Advertisement

Rinku Singh: ರಿಂಕು ಸಿಂಗ್ ಸ್ಫೋಟಕ ಸಿಕ್ಸರ್ ಗೆ ಮಿಡಿಯಾ ಬಾಕ್ಸ್ ಗ್ಲಾಸ್​​ ಪೀಸ್ ಪೀಸ್​!

10:02 AM Dec 13, 2023 | Team Udayavani |

ಕೆಬೆರಾ: ಕಳೆದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಐದು ಸಿಕ್ಸರ್ ಭಾರಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ ರಿಂಕು ಸಿಂಗ್ ಇದೀಗ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Advertisement

ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಭಾರತ ಸೋಲು ಕಂಡರೂ ಯುವ ಆಟಗಾರ ರಿಂಕು ಸಿಂಗ್ ಬ್ಯಾಟಿಂಗ್ ಪ್ರದರ್ಶನ ಮಾತ್ರ ಅಲ್ಲಿ ನೆರೆದಿದ್ದ ಕ್ರೀಡಾ ಪ್ರೇಮಿಗಳ ಗಮನ ಸೆಳೆದಿದೆ.

ಈ ಇನ್ನಿಂಗ್ಸ್ ನಲ್ಲಿ ರಿಂಕು ಸಿಂಗ್ ಎರಡು ಸಿಕ್ಸರ್ ಸಿಡಿಸಿದ್ದಾರೆ, 19ನೇ ಓವರ್ ಹಾಕಿದ ಐಡೆನ್ ಮಾರ್ಕ್ರಾಮ್ ಅವರ ಬೌಲಿಂಗ್ ಗೆ ರಿಂಕು ಸಿಕ್ಸರ್ ಭರ್ಜರಿ ಸಿಕ್ಸ್ ಭಾರಿಸಿದ್ದು ಈ ವೇಳೆ ಚೆಂಡು ಸೀದಾ ಮಿಡಿಯಾ ಬಾಕ್ಸ್​ ಗ್ಲಾಸ್​​ಗೆ ಬಡಿದು ಗ್ಲಾಸ್ ಪುಡಿ ಪುಡಿಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಇನ್ನಿಂಗ್ಸ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಂಕು ಕೇವಲ 39 ಎಸೆತಗಳಲ್ಲಿ 9 ಫೋರ್, 2 ಸಿಕ್ಸರ್ ಭಾರಿಸುವ ಮೂಲಕ ಅಜೇಯ 68 ರನ್ ಕಲೆಹಾಕಿದ್ದಾರೆ. ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 19.3 ಓವರ್​ಗಳಲ್ಲಿ 180 ರನ್ ಗಳಿಸುವ ಸಂದರ್ಭದಲ್ಲಿ ಮಳೆ ಬಂದು ಆಟಕ್ಕೆ ಅಡ್ಡಿಪಡಿಸಿತ್ತು.

ಇದನ್ನೂ ಓದಿ: Road Mishap: ಓವರ್ ಟೆಕ್ ಮಾಡುವ ಭರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next