗಳಿಸಿದ್ದಾರೆ. ನಾಲ್ಕು ಅರ್ಧ ಶತಕಗಳನ್ನೂ ದಾಖಲಿಸಿದ್ದು ಅತ್ಯಧಿಕ ಸ್ಕೋರ್ 70 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next