Advertisement

ಇಂದ್ರಜಾಲ ವಿದ್ಯೆಗೆ ಅವಾಕ್ಕಾದ ಮಂಗ!

07:29 PM Feb 04, 2022 | Team Udayavani |

ಮೆಕ್ಸಿಕೋ: ಮೃಗಾಲಯಕ್ಕೆ ಭೇಟಿ ಕೊಟ್ಟ ವ್ಯಕ್ತಿ ಪ್ರದರ್ಶಿಸಿದ ಇಂದ್ರಜಾಲ ತಂತ್ರವನ್ನು ಕಂಡು ಬೋನಿನಲ್ಲಿದ್ದ ಕೋತಿ , ಮನುಷ್ಯರಂತೆಯೇ ಅವಾಕ್ಕಾಗಿ ಸ್ಪಂದಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ವ್ಯಕ್ತಿಯ ಹೆಸರು ಮ್ಯಾಕ್ಸಿಮಿಲಿಯಾನೊ ಇಬಾರ್ರಾ. ಮೆಕ್ಸಿಕೋದಲ್ಲಿ ಚಪುಲ್ಟೆಕ್‌ ಮೃಗಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು, ಬಲಗೈನ ಹೆಬ್ಬೆರಳು ಹಾಗೂ ತೋರು ಬೆರಳಲ್ಲಿ ಎಲೆಯೊಂದನ್ನು ಹಿಡಿದು ಗಾಜಿನ ಪರದೆಯ ಬೋನಿನಲ್ಲಿರುವ ಕೋತಿಯೊಂದಕ್ಕೆ ತೋರಿಸುತ್ತಾರೆ.

ಆನಂತರ, ಎಡಗೈಯ್ಯನ್ನು ನಿಧಾನವಾಗಿ ಬಲಗೈ ಬಳಿಗೆ ತಂದು ಆ ಎಲೆಯನ್ನು ಕೋತಿಗೆ ಗೊತ್ತಿಲ್ಲದಂತೆ ಮಂಗಮಾಯ ಮಾಡುತ್ತಾರೆ. ಇದನ್ನು ಕಂಡ ಮಂಗ ಹೌಹಾರುತ್ತಾ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತದೆ.

ಇದನ್ನೂ ಓದಿ:ಶ್ರೀರಂಗಪಟ್ಟಣ :ತಾ.ಪಂ ಅಧಿಕಾರಿ, ಗ್ರಾ.ಪಂ.ಪಿಡಿಒ,ಅಧ್ಯಕ್ಷೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಮತ್ತೊಮ್ಮೆ ಖಾಲಿ ಬಲಗೈಯ್ಯನ್ನು ತಂದು ಎಡಗೈಯ್ಯಲ್ಲಿ ಬಚ್ಚಿಟ್ಟಿದ್ದ ಎಲೆಯನ್ನು ಇದ್ದಕ್ಕಿದ್ದಂತೆ ಪ್ರತ್ಯಕ್ಷ ಮಾಡುತ್ತಾರೆ. ಕೋತಿಯ ಮುಗ್ಧತೆ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next