Advertisement
ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ಸುರತ್ಕಲ್ ಸಮೀಪದ ತಡಂಬೈಲ್ ಪರಿಸರದಲ್ಲಿ ಸೇಲ್ಸ್‌ಮನ್ ಎಂದು ಹೇಳಿಕೊಂಡು ಕೆಲವರು ಮನೆ ಮನೆಗೆ ಭೇಟಿ ನೀಡುತ್ತಿರುವುದಲ್ಲದೆ ಮನೆಯ ಸುತ್ತ ಸುಳಿದಾಡುತ್ತಾರೆ. ಮನೆಯಲ್ಲಿ ಮಹಿಳೆಯರುಮಾತ್ರ ಇದ್ದರೆ ಅವರಲ್ಲಿ ಮಾತನಾಡಿ ಫೋನ್ ನಂಬರ್ ನೀಡುವಂತೆ ಒತ್ತಾಯಿಸುತ್ತಾರೆ ಎಂದು ನಾಗರಿಕ ರೊಬ್ಬರು ದೂರಿದರು. ಇದಕ್ಕೆ ಸ್ಪಂದಿಸಿದ ಆಯುಕ್ತರು ಈ ಬಗ್ಗೆ ಪರಿಶೀಲಿಸಲು ಸ್ಥಳೀಯ ಪೊಲೀಸರಿಗೆ ಸೂಚಿಸ ಲಾಗುವುದು ಎಂದರು.
ಕೆಲವು ಶಾಲಾ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೋಟೆಕಾರಿನ ನಾಗರಿಕರೊಬ್ಬರಿಂದ ಕೇಳಿ ಬಂತು. ಉತ್ತರಿಸಿದ ಆಯುಕ್ತರು ಶಾಲಾ ವಾಹನಗಳ ಬಗ್ಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು, ಅದು ಮುಂದುವರಿಯಲಿದೆ ಎಂದರು.
Related Articles
Advertisement
ಇದಕ್ಕೆ ಉತ್ತರಿಸಿದ ಆಯುಕ್ತರು ಟೋಯಿಂಗ್ ಮಾಡುವವರ ಸಭೆ ಕರೆದು ಸೂಚನೆ ನೀಡಲಾಗಿದೆ. ವಾಹನವನ್ನು ಟೋಯಿಂಗ್ ಮಾಡುವ ಮೊದಲು ಅನೌನ್ಸ್ ಮಾಡಿ, ವಾಹನದ ಮಾಲಕರು ಸ್ಥಳದಲ್ಲಿದ್ದರೆ ಸ್ಪಾಟ್ ಫೈನ್ ಹಾಕುವಂತೆ, ಇಲ್ಲದಿದ್ದರೆ ಮಾತ್ರ ವಾಹನವನ್ನು ಟೋಯಿಂಗ್ ಮಾಡಿ ಜಾಗರೂಕತೆಯಿಂದ ಕೊಂಡೊಯ್ಯಲು ಸೂಚಿಸಲಾಗಿದೆ ಎಂದರು.
ಪುತ್ತೂರು ಕಡೆಯಿಂದ ನಗರಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್‌ಗಳು ವಿಪ ರೀತ ಹೊಗೆ ಉಗುಳಿಕೊಂಡು ವಾಯು ಮಾಲಿನ್ಯ ಮಾಡುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಕೇಳಿ ಬಂತು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸುವಂತೆ ಟ್ರಾಫಿಕ್ ಎಸಿಪಿಗೆ ಸೂಚಿಸಿದರು. ಗಾಂಧಿನಗರ ವ್ಯಾಯಾಮಶಾಲೆ ಪಕ್ಕ ರಾತ್ರಿ ಕಾರನ್ನು ರಸ್ತೆ ಬದಿಯೇ ಪಾರ್ಕ್ ಮಾಡುತ್ತಾರೆ ಎಂಬ ದೂರು ಕೇಳಿ ಬಂತು. ಇದು 119ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಲ್ಲಾಳ್, ಡಿಸಿಪಿಗಳಾದ ಹನು ಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಮಂಜು ನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಗುರುದತ್ತ ಕಾಮತ್, ಅನಂತ್ ಮುಡೇìಶ್ವರ, ಸಬ್ ಇನ್‌ಪೆಕ್ಟರ್ ಪೂವಪ್ಪ ಎಚ್.ಎಂ., ಎಎಸ್‌ಐ ಪಿ. ಯೋಗೇಶ್ವರನ್, ಹೆಡ್ ಕಾನ್ಸ್ ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.
ನೀರುಮಾರ್ಗಕ್ಕೆ ರಾತ್ರಿ ಬಸ್ಸಿಲ್ಲಮಂಗಳೂರಿನಿಂದ ನೀರುಮಾರ್ಗಕ್ಕೆ ಹೋಗುವ ಬಸ್‌ಗಳಿಗೆ ರಾತ್ರಿ 9.30ರ ತನಕ ಪರ್ಮಿಟ್ ಇದ್ದರೂ ಸಂಜೆ 7.45ಕ್ಕೆ ಪ್ರಯಾಣ ಮೊಟಕುಗೊಳಿಸುತ್ತಿವೆ. ಇದರಿಂದ ರಾತ್ರಿ ವೇಳೆ ಮನೆಗೆ ಹೋಗುವ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ರವಿವಾರ ಟ್ರಿಪ್ ಕಟ್ ಮಾಡುತ್ತಾರೆ ಎಂದು ಓರ್ವ ನಾಗರಿಕರು ದೂರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಕೂಡಲೇ ಪರಿಶೀಲಿಸಿ ಸಂಬಂಧಪಟ್ಟ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸಿಪಿ ಮಂಜುನಾಥ್ ಶೆಟ್ಟಿ ಅವರಿಗೆ ಸೂಚಿಸಿದರು.