Advertisement
ಕರ್ನಾಟಕ ಸೇರಿದಂತೆ ತಾವು ಯಾತ್ರೆ ನಡೆಸಿದ ಎಲ್ಲ ಸ್ಥಳಗಳಲ್ಲೂ ರಾಹುಲ್ ಸ್ಥಳೀಯರೊಂದಿಗೆ ಬೆರೆತು, ಫೋಟೋ ಕ್ಲಿಕ್ಕಿಸಿಕೊಂಡು, ಭುಜದ ಮೇಲೆ ಮಕ್ಕಳನ್ನು ಕೂರಿಸಿ ಕೊಂಡು, ಪುಷಪ್ ಚಾಲೆಂಜ್ ತೆಗೆದು ಕೊಂಡು ಮುಂದೆ ಸಾಗಿದ್ದನ್ನು ನೋಡಿರುತ್ತೀರಿ. ವಿಶೇಷ ವೆಂದರೆ, ತೆಲಂಗಾಣದಲ್ಲಿ ರಾಹುಲ್ ತಮ್ಮ ನೃತ್ಯ ಕೌಶಲವನ್ನೂ ಹೊರಹಾಕಿದ್ದಾರೆ. ಕೊಮ್ಮು ಕೋಯಾ ಎಂಬ ಬುಡಕಟ್ಟು ಜನ ರೊಂದಿಗೆ ಅವರದ್ದೇ ಸಾಂಪ್ರದಾಯಿಕ ದಿರಿಸು ಧರಿಸಿ, ರಾಹುಲ್ ಹೆಜ್ಜೆ ಹಾಕಿದ್ದಾರೆ.
ಜತೆಗೆ, “ಈ ಸಮುದಾಯದ ಕಲೆಯೇ ಅವರ ಮೌಲ್ಯಗಳನ್ನು ತೋರಿಸುತ್ತದೆ, ಅದನ್ನು ನಾವೂ ಕಲಿಯಬೇಕು ಮತ್ತು ಸಂರಕ್ಷಿಸಬೇಕು’ ಎಂದೂ ರಾಹುಲ್ ಟ್ವೀಟ್ ಮಾಡಿದ್ದಾರೆ. ರಾಹುಲ್ ಅವರ ಈ ವಿಡಿಯೋ ಶನಿವಾರ ಎಲ್ಲೆಡೆ ವೈರಲ್ ಆಗಿದೆ.